ಬಾಗಲಕೋಟೆ: ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ನದಿಗೆ ಹಾರಿ ನವದಂಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮ ಸಾವಿಗೆ ಸಾವೇ ಕಾರಣ ಎಂದು ಬರೆದಿರುವ ಡೆತ್ನೋಟ್ ಪತ್ತೆಯಾಗಿದೆ.
ಘಟಪ್ರಭಾ ನದಿಯ ಸೇತುವೆ ಬಳಿ ಡೆತ್ ನೋಟ್ ಪತ್ತೆಯಾಗಿದೆ. ಅಪ್ಪಾ ನಮ್ಮನ್ನು ಕ್ಷಮಿಸು. ನಮ್ಮ ಸಾವಿಗೆ ನಾವೇ ಕಾರಣ. ದಯಮಾಡಿ ನಮ್ಮಿಬ್ಬರನ್ನು ಒಟ್ಟಿಗೆ ಸಂಸ್ಕಾರ ಮಾಡಿ ಎಂದು ಡೆತ್ನೋಡ್ನಲ್ಲಿ ಉಲ್ಲೇಖಿಸಲಾಗಿದೆ. ಕೊನೆಯಲ್ಲಿ ಮೌನೇಶ್ ಕಮ್ಮಾರ ಎಂದು ಸಹಿ ಮಾಡಲಾಗಿದೆ.
ದಾಂಪತ್ಯದಲ್ಲಿ ಸಾಮರಸ್ಯದ ಕೊರತೆಯಿಂದಾಗಿ ನಿತ್ಯವೂ ಆಗುತ್ತಿದ್ದ ಜಗಳದಿಂದ ಬೇಸತ್ತು ಬಾಗಲಕೋಟೆ ಜಿಲ್ಲೆ ರಾಮದುರ್ಗ ತಾಲೂಕಿನ ಕಮಗೇರಿ ನಿವಾಸಿಗಳಾದ ಮೌನೇಶ್ ಕಮ್ಮಾರ (28) ಮತ್ತು ಅಕ್ಷತಾ (20) ನವದಂಪತಿ ಘಟಪ್ರಭಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮುಧೋಳ ತಾಲೂಕಿನ ಚಿಂಚಖಂಡಿ ಕೆಡಿ ಗ್ರಾಮದ ಬಳಿಯಿರುವ ಘಟಪ್ರಭಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತದೇಹಗಳಿಗಾಗಿ ನದಿಯಲ್ಲಿ ಶೋಧಕಾರ್ಯ ಮುಂದುವರಿದಿದೆ.
Comments are closed.