ಕರಾವಳಿ

ಉಡುಪಿ ಜಿಲ್ಲಾದ್ಯಂತ ಬಾರೀ ಮಳೆ: ಭತ್ತದ ಫಸಲಿಗೆ ಸಮಸ್ಯೆ ಕೊಟ್ಟ ವರುಣ!

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲೆ ಹಾಗೂ ಉತ್ತರ ಕನ್ನಡ ಜಿಲ್ಲಾದ್ಯಂತ ಬಾರೀ ಮಳೆಯಾಗುತ್ತಿದ್ದು ಗುರುವಾರ ಮುಂಜಾನೆ ಆರಂಭಗೊಂಡ ವರುಣನ ಆರ್ಭಟ ಸಂಜೆಯವರೆಗೂ ಮುಂದುವರೆದಿದೆ.

ಹವಾಮಾನ ಇಲಾಖೆ ಇಂದಿನಿಂದ ಮೂರು ದಿನಗಳ ಕಾಲ ರೆಡ್ ಅಲರ್ಟ್ ಅನ್ನು ಎರಡು ದಿನಗಳ ಹಿಂದೆಯೇ ಘೋಷಿಸಿದ್ದು ಜನರು ಅಂದುಕೊಂಡ ಪ್ರಮಾಣಕ್ಕಿಂತಲೂ ಜಾಸ್ಥಿಯೇ ಮಳೆಯಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ವಿವಿದೆಡೆ ಕ್ರತಕ ಕೆರೆ ನಿರ್ಮಾಣಗೊಂಡಿದ್ದು ವಾಹನ ಸವಾರರು ಪರದಾಡುವಂತಾಗಿದೆ.

ರೈತರಲ್ಲಿ ಆತಂಕ!
ಈ ಬಾರಿ ನಿರ್ಧಿಷ್ಟ ಸಮಯಕ್ಕಿಂತ ತಡವಾಗಿ ಮಳೆ ಬಂದಿದ್ದರೂ ಕೂಡ ಮದ್ಯಂತರದಲ್ಲಿ ಉತ್ತಮ ಮಳೆಯಾಗಿದ್ದ ಕಾರಣ ಕರಾವಳಿ ಭಾಗದಲ್ಲಿ ಭತ್ತದ ಪಸಲು ಒಳ್ಳೆಯದ್ದಾಗಿಯೇ ಇತ್ತು. ಸದ್ಯ ಭತ್ತ ಕಟಾವು ಸಮಯ ಬಂದಿದ್ದು ಮಳೆರಾಯನ ಆರ್ಭಟಕ್ಕೆ ಭತ್ತ ಕಟಾವು ಹಿನ್ನಡೆಯಾಗುವುದು ಒಂದೆಡೆಯಾದರೆ ಫಸಲು ಹಾಳಾಗುವ ಭೀತಿಯಲ್ಲಿ ರೈತರಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಬೆಳಗ್ಗೆಯಿಂದಲೇ ಧಾರಾಕಾರ ಮಳೆಯಾಗಿದ್ದು, ಬಿಡುವಿಲ್ಲದೆಯೇ ಕುಂದಾಪುರ, ಬೈಂದೂರು, ಕಾರ್ಕಳ, ಹೆಬ್ರಿ, ಬ್ರಹ್ಮಾವರ, ಕೋಟ, ಹಿರಿಯಡ್ಕ, ಪಡುಬಿದ್ರಿ, ಕಾಪು, ಕೊಲ್ಲೂರು, ಸಿದ್ದಾಪುರ ಭಾಗದಲ್ಲಿ ಮಳೆಯಾಗಿದೆ. ಇದರಿಂದ ಇಡೀ ದಿನ ಜನ ಜೀವನ ಅಸ್ತವ್ಯಸ್ಥವಾಗಿತ್ತು. ಶುಕ್ರವಾರವೂ ಕೂಡ ವಿಪರೀತ ಮಳೆಯಾಗುವ ಎಲ್ಲಾ ಮುನ್ಸೂಚನೆಯಿದ್ದು ಹವಮಾನ ಇಲಾಖೆಯ ಸೂಚನೆಯಿಂದ ರೆಡ್ ಅಲರ್ಟ್ ಜಾರಿಯಲ್ಲಿರಲಿದೆ.

Comments are closed.