ಉಡುಪಿ: ಪಠ್ಯ ಪುಸ್ತಕದಿಂದ ಟಿಪ್ಪು ಕುರಿತಾದ ಅಧ್ಯಾಯ ತೆಗೆಯುವುದರ ಕುರಿತು ಉಡುಪಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಇತಿಹಾಸದ ಅನುಭವ ಇಲ್ಲದವರು ಭವಿಷ್ಯ ನಿರ್ಮಾಣ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿಕೆ ನೀಡಿದ್ದಾರೆ.
ಟಿಪ್ಪು ಸುಲ್ತಾನ್, ಹೈದರಾಲಿಯ ವಿನಹಃ ಮೈಸೂರು ಚರಿತ್ರೆ ಅಪೂರ್ಣ. ಅವರಿಲ್ಲದಿದ್ದರೆ ಮೈಸೂರು ಇತಿಹಾಸವೇ ಇರುತ್ತಿರಲಿಲ್ಲ. ಯಡಿಯೂರಪ್ಪನವರು ಕೆಜೆಪಿ ಪಕ್ಷದಲ್ಲಿದ್ದಾಗ ಟಿಪ್ಪು ಪೇಟ ಧರಿಸಿ, ಟಿಪ್ಪು ಖಡ್ಗ ಹಿಡಿದು ನಾನೇ ಟಿಪ್ಪು ಎಂದು ಹೇಳಿದ್ದರು. ಈಗ ಟಿಪ್ಪುವನ್ನು ಮತಾಂಧ ಎನ್ನುತ್ತಿದ್ದಾರೆ. ಸಿದ್ದರಾಮಯ್ಯ ಟಿಪ್ಪು ಜಯಂತಿ ಆಚರಣೆ ಮಾಡಿದ್ದಕ್ಕೆ ಟಿಪ್ಪು ಮತಾಂಧನಾದ. ಸಿದ್ದರಾಮಯ್ಯ ಟಿಪ್ಪು ಜಯಂತಿ ಮಾತ್ರವಲ್ಲ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ, ನಾರಾಯಣ ಗುರುಗಳ ಜಯಂತಿಯನ್ನು ಕೂಡಾ ಆಚರಿಸಿದ್ದಾರೆ ಎಂದರು.
ಜಗದೀಶ್ ಶೆಟ್ಟರ್ ಟಿಪ್ಪುವಿನ ಕುರಿತಾದ ಒಂದು ಪುಸ್ತಕದಲ್ಲಿ ಟಿಪ್ಪು ಒಬ್ಬ ದೇಶ ಭಕ್ತ, ಟಿಪ್ಪು ದೇಶ ಪ್ರೇಮಿ, ಬ್ರಿಟಿಷ್ ವಿರುದ್ದ ಹೋರಾಡಿದ ಮಹಾ ಶೂರ ಎಂದು ಹೊಗಳಿದ್ದಾರೆ ಎಂದು ಸಿದ್ದರಾಮಯ್ಯ ಟೀಕಿಸಿದರು.
Comments are closed.