ಮನೋರಂಜನೆ

ಶ್ರೀಮುರಳಿ ಅಭಿನಯದ ಭರಾಟೆ ಐದು ದಿನಗಳಲ್ಲಿ 25 ಕೋಟಿ ಲೂಟಿ!

Pinterest LinkedIn Tumblr


ರೋರಿಂಗ್ ಸ್ಟಾರ್ ಶ್ರೀಮುರಳಿ, ‘ಕಿಸ್’ ಕ್ವೀನ್ ಶ್ರೀಲೀಲಾ ನಟಿಸಿರುವ ‘ಭರಾಟೆ’ಗೆ ಬಾಕ್ಸಾಫಿಸ್​ನಲ್ಲಿ ಭರ್ಜರಿ ಪ್ರತಿಕ್ರಿಯೆ ಸಿಗುತ್ತಿದೆ. ನಿರ್ದೇಶಕ ಚೇತನ್ ಕುಮಾರ್ ಮತ್ತೊಮ್ಮೆ ಗೆಲುವಿನ ನಗೆ ಬೀರಿದ್ದಾರೆ.

‘ಭರಾಟೆ’… ಅಕ್ಟೋಬರ್ 18ರ ಶುಭ ಶುಕ್ರವಾರದಂದು ರಾಜ್ಯಾದ್ಯಂತ ತೆರೆಗೆ ಅಪ್ಪಳಿಸಿದ ರೋರಿಂಗ್ ಸ್ಟಾರ್​ರ ಸಿನಿಮಾ. ಶ್ರೀಮುರಳಿ, ಶ್ರೀಲೀಲಾ ನಟಿಸಿರುವ ಆ್ಯಕ್ಷನ್ ಎಂಟರ್‍ಟೈನರ್. ಟೀಸರ್, ಟ್ರೈಲರ್ ಹಾಗೂ ಹಾಡುಗಳ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ‘ಭರಾಟೆ’, ರಿಲೀಸ್ ಆದ ಮೇಲೂ ಸಖತ್ ಸದ್ದು ಮಾಡುತ್ತಿದೆ.

ಹೌದು, ರಿಲೀಸ್ ಆದ ಮೊದಲ ದಿನವೇ ‘ಭರಾಟೆ’ ಬರೋಬ್ಬರಿ 8 ಕೋಟಿ 36 ಲಕ್ಷ ರೂಪಾಯಿ ಬಾಚಿಕೊಂಡಿತ್ತು. ನಂತರ ಶನಿವಾರ 6 ಕೋಟಿ 42 ಲಕ್ಷ ರೂಪಾಯಿ ಗಳಿಕೆ ಕಂಡರೆ, ಭಾನುವಾರ 8 ಕೋಟಿ 89 ಲಕ್ಷ ರೂಪಾಯಿ ದೋಚಿಕೊಂಡಿತ್ತು ‘ಭರಾಟೆ’. ಆ ಮೂಲಕ ಕೇವಲ ಮೂರೇ ದಿನಗಳಲ್ಲಿ 23 ಕೋಟಿ 67 ಲಕ್ಷ ರೂಪಾಯಿ ಒಟ್ಟು ಕಲೆಕ್ಷನ್ ಆಗಿತ್ತು.

ಇನ್ನು ಸೋಮವಾರದಿಂದ ವಾರ ಶುರು. ಕಲೆಕ್ಷನ್‍ಗೆ ಪೆಟ್ಟು ಗ್ಯಾರಂಟಿ ಅಂತಿದ್ದರೆ, ಅಂದೂ ಕೂಡ ‘ಭರಾಟೆ’ಯ ಓಟ ಕಡಿಮೆಯಾಗಿಲ್ಲ. ಸೋಮವಾರವೂ ನಿರೀಕ್ಷಿತ ಮಟ್ಟಕ್ಕಿಂತ ಕೊಂಚ ಹೆಚ್ಚೇ ಕಲೆಕ್ಷನ್ ಮಾಡಿಕೊಂಡಿರುವ ರೋರಿಂಗ್ ಸ್ಟಾರ್​ ಸಿನಿಮಾ, 25 ಕೋಟಿಯ ಗಡಿ ದಾಟಿದೆ.

ಆ ಮೂಲಕ ರೋರಿಂಗ್ ಸ್ಟಾರ್ ಶ್ರೀಮುರಳಿಯ ಸಿನಿ ಜೀವನದಲ್ಲೇ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾ ಅನ್ನೋ ದಾಖಲೆ ಮಾಡಿದೆ. ಜೊತೆಗೆ ನಿರ್ದೇಶಕ ಚೇತನ್ ಕುಮಾರ್ ‘ಬಹದ್ದೂರ್’ ಹಾಗೂ ‘ಭರ್ಜರಿ’ ಚಿತ್ರಗಳ ಬಳಿಕ ‘ಭರಾಟೆ’ ಮೂಲಕ ಮತ್ತೊಮ್ಮೆ 25 ಕೋಟಿ ಕ್ಲಬ್‍ಗೆ ಕ್ಲಾಸ್ ಆ್ಯಂಡ್ ಮಾಸ್‍ ಆಗಿ ಎಂಟ್ರಿ ಕೊಟ್ಟು ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.

ಇನ್ನು ‘ಭರಾಟೆ’ಯ ಬಳಿಕ ರೋರಿಂಗ್ ಸ್ಟಾರ್ ‘ಮದಗಜ’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಚೇತನ್ ಪವರ್​ಸ್ಟಾರ್​ ಪುನೀತ್ ರಾಜ್‍ಕುಮಾರ್ ಅವರ ‘ಜೇಮ್ಸ್’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.

Comments are closed.