ಕರಾವಳಿ

ಕ್ಷೌರಿಕರಿರು ಮಂಗಳವಾರ ಕೇಶಮುಂಡನೆ ಮಾಡುವುದಿಲ್ಲ, ಏಕೆ ಗೋತ್ತೆ..?

Pinterest LinkedIn Tumblr

ಕ್ಷೌರಿಕರಿಗೆ ಮಂಗಳವಾರದಂದು ರಜೆ ಏಕೆ ಗೋತ್ತೆ …?. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಮಂಗಳವಾರ ಕುಜ ಅಥವಾ ಮಂಗಳ ಗ್ರಹ ಅಧಿಪತ್ಯದಲ್ಲಿದ್ದು ಇದು ಅಪಶಕುನವಾಗಿದೆ. ಅದುದರಿಂದ ಸಾಮಾನ್ಯ ಜನರಿಗೆ ಅಗಲಿ, ಕ್ಷೌರಿಕರಿಗಾಗಲಿ ತಾವೇಕೆ ಮಂಗಳವಾರವೇ ರಜೆ ತೆಗೆದುಕೊಳ್ಳುತ್ತೇವೆ ಎಂದು ಗೊತ್ತಿರುವುದಿಲ್ಲ. ಆದರೆ ನೂರಾರು ವರ್ಷಗಳಿಂದ ಈ ನಂಬಿಕೆ ಭಾರತೀಯರಲ್ಲಿ ಬೆಳೆದು ಬಂದಿರುವುದು ಮಾತ್ರ ಸತ್ಯವಾದರಿಂದ ಅದನ್ನೇ ಪಾಲಿಸಿಕೊಂಡು ಬಂದಿರುತ್ತಾರೆ.

ಒಂದು ನಂಬಿಕೆಯ ಪ್ರಕಾರ ಮನುಷ್ಯರ ದೇಹದ ಶಕ್ತಿಯ ಒಂದು ಭಾಗ ಕೂದಲಿನಲ್ಲಿ ಕೇಂದ್ರೀಕೃತವಾಗಿದ್ದು ಕೇಶವನ್ನು ಕತ್ತರಿಸಿಕೊಳ್ಳುವುದರಿಂದ ದೇಹದ ಶಕ್ತಿ ನಷ್ಟವಾಗಿ ಕುಜನ ಪ್ರಭಾವ ಬಹಳವೇ ಆಗುತ್ತದೆ. ಮಂಗಳವಾರವೇ ಏಕೆ ಎಂಬ ಪ್ರಶ್ನೆಗೆ ಯಾರಲ್ಲಿಯೂ ಸ್ಪಷ್ಟವಾದ ಉತ್ತರ ದೊರಕುವುದಿಲ್ಲ. ಇದಕ್ಕೆ ಕಾರಣಗಳೇನು ಎಂಬುದನ್ನು ಕೆಳಗೆ ನೀಡಲಾಗಿದೆ.

ಮಂಗಳವಾರ ದುರ್ಗೆ ಮತ್ತು ಲಕ್ಷ್ಮಿಯರ ದಿನವಾದ ಕಾರಣ ಭಾರತದ ಹಲವು ರಾಜ್ಯಗಳಲ್ಲಿ ಹಣಕಾಸಿನ ವಹಿವಾಟು, ಅಂದರೆ ಹಣ ಹೊರಹೋಗುವ ಯಾವುದೇ ವ್ಯವಹಾರವನ್ನು ಮಾಡುವುದಿಲ್ಲ. ಮಂಗಳವಾರ ಹಣದ ದೇವಿಯಾದ ಲಕ್ಷ್ಮಿ ಮನೆಯಿಂದ ಹೊರಹೋದರೆ ಮತ್ತೆ ಮನೆಗೆ ಬರುವುದಿಲ್ಲ ಎಂಬ ನಂಬಿಕೆಯ ಕಾರಣ ವ್ಯಾಪಾರ ಕಡಿಮೆ ಇರುತ್ತದೆ. ಕೇಶಮುಂಡನದಿಂದ ದುರ್ಗೆ ಅಪ್ರಸನ್ನಳಾಗುತ್ತಾಳೆ ಎಂದೂ ಕೆಲವರು ನಂಬುತ್ತಾರೆ. ಮಂಗಳವಾರ ಆದಾಯದ ದಿನ ಮನೆಯಲ್ಲಿ ಲಕ್ಷ್ಮಿ ನೆಲೆಸಿರಬೇಕಾದರೆ ಮಂಗಳವಾರವನ್ನು ಆದಾಯದ ದಿನವನ್ನಾಗಿಸಬೇಕೇ ಹೊರತು ಖರ್ಚಿನ ದಿನವನ್ನಾಗಿ ಅಲ್ಲ ಎಂದು ಭಕ್ತರು ನಂಬುತ್ತಾರೆ.

