ಕರಾವಳಿ

ಅಯೋಧ್ಯೆ ತೀರ್ಪು: ದೆಹಲಿಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಪಾಲ್ಘೊಂಡ ಪೇಜಾವರ ಶ್ರೀ

Pinterest LinkedIn Tumblr

ಉಡುಪಿ: ಸುಪ್ರೀಂಕೋರ್ಟ್ ಶನಿವಾರದಂದು ಅಯೋಧ್ಯೆ ಕುರಿತ ತೀರ್ಪು ನೀಡಿದ ಹಿನ್ನೆಲೆ ಭಾನುವಾರ ರಾಜಧಾನಿ ದೆಹಲಿಯಲ್ಲಿ ನಡೆದ ಹಿಂದೂ ಸಂತರು, ಮುಸ್ಲಿಂ ಧಾರ್ಮಿಕ ಮುಖಂಡರ ಶಾಂತಿ ಸಭೆಯಲ್ಲಿ ಉಡುಪಿಯ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಗಳು ಪಾಲ್ಗೊಂಡರು.

ಪ್ರಧಾನಮಂತ್ರಿಗಳ ಭದ್ರತಾ ಸಲಹೆಗಾರ ಅಜಿತ್ ದೋವಲ್ ನೇತೃತ್ವದಲ್ಲಿ ಈ ಸಭೆಯನ್ನು ಕರೆಯಲಾಗಿತ್ತು. ಅಯೋಧ್ಯೆ ಕುರಿತು ತೀರ್ಪು ಬರುವುದಕ್ಕೂ ಮುನ್ನ ಹಾಗೂ ತೀರ್ಪು ಬಂದ ಬಳಿಯ ಯಾವ ರೀತಿಯ ಕ್ರಮ ಕೈಗೊಳ್ಳಬೇಕೆಂಬ ಉದ್ದೇಶದಿಂದ ಪ್ರಮುಖ ಸಂತರು, ವಿಶ್ವ ಹಿಂದೂ ಪರಿಷತ್ ಮುಖಂಡರ ಸಭೆಯನ್ನು ಭಾನುವಾರ ನಿಗದಿಪಡಿಸಲಾಗಿತ್ತು. ತೀರ್ಪು ಪ್ರಕಟಗೊಂಡ ಹಿನ್ನಲೆಯಲ್ಲಿ ಸಭೆಯಚನ್ನು ಎರಡು ಧರ್ಮಗಳ ಮುಖಂಡರ ಶಾಂತಿ ಸಭೆಯಾಗಿ ನಡೆಸಲಾಯಿತು.

ಉಡುಪಿಯಲ್ಲಿದ್ದ ಸ್ವಾಮೀಜಿಗಳು ಸಭೆ ಹಿನ್ನಲೆಯಲ್ಲಿ ಭಾನುವಾರ ಮಂಗಳೂರಿನ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ದೆಹಲಿಗೆ ಪ್ರಯಾಣ ಬೆಳೆಸಿ ಸಭೆಯಲ್ಲಿ ಭಾಗವಹಿಸಿದರು. ಸಭೆಯಲ್ಲಿ ಮಂದಿರ ನಿರ್ಮಾಣ ಕುರಿತು ಸಮಗ್ರ ಸಮಿತಿಯನ್ನು ರಚಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ವರದಿಗಳು ತಿಳಿಸಿವೆ. ದೇಶದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡಲು ಎಲ್ಲಾ ಸಮುದಾಯ ಕಠಿಬದ್ಧರಾಗಬೇಕು. ಸಾಮರಸ್ಯದಿಂದ ಬಾಳಬೇಕು ಎಂದು ಕರೆಕೊಟ್ಟರು.

ಸಭೆಯಲ್ಲಿ ಆದಿಚುಂಚನಗಿರಿ, ಸುತ್ತೂರು ಶ್ರೀಗಳು, ವಿಶ್ವ ಹಿಂದೂ ಪರಿಷತ್ ನಾಯಕ ಚಂಪತ್ ರಾಯ್, ಸುರೇಂದ್ರ ಜೈನ್, ರಾಮ ಜನ್ಮಭೂಮಿ ಟ್ರಸ್ಟ್ ಅಧ್ಯಕ್ಷ ನೃತ್ಯ ಗೋಪಾಲ್ ದಾಸ್ ಸೇರಿದಂತೆ ಇನ್ನಿತರೆ ಪ್ರಮುಖರು ಹಾಜರಿದ್ದರು.

Comments are closed.