ಕುಂದಾಪುರ: ಉಡುಪಿ ಜಿಲ್ಲೆಯ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಕೆದೂರು ರೈಲ್ವೆ ಟ್ರ್ಯಾಕ್ ಬಳಿ ಗುರುವಾರ ಮುಂಜಾನೆ ಛಿದ್ರಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಅಪರಿಚಿತ ಮಹಿಳೆಯ ಶವದ ಗುರುತು ಪತ್ತೆಯಾಗಿದೆ.
ಕೆದೂರು ಶಾಲೆ ಸಮೀಪದ ಒಳಗಿನಪಾಲು ಮನೆ ನಿವಾಸಿ ಗಿರಿಜಮ್ಮ ಶೆಟ್ಟಿ(72) ಆತ್ಮಹತ್ಯೆಗೆ ಶರಣಾದವರು.
ಗಿರಿಜಮ್ಮ ಅವರು ಅನಾರೋಗ್ಯದಿಂದ ಬಳಲುತ್ತಿದ್ದು ಇದರಿಂದ ಮಾನಸಿಕವಾಗಿ ನೊಂದಿದ್ದರು ಎನ್ನಲಾಗಿದೆ. ಇದೇ ಕೊರಗಿನಲ್ಲಿ ಅವರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪುತ್ರಿ ಕೋಟ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ಘಟನೆ ಏನು?
ಬುಧವಾರ ಮಧ್ಯರಾತ್ರಿ (1 ಗಂಟೆ ಆಸುಪಾಸು) ಸಮಯದಲ್ಲಿ ಮಂಗಳೂರಿನಿಂದ ಗೋವಾದತ್ತ ಸಾಗುವ ನೇತ್ರಾವತಿ ರೈಲು ತೆರಳಿದ ಬಳಿಕ ಆ ಭಾಗದಲ್ಲಿ ಶವ ಪತ್ತೆಯಾದಬಗ್ಗೆ ಟ್ರ್ಯಾಕ್ ಮೆನ್ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಂತೆಯೇ ಪೊಲೀಸರು ಸ್ಥಳಕ್ಕಾಗಮಿಸಿದ್ದು ಮುಖ ಸಹಿತ ಸಂಪೂರ್ಣ ದೇಹವು ಗುರುತಿಸಲಾಗದಷ್ಟರ ಮಟ್ಟಿಗೆ ಛಿದ್ರಗೊಂಡಿದ್ದ ದೇಹ ಪತ್ತ್ತೆಯಾಗಿದ್ದು ಪೊಲಿಸರು ಗುತು ಪತ್ತೆಗಾಗಿ ಹರಸಾಹಸಪಟ್ಟಿದ್ದರು.
(ವರದಿ- ಯೋಗೀಶ್ ಕುಂಭಾಸಿ)
ಇದನ್ನೂ ಓದಿರಿ- ಕೆದೂರು ರೈಲು ಹಳಿಯಲ್ಲಿ ಅಪರಿಚಿತ ಮಹಿಳೆಯ ಶವ ಛಿದ್ರಗೊಂಡ ಸ್ಥಿತಿಯಲ್ಲಿ ಪತ್ತೆ
Comments are closed.