ಮಂಗಳೂರು : ರಾಷ್ಟ್ರೀಯ ವಿಶ್ವಬ್ರಾಹ್ಮಣ ಸಮಾಜೋದ್ಧಾರಕ ಸಭಾ (ರಿ ) ಮಂಗಳೂರು ಇದರ ವತಿಯಿಂದ 2019-2020ನೇ ಸಾಲಿನ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ 01-11-2019 ಶುಕ್ರವಾರ ಪಟ್ಟೆ ಲಿಂಗಪ್ಪಾಚಾರ್ಯ ಕಲ್ಯಾಣ ಮಂಟಪ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನ ರಥಬೀದಿ ಮಂಗಳೂರು ಇಲ್ಲಿ ಜರಗಿತು.
ಮುಖ್ಯ ಅಥಿತಿಗಳಾಗಿ ರೋ| ಪ್ರೋ| ರಾಧಾಕೃಷ್ಣ ಆಗಮಿಸಿ ವಿಶ್ವ ಬ್ರಾಹ್ಮಣ ಸಮಾಜದಲ್ಲೇ ಅತ್ಯಂತ ಹಿರಿದಾದ ಸಂಸ್ಥೆ ರಾಷ್ಟೀಯ ವಿಶ್ವಬ್ರಾಹ್ಮಣ ಸಮಾಜದದ ಚಟುವಟಿಕೆಗಳನ್ನು ಶ್ಲಾಘಿಸಿದರು.
ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನವು ವಿದ್ಯಾಭ್ಯಾಸಕ್ಕೆ ಉಪಯೋಗವಾಗಲಿ ಸಮಾಜದಲ್ಲಿ ಮುಂದೊಂದುದಿನ ಆದರ್ಶ ವ್ಯಕ್ತಿಯಾಗಿ ಬಳಲಿ ಎಂದು ಹೇಳಿದರು.
ಇನ್ನೋರ್ವ ಮುಖ್ಯ ಅತಿಥಿಯಾಗಿ ಎಂ ಪ್ರಶಾಂತ್ ಶೇಟ್ ಪಾಲುದಾರರು ಎಸ್ ಎಲ್ ಶೇಟ್ ಜ್ಯುವೆಲ್ಲರ್ಸ್ & ಡೈಮಂಡ್ ಹೌಸ್ ಮಂಗಳೂರು ಆಗಮಿಸಿದ್ದರು.
ಇಂಜಿನಿಯರಿಂಗ್, ಸ್ನಾತಕೋತ್ತರ, ಡಿಪ್ಲೋಮ ಮಕ್ಕಳಿಗೆ ಸುಮಾರು ಎರಡು ಲಕ್ಷಕ್ಕೂ ಮಿಕ್ಕಿದ ಮೊತ್ತವನ್ನು ನೀಡಲಾಯಿತು.
ಸಮಾರಂಭದ ಅಧ್ಯಕ್ಷತೆ ಶ್ರೀ ನಾಗರಾಜ್ ಪಾಲ್ಕೆ ವಹಿಸಿದರು.ಸಭಾದ ಉಪಾಧ್ಯಕ್ಷ ಸುರೇಶ ಕುಮಾರ್ ಬಿ ಸ್ವಾಗತಿಸಿದರು. ಸಭಾದ ಜತೆ ಕಾರ್ಯದರ್ಶಿ ಯು. ಗಣೇಶ್ ವಿದ್ಯಾರ್ಥಿ ವೇತನ ವಿತರಣಾ ಪಟ್ಟಿ ಓದಿದರು. ಪ್ರಧಾನ ಕಾರ್ಯದರ್ಶಿ ಸುಜೀರ್ ವಿನೋದ್ ಕಾರ್ಯಕ್ರಮ
ನಿರೂಪಿಸಿದರು.
Comments are closed.