ಕರಾವಳಿ

ಬೆಂಗಳೂರಿನಲ್ಲಿ ಈಜು ಸ್ಪರ್ಧೆ: 33 ಪದಕ ಪಡೆದ ಮಂಗಳೂರಿನ ಜೈ ಹಿಂದ್ ಈಜು ಕ್ಲಬ್‌ನ ಈಜು ಪಟುಗಳು

Pinterest LinkedIn Tumblr

ಮಂಗಳೂರು : ಇತ್ತೀಚೆಗೆ ಬೆಂಗಳೂರಿನಲ್ಲಿ ಪ್ರತ್ಯೇಕವಾಗಿ ನಡೆದ ಬಾಲಕ ಹಾಗೂ ಬಾಲಕಿಯರ ಈಜು ಸ್ಪರ್ಧೆಯಲ್ಲಿ ಜೈ ಹಿಂದ್ ಈಜು ಕ್ಲಬ್‌ನ ಈಜು ಪಟುಗಳು 33 ಪದಕಗಳನ್ನು ಪಡೆದುಕೊಂಡಿದ್ದಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆ ರಾಜ್ಯಮಟ್ಟದಲ್ಲಿ, ವೃತ್ತಿ ಶಿಕ್ಷಣ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ರಾಜ್ಯಮಟ್ಟದಲ್ಲಿ, ಸಿ.ಬಿ.ಎಸ್ಸಿ ಇಲಾಖೆ ವಲಯ ಮಟ್ಟದಲ್ಲಿ ಹಾಗೂ ಅಖಿಲ ಭಾರತ ವಿಶ್ವ ವಿದ್ಯಾಲಯ ಇದರ ವತಿಯಿಂದ 14 ರಿಂದ 19ನೇ ವಯೋಮಿತಿಯ ಬಾಲಕ ಹಾಗೂ ಬಾಲಕಿಯರು ಈಜು ಸ್ಪರ್ಧೆಯಲ್ಲಿ ಭಾಗವಹಿಸಿ ಒಟ್ಟು 33 ಪದಕಗಳನ್ನು ಪಡೆದುಕೊಂಡಿದ್ದಾರೆ.

ಸ್ಪರ್ಧೆಯಲ್ಲಿ ಭಾಗವಹಿಸಿ ಪದಕ ಪಡೆದವರ ವಿವರ :

1. ಜನನಿ ಕಣ್ಣನ್ 1 ಬೆಳ್ಳಿ 1 ಕಂಚು
2. ವಫಿ ಅಬ್ದುಲ್ ಹಾಕೀಮ್ – 1 ಚಿನ್ನ 1 ಕಂಚು
3. ವಿದ್ಯಾ ಭಂಡಾರಿ – 2 ಬೆಳ್ಳಿ
4. ಶ್ರೀಣನ್ ಬಂಗೇರ – 4 ಚಿನ್ನ
5. ನೌನಿಯ ಜೆನ್ಲಿನ್ ಡಿಸೋಜ – 3 ಚಿನ್ನ 2 ಬೆಳ್ಳಿ
6. ಅಲೈಸ್ಟರ್ ಸೌಮ್ಯುಲ್ ರೆಗೋ – 1 ಚಿನ್ನ 1 ಬೆಳ್ಳಿ ಹಾಗೂ 1 ಕಂಚು
7. ಅಭಿ? ಆರ್ ರಾವ್ – 1 ಚಿನ್ನ, 1 ಬೆಳ್ಳಿ, 1 ಕಂಚು
8. ದಿಯಾ ಶೆಟ್ಟಿ 2 ಕಂಚು
9. ಸ್ಪೂರ್ತಿ ಆರ್ ರಾವ್ – 2 ಬೆಳ್ಳಿ, 1 ಕಂಚು
10. ಸಮರ್ಥ್ ಎಸ್. ಕುಮಾರ್ – 1 ಬೆಳ್ಳಿ, 2 ಕಂಚು
11. ಆದಿತ್ಯ ಭಂಡಾರಿ – 1 ಬೆಳ್ಳಿ, 2 ಕಂಚು
12. ಇಶಿತ – 1 ಚಿನ್ನ  ಇವರಲ್ಲಿ ವಫಿ ಹಕೀವ್, ಜನನಿ ಕಣ್ಣನ್, ವಿದ್ಯಾ ಭಂಡಾರಿ ಇವರು ಬೋಪಾಲ್‌ನಲ್ಲಿ ನಡೆಯುವ ರಾಷ್ಟ್ರ ಮಟ್ಟದ ಈಜು ಸ್ಪರ್ಧೆಯಲ್ಲಿ ಭಾಗವಹಿಸಲಿರುವರು.

ಶ್ರೀಶಾನ್ ಬಂಗೇರ, ಸಾನಿಯ ಡಿಸೋಜ, ಅಲೈಸ್ಟರ್ ಸೌಮ್ಯುಲ್ ರೆಗೋ, ಸ್ಪೂರ್ತಿ ಆರ್ ರಾವ್ ಇವರು ದೆಹಲಿಯಲ್ಲಿ ನಡೆಯುವ ರಾಷ್ಟ್ರ ಮಟ್ಟದ ಈಜು ಸ್ಪರ್ಧೆಯಲ್ಲಿ ಭಾಗವಹಿಸಲಿರುವರು. ಹಾಗೂ ಇಶೀತ ಇವರು ಸುಜಾನ್‌ನಲ್ಲಿ ನಡೆಯುವ ಅಖಿಲ ಭಾರತ ಅಂತರ್ ವಿಶ್ವ ವಿದ್ಯಾಲಯ ಈಜು ಸ್ಪರ್ಧೆಯಲ್ಲಿ ನಮ್ಮ ರಾಜ್ಯದಿಂದ ಪ್ರತಿನಿಧಿಸಲಿರುವರು.

ಇವರೆಲ್ಲರೂ ಜೈ ಹಿಂದ್ ಈಜು ಕ್ಲಬ್‌ನ ಸದಸ್ಯರು ಹಾಗೂ ಮುಖ್ಯ ಈಜು ತರಬೇತುದಾರರಾದ ಶ್ರೀ ವಿ. ರಾಮಕೃಷ್ಣ ರಾವ್, ಸಹಾಯಕ ಈಜು ತರಬೇತುದಾರರಾದ ಶ್ರೀ ರಾಜೇಶ್ ಅಂತೋನಿ ಬೆಂಗ್ರೆ ಹಾಗೂ ಕೆ.ನಾಗರಾಜ ಇವರಿಂದ ಮಂಗಳೂರು ಮಹಾನಗರ ಪಾಲಿಕೆ ಈಜು ಕೊಳದಲ್ಲಿ ತರಬೇತಿ ಪಡೆಯುತ್ತಿರುವರು.

Comments are closed.