ಮಂಗಳೂರು ಮಹಾನಗರ ಪಾಲಿಕೆಯ ಮರೋಳಿ ವಾರ್ಡಿನ ಜಯನಗರದಲ್ಲಿ 29 ಲಕ್ಷ ರೂಪಾಯಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಅವರು ನಿನ್ನೆ ಗುದ್ದಲಿಪೂಜೆ ನೆರವೇರಿಸಿದರು.
ಈ ವೇಳೆ ಪ್ರತಿಕ್ರಿಯಿಸಿದ ಅವರು, ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದೆ. ಸ್ಥಳೀಯ ನಿವಾಸಿಗಳ ಬೇಡಿಕೆಯಂತೆ ಈ ರಸ್ತೆಯನ್ನು 29 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣವಾಗುತ್ತಿದೆ ಎಂದರು.
ಕ್ಷೇತ್ರವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಿಕೊಂಡು ಮುಂಬರುವ ದಿನಗಳಲ್ಲಿ ಕುಂದು ಕೊರತೆಗಳಿಲ್ಲದಂತೆ ಮಾದರಿ ಕ್ಷೇತ್ರವಾಗಿ ರೂಪಿಸುತ್ತೇನೆ. ಜನರ ಆಶೋತ್ತರಗಳನ್ನು ಈಡೇರಿಸುವ ಸಂಕಲ್ಪದೊಂದಿಗೆ, ಸಾರ್ವಜನಿಕರ ಜೊತೆಯಲ್ಲೇ ಅಭಿವೃದ್ಧಿ ಕಾಮಗಾರಿಗಳು ನಡೆಯಲಿದೆ ಎಂದರು.
ಕಾರ್ಯಕ್ರಮದಲ್ಲಿ ಗರೋಡಿ ಬ್ರಹ್ಮ ಬೈದರ್ಕಳ ಕ್ಷೇತ್ರದ ಅಧ್ಯಕ್ಷ ರಾದ ಚಿತ್ತರಂಜನ್,ಬಿಜೆಪಿ ಮುಖಂಡರಾದ ರಮೇಶ್ ಕಂಡೆಟ್ಟು,ಭಾಸ್ಕರ ಚಂದ್ರಶೆಟ್ಟಿ, ವಸಂತ್ ಪೂಜಾರಿ,ಮಾಜಿ ಕಾರ್ಪೊರೇಟರ್ ಕೇಶವ ಮರೋಳಿ, ಬಿಜೆಪಿ ಮರೋಳಿ ವಾರ್ಡ್ ಅಧ್ಯಕ್ಷ ರಾದ ಜಗನ್ನಾಥ್ ದೊಡ್ಡಮನೆ, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಮರೋಳಿ, ಮಹಿಳಾಮೋರ್ಚಾದ ಅಧ್ಯಕ್ಷ ರಾದ ಸರಳ, ಅನಿತ ಅರುಣ್, ಮರೋಳಿ ಗ್ರಾಮ ಸಮಿತಿ ಅಧ್ಯಕ್ಷ ತೇಜಾಕ್ಷ ಸುವರ್ಣ, ಕೃಷ್ಣ, ಜನಾರ್ಧನ ದೇವಾಡಿಗ, ಕಿರಣ್, ರಂಜಿತ್, ಕಮಲಾಕ್ಷ, ಬಡಾವಣೆ ಪ್ರಮುಖರಾದ ವಿಜಯ ಪ್ರಸಾದ್ ಆಳ್ವ, ಎನ್.ಟಿ.ರೈ. ಜಯರಾಮ ಗೌಡ, ಶ್ರಿಧರ ಶೆಟ್ಟಿ ಪುಳಿಂಚ, ವಿಠಲ್ ರೈ, ಚಂದ್ರಕಾಂತ ಅತ್ತಾವರ ಮುಂತಾದವರು ಉಪಸ್ಥಿತರಿದ್ದರು.
Comments are closed.