ಕರ್ನಾಟಕ

ಬಹುಕೋಟಿ ಐಎಂಎ ಹಗರಣ : ಐಪಿಎಸ್ ಅಧಿಕಾರಿಗಳ ಮನೆ ಮೇಲೆ ದಾಳಿ

Pinterest LinkedIn Tumblr

ಬೆಂಗಳೂರು : ರಾಜ್ಯದಲ್ಲಿ 14 ಕಡೆ ಸಿಸಿಬಿ ದಾಳಿ ನಡೆದಿದ್ದು, ಐಪಿಎಸ್ ಅಧಿಕಾರಿಗಳನ್ನೇ ಗುರಿಯಾಗಿಸಿ ದಾಳಿ ನಡೆಸಲಾಗಿದೆ.

ಹೇಮಂತ್ ಲಿಂಬಾಳ್ಕರ್ ಸೇರಿ ಹಲವು ಐಪಿಎಸ್ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆದಿದೆ ಎನ್ನಲಾಗಿದೆ. ಐಪಿಎಸ್ ಅಧಿಕಾರಿಗಳಾದ ಸಿಐಡಿ ಡಿವೈಎಸ್ಪಿ ಶ್ರೀಧರ್, ಎಸ್ಪಿ ಅಜಯ್ ಹಿಲೋರಿ ಸೇರಿದಂತೆ ಕೆಲವು ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆದಿದೆ ಎನ್ನಲಾಗಿದೆ.

ಬಹುಕೋಟಿ ಐಎಂಎ ಹಗರಣಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ.

ರಾಜ್ಯದಲ್ಲಿ ಮಂಡ್ಯ, ರಾಮನಗರ, ಬೆಳಗಾವಿ, ಉತ್ತರ ಪ್ರದೇಶದ ಮೀರತ್ ಸೇರಿದಂತೆ ಒಟ್ಟು 15 ಕಡೆ ದಾಳಿ ನಡೆದಿದೆ.

ಬಹುಕೋಟಿ ಐಎಂಎ ವಂಚನೆ ಪ್ರಕರಣದ ತನಿಳೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ಎಂಎಂಎ ಹಗರಣ ನಡೆದಾಗ ಸಿಐಡಿಯ ಆರ್ಥಿಕ ಅಪರಾಧ ವಿಭಾಗದ ಐಜಿ ಆಗಿದ್ದ ಹೇಮಂತ್ ನಿಂಬಾಳ್ಕರ್, ಅಂದಿನ ಪೂರ್ವ ವಲಯ ಡಿಸಿಪಿ ಅಜಯ್ ಹಿಲೋರಿ, ಆಗಿನ ಬಿಡಿಎ ಮುಖ್ಯ ಎಂಜಿನಿಯರ್ ಪಿಡಿ ಕುಮಾರ್ ಮೊದಲಾದವರ ನಿವಾಸಗಳನ್ನು ಗುರಿಯಾಗಿಸಿ ದಾಳಿ ನಡೆಸಿದ್ದಾರೆ.

Comments are closed.