ವೆಲ್ಲೂರ್: ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ ನಳಿನಿ ಶ್ರೀಹರನ್ ಅವರು ಶನಿವಾರದಿಂದ ವೆಲ್ಲೂರು ಮಹಿಳಾ ಜೈಲಿನೊಳಗಿಂದ ಉಪವಾಸ ಸತ್ಯಾಗ್ರಹ ಶುರು ಮಾಡಿದ್ದಾರೆ.
ಜೈಲು ಅಧಿಕಾರಿಗಳಿಗೆ ಅಪರಾಧಿ ನಳಿನಿ ಶ್ರೀಹರನ್ ಅವರು ಬರೆದಿರುವ ಪತ್ರದಲ್ಲಿ ತಾನು ಮತ್ತು ತನ್ನ ಪತಿ ಮುರುಗನ್ ಕಳೆದ 28 ವರ್ಷಗಳಿಂದ ಜೈಲಿನೊಳಗೆ ಇದ್ದು ನಮ್ಮನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಅವರು ಒತ್ತಾಯಿಸಿದ್ದಾರೆ. ಇದೇ ವೇಳೆ ಅವರು ನನ್ನ ಶೀಘ್ರ ಬಿಡುಗಡೆ ಮಾಡುವಂತೆ ಕೋರಿ ರಾಜ್ಯ ಸರ್ಕಾರಕ್ಕೆ ಅನೇಕ ಅರ್ಜಿಗಳನ್ನು ನೀಡಿದ್ದೇನೆ ಅಂತ ಅವರು ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
ಕಳೆದ ಜುಲೈ 25ರಂದು 30 ದಿನಗಳ ಪೆರೋಲ್ ಮೇಲೆ ನಳಿನಿ ಕೊನೆಯದಾಗಿ ಬಿಡುಗಡೆಯಾಗಿದ್ದರು. ಆದರೆ, ಪೆರೋಲ್ 51 ದಿನಗಳವರೆಗೆ ವಿಸ್ತರಣೆಗೊಂಡು ಸೆಪ್ಟೆಂಬರ್ 15 ರಂದು ನಳಿನಿ ಮತ್ತೆ ಜೈಲು ಸೇರಿದ್ದರು. 2016 ರಲ್ಲಿ, ತನ್ನ ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವರಿಗೆ 12 ಗಂಟೆಗಳ ಪೆರೋಲ್ ನೀಡಲಾಯಿತು. ನಳಿನಿಯವರ ಪುತ್ರಿ ಚರಿತ್ರಾ ಶ್ರೀಹರನ್ ಜೈಲಿನಲ್ಲಿ ಜನಿಸಿದ್ದು, ಪ್ರಸ್ತುತ ಲಂಡನ್‌ನಲ್ಲಿ ವೈದ್ಯಕೀಯ ವೈದ್ಯರಾಗಿದ್ದಾರೆ.
Comments are closed.