Photo: Ashok Belman
ದುಬೈ: ಇದೇ ಬರುವ 2019 ಅಕ್ಟೋಬರ್ ತಿಂಗಳ 18 ರಂದು ದುಬಾಯಿಯ ಶೇಖ್ ರಶೀದ್ ಅಡಿಟೋರಿಯಂ, ಇಂಡಿಯನ್ ಸ್ಕೂಲ್ನಲ್ಲಿ ನಡೆಯಲಿರುವ ಪಟ್ಲ ಸಂಭ್ರಮ ದುಬಾಯಿ 2019 ಮತ್ತು ಯಕ್ಷಗಾನ ಅಭ್ಯಾಸ ತರಗತಿ ದುಬಾಯಿಯ ಕಲಾವಿದರು ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ನಡೆಯಲಿರುವ ಪೂರ್ವರಂಗ ಸಹಿತ ‘ಮಹಿಶವರ್ಧಿನಿ ಜಗಜ್ಜನನಿ’ ಯಕ್ಷಗಾನ ಪ್ರದರ್ಶನದ ಆಮಂತ್ರಣ ಮತ್ತು ಪ್ರವೇಶ ಪತ್ರ ಬಿಡುಗಡೆ ಇತ್ತೀಚೆಗೆ ಪ್ರಖ್ಯಾತ ಉದ್ಯಮಿಗಳು, ಕಲಾಪೋಷಕರು, ಕಲಾವಿದರ ಸಮ್ಮುಖದಲ್ಲಿ ದುಬಾಯಿ-ಗೀಸೈಸ್ನ ಫಾರ್ಚೂನ್ ಫ್ಲಾಝದಲ್ಲಿ ಸಂಭ್ರಮದಿಂದ ಸಂಪನ್ನಗೊಂಡಿತು.
ದುಬಾಯಿ ಪಟ್ಲ ಘಟಕದ ಅಧ್ಯಕ್ಷ ಸರ್ವೋತ್ತಮ ಶೆಟ್ಟರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಸೇರಿದ ಗಣ್ಯರೆಲ್ಲ ದೀಪ ಬೆಳಗಿ ಉದ್ಘಾಟಿಸಿದರು. ಘಟಕದ ಗೌರವಾಧ್ಯಕ್ಷರಾದ ವೀನಸ್ ಗ್ರೂಪ್ ಮಾಲ್ಹಕರಾದ ಶ್ರೀಯುತ ವಾಸುದೇವ ಭಟ್ ಪಟ್ಲ ಸಂಭ್ರಮಕ್ಕೆ ಶುಭ ಹಾರೈಸಿ, ಸರ್ವೋತ್ತಮ ಶೆಟ್ಟರ ಜೊತೆಗೂಡಿ ಆಮಂತ್ರಣ ಪತ್ರ ಬಡುಗಡೆ ಮಾಡಿದರು. ಶ್ರೀಮತಿ ಮೋಹಿನೀ ಡಿ. ಶೆಟ್ಟಿಗಾರ್ ಕಿನ್ನಿಗೋಳಿಯವರು ಪ್ರವೇಶ ಪತ್ರ ಬಿಡುಗಡೆ ಮಾಡಿದರು.
