ಗಾಂಧಿನಗರ: ಪತಿಯೊಬ್ಬ ತನ್ನ ಪ್ರೇಯಸಿಯನ್ನು ಭೇಟಿ ಮಾಡಲು ಪತ್ನಿಯನ್ನು ಮನೆಯಲ್ಲಿಯೇ ಕೂಡಿ ಹಾಕಿದ ಘಟನೆ ಗುಜರಾತಿನ ಅಹಮದಾಬಾದ್‍ನಲ್ಲಿ ನಡೆದಿದೆ.
ಪತಿ ತನ್ನ ಪ್ರೇಯಸಿಯನ್ನು ಭೇಟಿ ಮಾಡಲು ಪತ್ನಿಯನ್ನು ಮನೆಯಲ್ಲಿಯೇ ಕೂಡಿ ಹಾಕಿ ಹೋಗಿದ್ದು, ಪತ್ನಿ ಒಂದು ಗಂಟೆಗಳ ಕಾಲ ಕಿರುಚುತ್ತಿದ್ದಳು. ಬಳಿಕ ರಸ್ತೆಯಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬ ಬಾಗಿಲಿಗೆ ಹಾಕಿದ ಬೀಗವನ್ನು ಒಡೆದಿದ್ದಾನೆ. ಈ ವೇಳೆ ಮಹಿಳೆ ಮನೆಯಿಂದ ಹೊರ ಬಂದಿದ್ದಾಳೆ.
ಮಹಿಳೆ ಮನೆಯಿಂದ ಹೊರಬಂದ ತಕ್ಷಣ ಪ್ರೇಯಸಿಯ ಮನೆಗೆ ಹೋಗಿದ್ದಾಳೆ. ಈ ವೇಳೆ ಇಬ್ಬರು ಜೊತೆಯಲ್ಲಿ ಇರುವುದನ್ನು ನೋಡಿದ ಮಹಿಳೆ ಮಣಿನಗರ ಪೊಲೀಸ್ ಠಾಣೆಗೆ ಹೋಗಿ ಪತಿಯ ವಿರುದ್ಧ ದೂರು ನೀಡಲು ಹೋಗಿದ್ದಳು. ಬಳಿಕ ಪೊಲೀಸರು ಖಾದಿಯಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಸೂಚಿಸಿದ್ದಾರೆ.
ಮಹಿಳೆಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಎಫ್‍ಐಆರ್ ನಲ್ಲಿ 16 ವರ್ಷದ ಹಿಂದೆ ಕುಟುಂಬಸ್ಥರ ಒಪ್ಪಿಗೆ ಮೆರಿಗೆ ನಾವಿಬ್ಬರು ಮದುವೆಯಾಗಿದ್ದೀವಿ. ಮದುವೆಯಾದ ನಂತರ ನಮ್ಮಿಬ್ಬರ ನಡುವೆ ಜಗಳವಾಗುತ್ತಿತ್ತು ಎಂದು ಉಲ್ಲೇಖಿಸಿದ್ದಾಳೆ.
ಭಾನುವಾರ ಸಂಜೆ ನನ್ನ ಪತಿ ತನ್ನ ಪ್ರೇಯಸಿಯನ್ನು ಭೇಟಿಯಾಗಲು ರೆಡಿಯಾಗುತ್ತಿದ್ದರು. ಆಗ ಅವರು ತನ್ನ ಪ್ರೇಯಸಿಯನ್ನು ಭೇಟಿಯಾಗಲು ಹೋಗುತ್ತಿದ್ದಾರೆ ಎಂದು ನನಗೆ ತಿಳಿಯಿತು. ನನ್ನ ಪತಿ ಮೂರು ವರ್ಷಗಳಿಂದ ಮತ್ತೊಬ್ಬ ಮಹಿಳೆ ಜೊತೆ ಅನೈತಿಕ ಸಂಬಂಧದಲ್ಲಿ ಇದ್ದಾರೆ ಎಂದು ಮಹಿಳೆ ತಿಳಿಸಿದ್ದಾಳೆ.
Comments are closed.