ಕರಾವಳಿ

ಕ್ರೀಡಾ ಅಂಕಣಕಾರ ಎಸ್.ಜಗದೀಶ್ಚಂದ್ರ ಅಂಚನ್ ಗೆ ‘ನಮ್ಮ ಕುಡ್ಲ ಸಾಧಕ ಪ್ರಶಸ್ತಿ ‘

Pinterest LinkedIn Tumblr

ಮಂಗಳೂರು. ಜಿಲ್ಲೆಯ ತುಳು ವಾರ್ತಾವಾಹಿನಿ ‘ ನಮ್ಮ ಕುಡ್ಲ ‘ ದೀಪಾವಳಿ ಹಬ್ಬದ ಪ್ರಯುಕ್ತ ಹಮ್ಮಿಕೊಂಡ ಗೂಡುದೀಪ ಪಂಥ -2019ರ ಸಮಾರೋಪ ಸಮಾರಂಭದಲ್ಲಿ ಕ್ರೀಡಾ ಅಂಕಣಕಾರ ಶ್ರೀ ಎಸ್.ಜಗದೀಶ್ಚಂದ್ರ ಅಂಚನ್ ಸೂಟರ್ ಪೇಟೆ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರಿಗೆ ‘ ನಮ್ಮ ಕುಡ್ಲ ಸಾಧಕ ಪ್ರಶಸ್ತಿ’ ಯನ್ನು ಪ್ರದಾನ ಮಾಡಲಾಯಿತು.

ಕ್ರೀಡಾ ಅಂಕಣಕಾರರಾಗಿ ಸುಮಾರು 25 ವರ್ಷಗಳಿಂದ ಪತ್ರಿಕಾರಂಗದಲ್ಲಿ ಗುರುತಿಸಿ ಕೊಂಡಿರುವ ಶ್ರೀ ಎಸ್.ಜಗದೀಶ್ಚಂದ್ರ ಅಂಚನ್ , ಕರ್ನಾಟಕ ಜಾನಪದ ಲೋಕ ರಾಜ್ಯ ಪ್ರಶಸ್ತಿ ಸೇರಿದಂತೆ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳಿಂದ ಪುರಸ್ಕೃತರಾಗಿರುವುದನ್ನು ಪರಿಗಣಿಸಿ ‘ ನಮ್ಮ ಕುಡ್ಲ ಸಾಧಕ ಪ್ರಶಸ್ತಿ ‘ ಗೆ ಆಯ್ಕೆ ಮಾಡಲಾಗಿತ್ತು.

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶ್ರೀ ಮಹಾಲಕ್ಷ್ಮಿ ಕ್ಷೇತ್ರ , ಶ್ರೀಧಾಮ ಮಾಣಿಲದ ಶ್ರೀ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ , ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕರಾದ ಶ್ರೀ ಅನಂತಪದ್ಮನಾಭ ಅಸ್ರಣ್ಣರು ಹಾಗೂ ಎನ್ ಎಂ ಪಿ ಟಿ ಅಧ್ಯಕ್ಷರಾದ ಶ್ರೀ ವೆಂಕಟರಮಣ ಅಕ್ಕರಾಜು ಇವರಿಂದ ಶ್ರೀ ಎಸ್ .ಜಗದೀಶ್ಚಂದ್ರ ಅಂಚನ್ ನಮ್ಮ ಕುಡ್ಲ ಸಾಧಕ ಪ್ರಶಸ್ತಿಯನ್ನು ಸ್ವೀಕರಿಸಿಕೊಂಡರು.

ಈ ಸಂದರ್ಭದಲ್ಲಿ ನಮ್ಮ ಕುಡ್ಲ ವಾರ್ತಾವಾಹಿನಿಯ ಶ್ರೀ ಹರೀಶ್ ಬಿ. ಕರ್ಕೇರ, ಶ್ರೀ ಲೀಲಾಕ್ಷ ಬಿ .ಕರ್ಕೇರ , ಚಾರ್ಟೇಡ್ ಅಕೌಂಟೆಂಟ್ ಶ್ರೀ ಸಿ.ಎ .ಎಸ್. ಎಸ್. ನಾಯಕ್ , ಶ್ರೀ ಲಯನ್ ಕಿಶೋರ್ ಡಿ.ಶೆಟ್ಟಿ , ಶ್ರೀ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷರಾದ ಶ್ರೀ ಎಚ್.ಎಸ್. ಸಾಯಿರಾಂ , ಕೋಶಾಧಿಕಾರಿ ಶ್ರೀ ಪದ್ಮರಾಜ್ ಆರ್, ಆಡ್ವಕೇಟ್ ಮೊದಲಾದವರು ಉಪಸ್ಥಿತರಿದ್ದರು.

Comments are closed.