ಮಂಗಳವಾರ ಮನೆಯ ಕಸವನ್ನು ಎಸೆಯುವುದಿಲ್ಲ. ಕ್ಷೌರದ ಮೂಲಕ ಮುಖದ ಸ್ವಚ್ಛತೆ ಬಿಡಿ, ಮನೆಯ ಸ್ವಚ್ಛತೆಯನ್ನು ಮಾಡಿದರೂ ಕಸವನ್ನು ಎಸೆಯುವುದಿಲ್ಲ. ಮನೆಯಲ್ಲಿ ಸಂಗ್ರಹವಾಗಿದ್ದ ಕಸವನ್ನು ಮೂಲೆಯಲ್ಲಿಯೇ ಇಟ್ಟು ಮರುದಿನ ಎಸೆಯುತ್ತಾರೆ. ಮನೆಯ ಕಸವನ್ನು ಎಸೆಯುವುದಿಲ್ಲ ಅಲ್ಲದೇ ಈ ಸ್ವಚ್ಛತೆ ಕೇವಲ ಮೇಲುಮೇಲಿಂದ ಆಗಿರುತ್ತದೆಯೇ ಹೊರತು ಜೇಡರ ಬಲೆ ಮೊದಲಾದವುಗಳನ್ನು ತೆಗೆಯಲಾಗುವುದಿಲ್ಲ. ಮಂಗಳವಾರದಂದು ಅನಿವಾರ್ಯವಲ್ಲದ ಖರ್ಚು ಮಾಡುವುದು, ಕಸ ಎಸೆಯುವುದು, ಕೂದಲು ಕತ್ತರಿಸುವುದು, ದಾನ ನೀಡುವುದು, ಮನೆಯ ವಸ್ತುಗಳನ್ನು ಹೊರಗೆ ನೀಡುವುದು ಮೊದಲಾದವು ಅಪಶಕುನ ಎಂದು ಭಾರತದ ಬಹಳಷ್ಟು ಕಡೆ ನಂಬಲಾಗಿದೆ.

ಮಂಗಳವಾರದ ಕೇಶಮುಂಡನದಿಂದ ಆಯಸ್ಸಿನಲ್ಲಿ ಕಡಿತ:
ಮಂಗಳವಾರದ ಕೇಶಮುಂಡನದಿಂದ ಆಯಸ್ಸಿನಲ್ಲಿ ಕಡಿತ ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ಪ್ರಕಾರ ಮಂಗಳವಾರದಂದು ಕೇಶಮುಂಡನ ಮಾಡಿಸಿಕೊಂಡವರ ಆಯಸ್ಸಿನಲ್ಲಿ ಎಂಟು ತಿಂಗಳು ಕಡಿಮೆಯಾಗುತ್ತದೆ.
ಮಾನವ ದೇಹದಲ್ಲಿ ಕುಜನು ಕೇಶ ಮತ್ತು ರಕ್ತದಲ್ಲಿ ವಿರಾಜಮಾನನಾಗಿದ್ದು ಮಂಗಳವಾರದ ಕೇಶಮುಂಡನ ಮತ್ತು ಗಡ್ಡ ತೆಗೆಯುವುದರಿಂದ ರಕ್ತಸಂಬಂಧಿ ಕಾಯಿಲೆಗಳು ಎದುರಾಗುತ್ತವೆ ಎಂಬ ನಂಬಿಕೆಯೂ ಇದೆ. ಕುಜನ ಮೇಲೆ ಋಣಾತ್ಮಕ ಪರಿಣಾಮ ಕೆಲವು ಜ್ಯೋತಿಷಿಗಳ ಪ್ರಕಾರ ಕೂದಲ ಬಣ್ಣ ಕಪ್ಪಗಾಗಿರುವುದರಿಂದ ಕಪ್ಪುಬಣ್ಣದ ಅಧಿಪತಿಯಾದ ಶನಿಯೂ ನಮ್ಮ ಕೂದಲುಗಳ ಅಧಿಪತಿಯಾಗಿದ್ದಾನೆ.

ಶನಿಯು ಕುಜನ ಪ್ರಭಾವವನ್ನು ತಡೆದು ಕುಜನ ಋಣಾತ್ಮಕ ಪರಿಣಾಮವನ್ನು ಕಡಿಮೆಗೊಳಿಸುತ್ತಾನೆ. ಕುಜನ ಮೇಲೆ ಋಣಾತ್ಮಕ ಪರಿಣಾಮ ಆದರೆ ಮಂಗಳವಾರ ಕೂದಲು ಕತ್ತರಿಸುವುದರಿಂದ ಶನಿಯ ರಕ್ಷಣೆಯನ್ನು ಕಡಿಮೆ ಮಾಡಿದಂತಾಗಿ ಕುಜನ ಪ್ರಭಾವ ಹೆಚ್ಚಾಗುತ್ತದೆ. ಆದರೆ ಈ ವಿಷಯವನ್ನು ದೃಢೀಕರಿಸಲು ಯಾವುದೇ ಪುರಾವೆ ಇಲ್ಲದ ಕಾರಣ ಈ ಮಾಹಿತಿಯನ್ನು ಖಡಾಖಂಡಿತವೆಂದು ಪರಿಗಣಿಸಲು ಸಾಧ್ಯವಿಲ್ಲ.
ಹೇಗೆಂದರೆ ಹಿರಿಯರು ತಮ್ಮ ಹಿರಿಯರಿಂದ ನಡೆಸಿಕೊಂಡು ಬಂದ ಪದ್ಧತಿಯ ಪ್ರಕಾರ ಮಂಗಳವಾರದಂದು ಕೇಶಮುಂಡನ ಮಾಡದೇ ಇರುವ ನಂಬಿಕೆಯನ್ನು ಕಿರಿಯರು ಉಲ್ಲಂಘಿಸಿದಂತಾಗುತ್ತದೆ.

Comments are closed.