ಕರಾವಳಿ

ಪ್ರತ್ಯೇಕ ಪ್ರಕರಣ- ಉಡುಪಿ ಜಿಲ್ಲೆಯಲ್ಲಿ ಇಬ್ಬರು ನಾಪತ್ತೆ

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಪ್ರತ್ಯೇಕ ಪ್ರಕರಣದಲ್ಲಿ  ಇಬ್ಬರು ನಾಪತ್ತೆಯಾಗಿರುವ ಬಗ್ಗೆ ಮಣಿಪಾಲ ಠಾಣೆಯಲ್ಲಿ 1 ಹಾಗೂ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ.

 

ನಿತೇಶ್
ಮಣಿಪಾಲ: ಉಡುಪಿ, ಅಲೆವೂರು ಗುಡ್ಡೆಯಂಗಡಿ ನಿವಾಸಿ ನಿತೇಶ್ (19) ಎಂಬುವವರು ಅಕ್ಟೋಬರ್ 11 ರಂದು ಕುಕ್ಕಿಕಟ್ಟೆಗೆ ಔಷಧಿ ತರಲು ಹೋಗಿ ಬರುವುದಾಗಿ ಹೇಳಿ ಹೋದವರು ಈತನಕ ಮನೆಗೆ ವಾಪಸು ಬಾರದೆ, ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿದ್ದು, 5 ಅಡಿ 6 ಇಂಚು ಎತ್ತರವಿದ್ದು, ಸಪೂರ ಶರೀರ ಹೊಂದಿದ್ದು, ಕನ್ನಡ, ತುಳು ಭಾಷೆ ಬಲ್ಲವರಾಗಿದ್ದು, ಇವರ ಪತ್ತೆಯಾದಲ್ಲಿ ಮಣಿಪಾಲ ಠಾಣೆ ದೂ.ಸಂಖ್ಯೆ: 0820-2570328, ಪೊಲೀಸ್ ನಿರೀಕ್ಷಕರು, ಮಣಿಪಾಲ ಠಾಣೆ ಮೊ.ಸಂಖ್ಯೆ: 9480805448, ಪೊಲೀಸ್ ಉಪ ನಿರೀಕ್ಷಕರು, ಮಣಿಪಾಲ ಠಾಣೆ ಮೊ.ನಂ: 9480805475 ಗೆ ಮಾಹಿತಿ ನೀಡುವಂತೆ ಮಣಿಪಾಲ ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಗಣೇಶ್ ಆಚಾರಿ
ಕುಂದಾಪುರ: ಕುಂದಾಪುರ ತಾಲೂಕು ಕೊರ್ಗಿ ಗ್ರಾಮದ ದಡ್ಡ ನರಿಕಲ್ಲು ನಿವಾಸಿ ಗಣೇಶ್ ಆಚಾರಿ (40) ಎಂಬುವವರು ಮರಕೆಲಸ ಮಾಡಿಕೊಂಡಿದ್ದು, ಸೆಪ್ಟಂಬರ್ 27 ರಂದು ಕೆಲಸದ ನಿಮಿತ್ತ ಕೋಟೇಶ್ವರಕ್ಕೆ ಹೋಗುವುದಾಗಿ ಮನೆಯಿಂದ ಹೋದವರು ಈತನಕ ಮನೆಗೆ ವಾಪಸು ಬಾರದೆ, ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿದ್ದು, 5 ಅಡಿ ಎತ್ತರವಿದ್ದು, ಗೋಧಿ ಮೈ ಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ, ಭಾಷೆ ಬಲ್ಲವರಾಗಿದ್ದು, ಇವರ ಪತ್ತೆಯಾದಲ್ಲಿ ಪೊಲೀಸ್ ಉಪ ನಿರೀಕ್ಷಕರು, ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ, ದೂ.ಸಂಖ್ಯೆ: 08254-237100, ಪೊಲೀಸ್ ವೃತ್ತ ನಿರೀಕ್ಷಕರು, ಕುಂದಾಪುರ ವೃತ್ತ, ದೂ.ಸಂಖ್ಯೆ: 08254-230880, ಉಡುಪಿ ಕಂಟ್ರೋಲ್ ರೂಂ: 0820-2526444 ಗೆ ಮಾಹಿತಿ ನೀಡುವಂತೆ ಕುಂದಾಪುರ ಗ್ರಾಮಾಂತರ ಪೊಲೀಸ್ ಉಪನಿರೀಕ್ಷಕರ ಪ್ರಕಟಣೆ ತಿಳಿಸಿದೆ.

Comments are closed.