ಮನೋರಂಜನೆ

ಮೀ ಟೂ ಆರೋಪ: ರಿಯಾಲಿಟಿ ಶೋದ ಜಡ್ಜ್ ಹೊರಕ್ಕೆ

Pinterest LinkedIn Tumblr


ಕೆಲ ತಿಂಗಳುಗಳ ಹಿಂದೆ ಕೇಳಿಬಂದಿದ್ದ ಮೀ ಟೂ ಅಭಿಯಾನ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಇದರ ಬಲೆಗೆ ಹಲವಾರು ಗಣ್ಯರು ಬಿದ್ದಿದ್ದರು. ಟಾಲಿವುಡ್, ಸ್ಯಾಂಡಲ್‌ವುಡ್, ಬಾಲಿವುಡ್‌ ಎಲ್ಲಡೆಯೂ ಈ ಬಗ್ಗೆ ಆರೋಪ ಕೇಳಿಬಂದಿತ್ತು.
ಬಾಲಿವುಡ್‌ ಸಂಗೀತ ನಿರ್ದೇಶಕ ಅನು ಮಲಿಕ್‌ ಕೂಡ ಇದರಿಂದ ಹೊರತಾಗಿಲ್ಲ. 2001ರ ಗೀತೆಯೊಂದರ ರೆಕಾರ್ಡಿಂಗ್‌ ಸಮಯದಲ್ಲಿ ಅನು ಮಲಿಕ್‌ ಹೇಗೆ ನಡೆದುಕೊಂಡಿದ್ದರು ಎಂದು ಶ್ವೇತಾ ಪಂಡಿತ್‌ ಟ್ವಿಟ್ಟರ್ ಮೂಲಕ ಬಹಿರಂಗಪಡಿಸಿದ್ದರು.

“ಕೇವಲ 15 ವರ್ಷದವಳಾಗಿದ್ದ ನನಗೆ ಚಿತ್ರದಲ್ಲಿ ಹಾಡುವ ಅವಕಾಶ ಕಲ್ಪಿಸಲು ಅನು ಮಲಿಕ್‌ ನಿರ್ಧರಿಸಿದ್ದರು. ಆದರೆ ಆ ನಂತರ ಅವರು ನಡೆದುಕೊಂಡ ರೀತಿ ನೆನಪಿಸಿಕೊಂಡರೆ ಇಂದಿಗೂ ಮೈ ಜುಮ್ಮೆನಿಸುತ್ತದೆ” ಎಂದು ಶ್ವೇತಾ ಪಂಡಿತ್ ಹೇಳಿಕೊಂಡಿದ್ದರು.

ಖಾಸಗಿ ಟಿವಿಯ ಪ್ರಸಿದ್ಧ ‘ಇಂಡಿಯನ್ ಐಡಲ್’ ರಿಯಾಲಿಟಿ ಶೋದ ನಿರ್ಣಾಯಕರಲ್ಲಿ ಒಬ್ಬರಾದ ಗೀತರಚನೆಕಾರ, ಗಾಯಕ ಅನು ಮಲಿಕ್ ಟಿವಿ ಶೋದಿಂದ ಮೀ ಟೂ ಆರೋಪ ಕೇಳಿ ಬಂದಿದ್ದ ಸಮಯದಲ್ಲೇ ಹೊರಬಂದಿದ್ದರು.

ಅನು ಮಲಿಕ್ ತಮ್ಮ ಜತೆ ಅನುಚಿತವಾಗಿ ನಡೆದುಕೊಂಡಿದ್ದಾರೆ ಎಂದು ಶ್ವೇತಾ ಪಂಡಿತ್, ಸೋನಾ ಮೋಹಪಾತ್ರ ಮತ್ತಿತರರು ಕೂಡ ಆರೋಪ ಮಾಡಿದ್ದರು. ಆದರೆ ಅನು ಮಲಿಕ್ ತಮ್ಮ ಮೇಲಿನ ಆರೋಪ ನಿರಾಕರಿಸಿದ್ದರು.

ಸಿಂಗಿಂಗ್ ರಿಯಾಲಿಟಿ ಶೋ ‘ಇಂಡಿಯನ್ ಐಡಲ್‌’ ತೀರ್ಪುಗಾರರಾಗಿ ವ್ಯವಹಿಸುತ್ತಿದ್ದಾರೆ ಅನು ಮಾಲಿಕ್. ಇದಕ್ಕೂ ಮುನ್ನ ಈ ಶೋಗೆ ಸೋನಾ ಸಹ ಜಡ್ಜ್ ಆಗಿದ್ದರು. ತನ್ನ ಕರಿಯರ್‌ನ ಆರಂಭದ ದಿನಗಳಲ್ಲಿ ಅನು ಮಾಲಿಕ್ ತನಗೆ ಲೈಂಗಿಕ ಕಿರುಕುಳ ನೀಡಿದ್ದರೆಂದು ವರ್ಷದ ಹಿಂದೆ ಇವರು ಆರೋಪಿಸಿದ್ದರು. ಹಾಗಾಗಿ ಆ ಶೋ ನಿರ್ವಾಹಕರು ಅನು ಅವರಿಗೆ ಗೇಟ್‌ಪಾಸ್ ನೀಡಿದ್ದರು. ಕೆಲ ದಿನಗಳ ಬಳಿಕ ಸೋನಾಗೂ ಇದೇ ಗತಿಯಾಯಿತು. ಒಂದು ವರ್ಷದ ಬಳಿಕ ಅನು ಅವರನ್ನು ಮತ್ತೆ ಶೋಗೆ ಆಹ್ವಾನಿಸಿ ಜಡ್ಜ್ ಸೀಟ್ ಮೇಲೆ ಕೂರಿಸಲಾಯಿತು. ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು ಸೋನಾ. ಭಾರತದಲ್ಲಿ ಇನ್ನೊಂದು ನಿರ್ಭಯಾ ಘಟನೆ ನಡೆಯದ ಹೊರತು ಇಂತಹವರು ಸುಧಾರಿಸಲ್ಲ ಎಂದಿದ್ದರು.

ಸೋಶಿಯಲ್ ಮೀಡಿಯಾದಲ್ಲಿ ಅನು ಮಲಿಕ್ ಸಿಂಗಿಂಗ್ ಶೋ ನಿರ್ಣಾಯಕರಾಗಿ ಮುಂದುವರೆದಿದ್ದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗುತ್ತಲೇ ಇತ್ತು, ಈ ಕುರಿತು ವಾಹಿನಿಯ ಬಗ್ಗೆ ಹಲವರು ದೂರಿದ್ದರು. ಈಗ ಅನು ಮಲಿಕ್‌ ಅವರನ್ನು ಶೋದಿಂದ ಹೊರಬಂದಿದ್ದಾರೆ ಎನ್ನಲಾಗಿದೆ. ಇನ್ನು ಕೆಲವು ವಾರ ಮಾತ್ರ ‘ಇಂಡಿಯನ್ ಐಡಲ್‌’ನಲ್ಲಿ ಅನು ಕಾಣಿಸಿಕೊಳ್ಳಲಿದ್ದಾರೆ.

Comments are closed.