ಅಂತರಾಷ್ಟ್ರೀಯ

ಪ್ರಿಯತಮನ 16ರ ಮಗನೊಂದಿಗೆ 25 ಬಾರಿ ದೈಹಿಕ ಸಂಬಂಧ ಬೆಳೆಸಿದ ಮಹಿಳೆಯ ಬಂಧನ

Pinterest LinkedIn Tumblr


ವಾಷಿಂಗ್ಟನ್: ಮಹಿಳೆಯೊಬ್ಬಳು ತನ್ನ ಪ್ರಿಯಕರನ 16 ವರ್ಷದ ಮಗನ ಜೊತೆ 25 ಬಾರಿ ದೈಹಿಕ ಸಂಬಂಧ ಬೆಳೆಸಿ ಅರೆಸ್ಟ್ ಆದ ಘಟನೆ ಅಮೆರಿಕಾದ ಫ್ಲೋರಿಡಾದಲ್ಲಿ ನಡೆದಿದೆ.

ವ್ಯಾಲೆರಿ ಎಸ್ಪೊಸಿಟೊ (37) ಅರೆಸ್ಟ್ ಆದ ಮಹಿಳೆ. ವ್ಯಾಲೆರಿಗೆ ಈಗಾಗಲೇ ಮದುವೆಯಾಗಿದ್ದು, 12 ವರ್ಷದ ಮಗು ಕೂಡ ಇದೆ. ಕಳೆದ 15 ತಿಂಗಳಿನಿಂದ ವ್ಯಾಲೆರಿ ತನ್ನ ಪ್ರಿಯಕರನ 16 ವರ್ಷದ ಮಗನ ಜೊತೆ ರಿಲೇಶಿನ್‍ಶಿಪ್‍ನಲ್ಲಿ ಇದ್ದಳು.

ಆರೋಪಿ ವ್ಯಾಲೆರಿ ಲೈಂಗಿಕ ಕಿರುಕುಳದಿಂದ ಬಳಲುತ್ತಿರುವ ಮಕ್ಕಳಿಗೆ ಹಣ ಸಂಗ್ರಹ ಮಾಡುವ ಕೆಲಸ ಮಾಡುತ್ತಿದ್ದಳು. ಅಲ್ಲದೆ ಚೇಂಬರ್ ಆಫ್ ಕಾಮರ್ಸ್ ಕಡೆಯಿಂದ ವ್ಯಾಲೆರಿಗೆ ‘ವಾಲೆಂಟಿಯರ್ ಆಫ್ ದಿ ಅವಾರ್ಡ್’ ಕೂಡ ದೊರೆತಿದೆ.

ಬಾಲಕನ ತಂದೆ ಹಾಗೂ ವ್ಯಾಲೆರಿಯ ಮಾಜಿ ಪ್ರಿಯಕರ ಈ ವಿಷಯ ಕೇಳಿ ಆಕೆಯ ವಿರುದ್ಧ ಆಕ್ರೋಶವನ್ನು ಹೊರಹಾಕಿದ್ದಾರೆ. ಸೆಕ್ಸ್ ಎಜುಕೇಶನ್‍ಗಾಗಿ ಆಕೆ ಈ ರೀತಿ ಮಾಡಿರಬಹುದು ಎಂದಿದ್ದಾರೆ. 16 ವರ್ಷದ ಬಾಲಕನಿಗೆ ಈಗ 17 ವರ್ಷವಾಗಿದ್ದು, ಜುಲೈ 2018ರಿಂದ ನಮ್ಮಿಬ್ಬರ ನಡುವೆ ಸಂಬಂಧ ಬೆಳೆದಿತ್ತು ಎಂದು ಪೊಲೀಸರಿಗೆ ತಿಳಿಸಿದ್ದಾನೆ.

ಪೊಲೀಸರು ವ್ಯಾಲೆರಿಯನ್ನು ಬಂಧಿಸಿದ್ದಾರೆ. ತನ್ನ ಪ್ರಿಯಕರ ಮನೆಯಲ್ಲಿ ಇಲ್ಲದ ಸಮಯದಲ್ಲಿ ವ್ಯಾಲೆರಿ ಬಾಲಕನ ಜೊತೆ ಗ್ಯಾರೇಜ್, ಕಾರಿನಲ್ಲಿ ಹೀಗೆ 25 ಬಾರಿ ದೈಹಿಕ ಸಂಬಂಧ ಬೆಳೆಸಿದ್ದಾಳೆ. ಅಲ್ಲದೆ ಬಾಲಕನಿಗೆ ಪೋರ್ನ್ ವಿಡಿಯೋ ಕೂಡ ಕಳುಹಿಸುತ್ತಿದ್ದಳು ಎಂದು ವರದಿಯಾಗಿದೆ.

ತನ್ನ ಪ್ರಿಯಕರನ ಜೊತೆ ಬ್ರೇಕಪ್ ಆಗುವವರೆಗೂ ವ್ಯಾಲೆರಿ ಬಾಲಕನ ಜೊತೆ ಸಂಬಂಧ ಬೆಳೆಸುತ್ತಿದ್ದಳು. ಬಳಿಕ ಪ್ರಿಯಕರನ ಜೊತೆ ಬ್ರೇಕಪ್ ಆದ ನಂತರ ಆಕೆ ತನ್ನ 12 ವರ್ಷದ ಮಗುವಿನ ಜೊತೆ ಮನೆ ಬಿಟ್ಟು ಹೋಗಿದ್ದಾಳೆ.

Comments are closed.