ರಾಷ್ಟ್ರೀಯ

ಪಾಕಿಸ್ತಾನ ಮಹಿಳೆಗೆ ಸೂಕ್ಷ್ಮ ಮಾಹಿತಿ ರವಾನೆ ಮಾಡಿದ ಸೈನಿಕರಿಬ್ಬರೂ ಗುಪ್ತಚರ ಅಧಿಕಾರಿಗಳ ವಶಕ್ಕೆ

Pinterest LinkedIn Tumblr

ಐಪೂರ್​: ಪಾಕಿಸ್ತಾನದ ಐಎಸ್​ಐ ಮಹಿಳಾ ಏಜೆಂಟ್​ಗೆ ಮಾಹಿತಿಗಳನ್ನು ರವಾನೆ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರು ಭಾರತೀಯ ಸೈನಿಕರನ್ನು ಜೋಧ್​ಪುರ್​ ರೈಲ್ವೆ ನಿಲ್ದಾಣದ ಬಳಿ ಗುಪ್ತಚರ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಆರೋಪಿಗಳಿಬ್ಬರೂ ಮಂಗಳವಾರ ಪೊಖ್ರಾನ್​ನಿಂದ ತಮ್ಮ ಗ್ರಾಮಕ್ಕೆ ಹೋಗುತ್ತಿರುವಾಗ ಅವರನ್ನು ಜಖ್ಪುರ ರೈಲ್ವೆ ನಿಲ್ದಾಣದಲ್ಲಿ ಗುಪ್ತಚರ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆಂದು ಮೂಲಗಳು ತಿಳಿಸಿವೆ.

ಪಾಕಿಸ್ತಾನಿ ಮಹಿಳೆಯ ಹನಿಟ್ರ್ಯಾಪ್​ ಬಲೆಗೆ ಸಿಲುಕಿದ ಈ ನಿರ್ಣಾಯಕರು ಆಕೆಗೆ ಹಲವು ಸೂಕ್ಷ್ಮ ಮಾಹಿತಿಗಳನ್ನು ನೀಡಿದ್ದಾರೆ ಎಂಬುದನ್ನು ಗುಪ್ತಚರ ಇಲಾಖೆ ಅಧಿಕಾರಿಗಳು ದೃಢಪಡಿಸಿದ್ದಾರೆ. ಇಬ್ಬರೂ ಆರೋಪಿಗಳನ್ನು ವಿಚಾರಣೆಗಾಗಿ ಜೋಧಪುರದಿಂದ ಜೈಪುರಕ್ಕೆ ಕರೆದೊಯ್ಯಲಾಗಿದೆ.

ಪ್ರಾಥಮಿಕ ತನಿಖೆಯ ನಂತರ ಹೆಚ್ಚುವರಿ ಮಹಾನಿರ್ದೇಶಕ ಉಮೇಶ್​ ಮಿಶ್ರಾ ಸೈನಿಕರನ್ನು ಹನಿಟ್ರ್ಯಾಫ್​ ಮಾಡಿರುವುದಾಗಿ ಖಚಿತಪಡಿಸಿದ್ದಾರೆ. ಅಧಿಕಾರಿ ಮೂಲಗಳು ಹೇಳುವ ಪ್ರಕಾರ ವಾಟ್ಸ್​ಆಯಪ್​​ ಮತ್ತು ಫೇಸ್​ಬುಕ್​ ಮೂಲಕ ಸೈನಿಕರಿಬ್ಬರೂ ಆ ಮಹಿಳೆಗೆ ಮಾಹಿತಿ ನೀಡುತ್ತಿದ್ದರು. ಸೈನಿಕರಲ್ಲಿ ಒಬ್ಬನು ಮಧ್ಯಪ್ರದೇಶದವನು ಮತ್ತೊಬ್ಬನು ಅಸ್ಸಾಂ ಮೂಲದವನು.

ಐಎಸ್​ಐ ಮಹಿಳಾ ಏಜೆಂಟರ್​ ಪಂಜಾಬಿ ಭಾಷೆಯನ್ನು ಬಲ್ಲವಳಾಗಿದ್ದಳು. ಇವಳು ಪಾಕಿಸ್ತಾನಿ ಸಂಖ್ಯೆಯಿಂದ ವಾಯ್ಸ್ ಓವರ್​, ಇಂಟರ್ನೆಟ್​ ಪ್ರೋಟೋಕಾಲ್​ ಸೇವೆಯನ್ನು ಬಳಸಿ ಪೋನ್​ ಮಾಡುತ್ತಿದ್ದಳು. ಅದು ಸೈನಿಕರ ಮೊಬೈಲ್​ ಪರದೆಯಲ್ಲಿ ಭಾರತೀಯ ಪೋನ್ ​ಸಂಖ್ಯೆಯಂತೆಯೇ ಗೋಚರಿಸುತ್ತದೆ. ಹಾಗಾಗಿ ಅವಳನ್ನು ಭಾರತೀಯಳೆಂದು ನಂಬಿ ರಾಜಸ್ತಾನದಲ್ಲಿ ಸೈನ್ಯ ನಿಯೋಜನೆ, ಸೇನಾ ಉಪಕರಣಗಳ ಬಗ್ಗೆ ಆಕೆಯೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಆರೋಪಿಗಳಾದ ಈ ಇಬ್ಬರೂ ಸೈನಿಕರನ್ನು ಲ್ಯಾನ್ಸ್ ನಾಯಕ್ ರವಿವರ್ಮಾ ಮತ್ತು ವಿಚಿತ್ರಾ ಬೊಹ್ರಾ ಎಂದು ಗುರುತಿಸಲಾಗಿದೆ,

Comments are closed.