ಮಂಗಳೂರು : ಮಂಗಳೂರಿನ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಅಗೋಷ್ಟು 17 ರಂದು ಮಂಗಳೂರಿನಿಂದ ಕಾಸರಗೋಡಿಗೆ ತೆರಳುತ್ತಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಲ್ಲಿ ಪ್ರಾಯಾಣಿಸಿದ್ದು ಟಿಕೇಟಿನಲ್ಲಿ ನಮೂದಿಸಿದಂತೆ ಉಪ್ಪಳ ಸಮೀಪದ ನಯಾಬಜಾರ್ ನಲ್ಲಿ ಇಳಿಯಬೇಕಿತ್ತು. ಆದರೆ ನಯಾಬಜಾರ್ ನಿಲ್ಢಾಣ ಬರುತ್ತಿದ್ದಂತೆಯೇ ಬಸ್ಸ್ ಕಂಡಕ್ಟರ್ ‘ಇಲ್ಲಿ ಸ್ಟಾಪ್ ಇಲ್ಲ’ ಎಂಬುದಾಗಿ ವಿದ್ಯಾರ್ಥಿನಿಗೆ ನಿರಾಕರಿಸಿದ್ದು ಆಕೆಯೊಂದಿಗೆ ಇತರ ಕೆಲವು ಪ್ರಯಾಣಿಕರು ಕಂಡಕ್ಟರಲ್ಲಿ ವಿನಂತಿಸಿದ ನಂತರವೇ ಟಿಕೇಟಲ್ಲಿ ನಮೂದಿಸಿದ ನಯಾಬಜಾರ್ ಸ್ಟಾಪ್ ನಿಂದ ದೂರ, ಮಂಗಲ್ಪಾಡಿ ಪಂಚಾಯತ್ ಕಚೇರಿ ಸಮೀಪ ಬಸ್ಸನ್ನು ನಿಲ್ಲಿಸಿ ಆಕೆಯನ್ನು ಇಳಿಸಲಾಯಿತು.
ಬಸ್ಸಿನರವ ಈ ಕೃತ್ಯದಿಂದ ಅನಾನುಕೂಲತೆಯನ್ನು ಅನುಭವಿಸಿದ ಆಕೆ ಕೂಡಲೇ ಆಗ ಊರಿನಲ್ಲಿದ್ದ ದಾಗಮಿಸಿದ ತನ್ನ ಮಾವ ಮುಂಬಯಿಯ ಪತ್ರಕರ್ತ, ಸಮಾಜಸೇವಕ ಈಶ್ವರ ಎಂ. ಐಲ್ ರಿಗೆ ತಿಳಿಸಿದ್ದು ಈಶ್ವರ ಎಂ. ಐಲ್ ಅವರು ಸಂಮಂಧಪಟ್ಟ ಕರ್ನಾಟಕ ರಾಜ್ಯ ಸಾರಿಗೆ ನಿಗಮಕ್ಕೆ ದೂರು ಸಲ್ಲಿಸಿದ್ದು, ಅದಕ್ಕೆ ಕ್ರಮ ಕೈಗೊಳ್ಳುದಾಗಿ ಅವರಿಗೆ ತಿಳಿಸಿದರು.
ಇದೀಗ ಮಂಗಳೂರಿನ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಿಭಾಗದ ನಿಯಂತ್ರಣಾಧಿಕಾರಿಯವರು ಪತ್ರ ಮುಖೇನ ಎಲ್ಲಾ ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳಿಗೆ ನಯಾಬಜಾರ್ ನಲ್ಲಿ ನಿಲುಗಡೆಗೆ ಆದೇಶ ನೀಡಿರುದಾಗಿ ತಿಳಿಸಿದ್ದು ನಿಗಮದ ಈ ನಿರ್ಥಾರವನ್ನು ಸ್ವಾಗತಿಸಲಾಗಿದ್ದರೂ ಸೆ. 11 ರಂದು ಸಂಜೆ ಸುಮಾರು 5.30 ರ ವೇಳೆ ಬಸ್ಸಲ್ಲಿ ಸ್ಥಳಾವಕಾಶ ಇದ್ದೂ ಕೂಡಾ ಪ್ರಯಾಣಿಕರು ಅದನ್ನು ನಿಲ್ಲಿಸಲು ಕೈತೋರಿಸಿದಂತೆ ಬಸ್ಸು ಕ್ರಮಾಂಕ KA 19 F 3437 ಬಂದಿಯೋಡ್ ನಲ್ಲಿ ನಿಲ್ಲಲಿಲ್ಲ ಎಂಬುದಾಗಿ ತಿಳಿದು ಬಂದಿದೆ.
Comments are closed.