ಸರ್ವೋತ್ತಮ ಶೆಟ್ಟರು ಕಾರ್ಯಕ್ರಮದ ರೂಪುರೇಷೆಗಳನ್ನು ಸಭೆಯ ಮುಂಡಿಟ್ಟರು. ಫೋರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್ ಮಾಲ್ಹಕರಾದ ಶ್ರೀ ಪ್ರವೀಣ್ ಶೆಟ್ಟರು ಪ್ರಧಾನ ಅಭ್ಯಾಗತರಾಗಿ ಆಗಮಿಸಲಿರುವ ಪ್ರಸಿದ್ಧ ಚಲನಚಿತ್ರ ನಟ ಶ್ರೀ ಪುನೀತ್ ರಾಜು ಕುಮಾರ್ ದಂಪತಿಗಳು, ಪ್ರಸಿದ್ಧ ತುಳು ಚಲನಚಿತ್ರ, ರಂಗ ಕಲಾವಿದ ಶ್ರೀ ಅರವಿಂದ ಬೋಳಾರ್, ಎನ್.ಎಮ್.ಸಿ. ಸಂಸ್ಥೆಯ ಸ್ಥಾಪಕ, ಚೇಯರ್ ಮನ್ ಡಾ.ಬಿ.ಆರ್.ಶೆಟ್ಟಿ, ಮತ್ತು ಪ್ರಖ್ಯಾತ ಅನಿವಾಸಿ ಉದ್ಯಮಿ ಶ್ರೀ ರೊನಾಲ್ಡ್ ಕೊಲಸೊ ಇವರೆಲ್ಲರ ಮಾಹಿತಿಗಳನ್ನು ಸಭೆಗೆ ಒದಗಿಸಿದರು.
ಕಾರ್ಯಕ್ರಮದ ಸಂಪೂರ್ಣ ವಿವರಗಳನ್ನು ಸಂಘಟಕ ಶ್ರೀಯುತ ಕೊಟ್ಟಿಂಜ ದಿನೇಶ ಶೆಟ್ಟರು ಮತ್ತು ದುಬಾಯಿ ಯಕ್ಷಗಾನ ಅಭ್ಯಾಸ ತರಗತಿಯ ಗುರುಗಳಾದ ಶ್ರೀಯುತ ಶೇಖರ್ ರ್ ಡಿ. ಶೆಟ್ಟಿಗಾರ್ ಕಿನ್ನಿಗೋಳಿಯವರು ಸಭೆಯ ಮುಂದಿಟ್ಟರು.
ಅತಿಥಿಗಳಾಗಿ ಭಾಗವಹಿಸಿದ ಶ್ರೀಯುತ ಗುಣಶೀಲ ಶೆಟ್ಟಿ ಏಸ್ ಕ್ರೇನ್ಸ್, ದುಬಾಯಿ ಪದ್ಮಶಾಲಿ ಸಮುದಾಯದ ಅಧ್ಯಕ್ಷರಾದ ಶ್ರೀಯುತ ರವಿ ಶೆಟ್ಟಿಗಾರ್, ಶ್ರೀಯುತ ಬಾಲಕೃಷ್ಣ ಸಾಲಿಯಾನ್, ಶ್ರೀಯುತ ನೋವೆಲ್ ಅಲ್ಮೆಡ, ಶ್ರೀಯುತ ಲೊನಾಲ್ಡ್ ಡಿಸೋಜ, ದುಬಾಯಿ ಯಕ್ಷಗಾನ ಅಭ್ಯಾಸ ತರಗತಿಯ ಹಿರಿಯ ಹಿಮ್ಮೇಳ ಕಲಾವಿದರು-ಮಾರ್ಗದರ್ಶರೂ ಆದ ಶ್ರೀಯುತ ವೆಂಕಟೇಶ ಶಾಸ್ತ್ರಿ ಪುತ್ತಿಗೆ ಮೊದಲಾದವರು ಸಂಧರ್ಭೋಚಿತವಾಗಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಅಧ್ಯಕ್ಷ ಶ್ರೀಯುತ ಸರ್ವೋತ್ತಮ ಶೆಟ್ಟರು ದುಬಾಯಿಯ ಯಕ್ಷಪ್ರೇಮಿಗಳು, ಕಕಲಾಪೋಷಕರು, ದಾನಿಗಳೆಲ್ಲರು ಪ್ರೋತ್ಸಾಹ, ಸಲಹೆ , ಸಹಕಾರಗಳನ್ನು ನೀಡಬೇಕೆಂದು ಎಲ್ಲರನ್ನೂ ವಿನಂತಿಸಿಕೊಂಡರು. ಶ್ರೀಯುತ ರಾಜೇಶ್ ಕುತ್ತಾರು ಕಾರ್ಯಕ್ರಮ ನಿರ್ವಹಿಸಿದರು.
Comments are closed.