ಮಂಗಳೂರು : ಜನ ಮೆಚ್ಚುವ ಹಾಗೆ ಕೆಲಸ ಮಾಡಬೇಕು, ಮಾಧವ ಮೆಚ್ಚುವ ನಡೆ ನಮ್ಮದಾಗಬೇಕು .ಭಗವಂತನು ಕೆಲವು ಅವಕಾಶಗಳನ್ನು ಕೊಡುತ್ತಾನೆ ಅದನ್ನು ನಾವೇ ಜೀವನದಲ್ಲಿ ಅಳವಡಿಸಿಕೊಂಡು, ನಮ್ಮನು ನಾವೇ ಉದ್ಧರಿಸಿಕೊಳ್ಳಬೇಕು. ಭಗವದ್ಗೀತೆ ಯ ಸಾರದಂತೆ ನಮ್ಮ ಉದ್ಧಾರಕ್ಕೆ ನಾವೇ ಕಾರಣ. ನಿಜವಾದ ಅರ್ಥದಲ್ಲಿ ನಮಗೆ ನಾವೇ ಬಂಧುಗಳು. ನಾವು ಮಡಿದ ಸತ್ಕಾರ್ಯ ನಮ್ಮನ್ನು ಕಾಪಾಡುತ್ತದೆ. ನಾವು ಮಾಡಿದ ಕೆಟ್ಟ ಕೆಲಸ ನಮಗೆ ಕೆಡುಕು ಮಾಡುತ್ತದೆ.ನಮಗೆ ಸಿಗುವ ಸದಾವಕಾಶ ಸರಿಯಾಗಿ ಉಪಯೋಗಿಸಿಕೊಂಡು, ಬಧುಕನ್ನು ಹಸನಾಗಿಸಬೇಕು.
ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಶಿಲಾಮಯ ಸುತ್ತು ಪೌಳಿಯ ನಿರ್ಮಾಣದ ಕಾರ್ಯ ನಮ್ಮೆಲ್ಲರ ಜೀವಿತಾವಧಿಯಲ್ಲಿ ಆಗುತ್ತಿರುವುದು ನಿಜಕ್ಕೂ ಅಪೂರ್ವವಾದುದ್ದು ಎಂದು ಮಂಗಳೂರಿನ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನಮ್ ಸರಸ್ವತಿ ಪೀಠಾಧೀಶ್ವರ ಪರಮಪೂಜ್ಯ ಅನಂತಶ್ರೀ ವಿಭೂಷಿತ *ಕಾಳಹಸ್ತೇ೦ದ್ರ ಸರಸ್ವತೀಮಹಾಸ್ವಾಮಿ* ಗಳವರ ಶ್ರೀ ಕ್ಷೇತ್ರದ ಶಿಲಾಮಯ ಸುತ್ತುಪೌಳಿಯ *ಪಾದುಕಾನ್ಯಾಸ* ಸಮಾರಂಭದಲ್ಲಿ ತಮ್ಮ ಅನುಗ್ರಹ ಭಾಷಣದಲ್ಲಿ ತಿಳಿಸಿದರು.
ಬಿ ಸಿ ರೋಡಿನ ಅಪೂರ್ವ ಜ್ಯುವೆಲ್ಲರ್ಸ್ ನ ಮಾಲಕರಾದ ಬಿ ಸುನಿಲ್ ರವರು ಮುಖ್ಯ ಅತಿಥಿಯಾಗಿ ಆಗಮಿಸಿದರು.
ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಕೆ. ಕೇಶವ ಆಚಾರ್ಯ ಸಮಾರಂಭದ ಅಧ್ಯಕ್ಷತೆ ವಹಿಸಿದರು.
ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಗೌರವಸಲಹೆಗಾರರಾದ ಮುನಿಯಲ್ ದಾಮೋದರ ಆಚಾರ್ಯ, ಮೂರನೇ
ಮೊಕ್ತೇಸರರಾದ ಎ. ಲೋಕೇಶ್ ಆಚಾರ್ಯ ಬಿಜೈ , ಜೀರ್ಣೋದ್ದಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಮ. ವೆಂಕಟೇಶ್ ಆಚಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕ್ಷೇತ್ರದ ಎರಡನೇ ಮೊಕ್ತೇಸರರು ಎಂ ಸುಂದರ್ ಆಚಾರ್ಯ ಬೆಳುವಾಯಿ ಸ್ವಾಗತಿಸಿದರು, ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಸುಜೀರ್ ವಿನೋದ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಪಾದುಕಾನ್ಯಾಸದ ಧಾರ್ಮಿಕ ವಿಧಿಗಳನ್ನು ಕ್ಷೇತ್ರದ ಪ್ರಧಾನ ಅರ್ಚಕರಾದ ಬ್ರಹ್ಮಶ್ರೀ ಧನಂಜಯ ಪುರೋಹಿತರು ನಿರ್ವಹಿಸಿದರು. ಕಾರ್ಕಳದ ಶಿಲಾ ಶಿಲ್ಪಿ ಸತೀಶ್ ಆಚಾರ್ಯ, ವಾಸ್ತು ಶಿಲ್ಪಿಗಳಾದ ಪಯ್ಯನೂರು ಶಶಿಧರನ್, ಜೋಕಟ್ಟೆ ಪ್ರಭಾಕರ ಆಚಾರ್ಯ, ದಿನೇಶ್ ಪಡುಬಿದ್ರೆ ಹಾಗೂ ಶ್ರೀ ಕ್ಷೇತ್ರದ ಆಡಳಿತ ಮಂಡಳಿ, ಜೀರ್ಣೋದ್ಧಾರ ಸಮಿತಿ, ಶ್ರೀ ಕಾಳಿಕಾಂಬಾ ಸೇವಾ ಸಮಿತಿ, ವಿಶ್ವಬ್ರಾಹ್ಮಣ ಮಹಿಳಾ ಸಮಿತಿ ಸದಸ್ಯರು, ಶ್ರೀ ಕ್ಷೇತ್ರಕ್ಕೆ ಒಳ ಪಟ್ಟಿರುವ 8 ಪೇಟೆ 10 ಸಮಸ್ತರು ಭಕ್ತಾದಿಗಳು ಉಪಸ್ಥಿತರಿದ್ದರು.
Comments are closed.