ಅಂತರಾಷ್ಟ್ರೀಯ

ಮುಸ್ಲಿಂ ರಾಷ್ಟ್ರದ ನೋಟಿನಲ್ಲಿ ಬಾದಾಮಿ ಚಾಲುಕ್ಯರ ಚಿತ್ರವನ್ನು ಹೋಲುವ ಗಣಪತಿ!

Pinterest LinkedIn Tumblr


ಜಕಾರ್ತ: ಭಾರತೀಯ ದೇವತೆಗಳಲ್ಲಿ ಮೊದಲ ಸ್ಥಾನ ಪಡೆದಿರುವ ಗಣೇಶ ಶೇ.80 ರಷ್ಟು ಹಿಂದೂಗಳಿರುವ ಭಾರತದ ನೋಟುಗಳಲ್ಲೇ ಸ್ಥಾನ ಪಡೆದಿಲ್ಲ. ಆದರೆ ಕಟ್ಟಾ ಮುಸ್ಲಿಂ ರಾಷ್ಟ್ರವೊಂದರ ನೋಟಿನಲ್ಲಿ ಗಣೇಶನ ಚಿತ್ರವಿದೆ. ಇದು ಅಚ್ಚರಿಯಾದರೂ ನಿಜ.

ಇಂಡೋನೇಷ್ಯಾದ 20 ಸಾವಿರ ರುಪಾಯಿ ನೋಟಿನ ಮೇಲೆ ಗಣೇಶನ ಚಿತ್ರವನ್ನು ಬಳಸಿಕೊಳ್ಳಲಾಗಿದೆ. ಇದು ಬಾದಾಮಿ ಚಾಲುಕ್ಯರ ಕಾಲದಲ್ಲಿನ ವಾತಾಪಿ ಗಣಪತಿಯನ್ನೇ ಹೋಲುತ್ತದೆ.

ಹಲವು ಶತಮಾನಗಳ ಹಿಂದೆ ಇಂಡೋನೇಷ್ಯಾದಲ್ಲಿ ಹಿಂದೂ ಸಂಪ್ರದಾಯ ಆಚರಣೆಯಲ್ಲಿತ್ತು. ಆ ಸಂಪ್ರದಾಯವನ್ನೂ ಅಲ್ಲಿ ಮುಂದುವರೆಸಿಕೊಂಡು ಬರಲಾಗಿದ್ದು, ಅಲ್ಲಿನ ಸರ್ಕಾರ 20 ಸಾವಿರ ರುಪಾಯಿ ನೋಟಿನ ಮೇಲೆ ಗಣಪತಿಗೆ ಸ್ಥಾನ ನೀಡಿದೆ.

ಇನ್ನೊಂದು ಮೂಲದ ಪ್ರಕಾರ ಇಂಡೋನೇಷ್ಯಾ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದ್ದಾಗ ಅಲ್ಲಿನ 20 ಸಾವಿರದ ನೋಟನ್ನು ಜಾರಿಗೆ ತರಲಾಯಿತು. ಆ ನೋಟಿನ ಮೇಲೆ ಗಣೇಶನ ಚಿತ್ರವನ್ನು ಮುದ್ರಿಸಲಾಗಿತ್ತು. ಇದಾದ ಬಳಿಕ ಅಲ್ಲಿನ ಅರ್ಥ ವ್ಯವಸ್ಥೆ ಹತೋಟಿಗೆ ಬಂತಂತೆ. ಹೀಗಾಗಿಯೇ ಅಲ್ಲಿನ ಸರ್ಕಾರ ಇಂದಿಗೂ ಸಹ ನೋಟಿನ ಮೇಲೆ ಗಣೇಶನ ಚಿತ್ರವನ್ನು ಬಳಸಿಕೊಂಡಿದೆ

ಮುದ್ರಿಸುತ್ತಿದೆ.ಇಂಡೋನೇಷ್ಯಾದಲ್ಲಿ ಗಣೇಶ ದೇವರನ್ನು ಕಲೆ, ವಿಜ್ಞಾನ ಮತ್ತು ಜ್ಞಾನದ ಅಧಿದೇವತೆ ಎಂದು ನಂಬಿದ್ದಾರೆ. ಈ ದೇಶದಲ್ಲಿ ಸುಮಾರು 87ರಷ್ಟು ಮುಸ್ಲಿಂ ಜನಸಂಖ್ಯೆ ಹೊಂದಿದ್ದರೆ ಹಿಂದೂಗಳು ಶೇ.3ರಷ್ಟಿದ್ದಾರೆ.

Comments are closed.