ಮಂಗಳೂರು ; ಶ್ರೀ ವಿದ್ಯಾ ಗಣಪತಿ ಸೇವಾ ಟ್ರಸ್ಟ್ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಮಂಗಳೂರು ವಿಭಾಗ ಇದರ ವತಿಯಿಂದ ಮಂಗಳೂರಿನ ಕೆ.ಎಸ್.ಆರ್.ಟಿ.ಸಿ ಬಿಜೈ ಬಸ್ಸು ನಿಲ್ದಾಣದ ಅವರಣದಲ್ಲಿ ಐದು ದಿನಗಳ ಕಾಲ ಪೂಜಿಸಲ್ಪಟ್ಟ 34ನೇ ವರ್ಷದ ಶ್ರೀ ಗಣೇಶೋತ್ಸವ ಸಮಾರಂಭವು ಶುಕ್ರವಾರ ಸಂಜೆ ಶ್ರೀ ವಿದ್ಯಾ ಗಣಪತಿ ದೇವರ ವೈಭವದ ಶೋಭಾಯಾತ್ರೆಯೊಂದಿಗೆ ಸಂಪನ್ನಗೊಂಡಿತ್ತು.
ತಾಲೀಮು ಪ್ರದರ್ಶನ, ಸಿಡಿಮದ್ದು ಪ್ರಧರ್ಶನ ಹಾಗೂ ಇನ್ನಿತರ ಟ್ಯಾಬ್ಲೋಗಳೊಂದಿಗೆ ಬಿಜೈ ಕೆ.ಎಸ್.ಆರ್.ಟಿಸಿ ಬಸ್ ನಿಲ್ದಾಣದಿಂದ ಆರಂಭಗೊಂಡ ಶ್ರೀ ವಿದ್ಯಾ ಗಣಪತಿ ದೇವರ ವೈಭವದ ಶೋಭಾಯಾತ್ರೆಯು ಲಾಲ್ಭಾಗ್, ಸಿಟಿ ಕಾರ್ಪೋರೇಶನ್, ಹಿಂದಿ ಪ್ರಚಾರ ಸಮಿತಿ, ಮಣ್ಣಗುಡ್ಡ, ಗುರ್ಜಿ. ಆಳಕೆ,ನ್ಯೂಚಿತ್ರಾ ಮಾರ್ಗವಾಗಿ ಸಾಗಿ ರಥಭೀದಿಯಲ್ಲಿರುವ ಶ್ರೀ ಕುಡ್ತೇರಿ ಮಾಹಮ್ಮಾಯಿ ದೇವಸ್ಥಾನದ ಕೆರೆಯಲ್ಲಿ ವಿಸರ್ಜನೆಗೊಂಡಿತ್ತು.
Comments are closed.