ಮನೋರಂಜನೆ

‘ಬೆಳದಿಂಗಳ ಬಾಲೆ’ ಚಿತ್ರರಂಗದಿಂದ ಮಾಯವಾಗಿದ್ದೇಕೆ?

Pinterest LinkedIn Tumblr


90ರ ದಶಕದಲ್ಲಿ ಪಡ್ಡೆಗಳ ನಿದ್ದೆ ಕದ್ದಿದ್ದ ಹಾಗೂ ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸಿದ್ದ ತಾರೆ ಸುಮನ್ ನಗರ್ಕರ್. ನಟನೆಯಲ್ಲಿ ಪಕ್ವಗೊಂಡ ಅಭಿನೇತ್ರಿ ಸುಮನ್ ಅವರನ್ನು ಇಂದಿಗೂ ಹಲವರು ನೆನಪಿಟ್ಟುಕೊಳ್ಳುವುದು ಬೆಳದಿಂಗಳ ಬಾಲೆ ಎಂಬ ಹೆಸರಿನಿಂದಲೇ. ಹಿಟ್ ಚಿತ್ರಗಳನ್ನು ಜನರ ಮುಂದಿಟ್ಟ ಬಳಿಕ ಕೆಲವೇ ವರ್ಷಗಳ ಬಳಿಕ ಏಕಾಏಕಿ ಸುಮನ್‌ ನಗರ್‌ಕರ್‌ ಮಾಯವಾಗಿಬಿಟ್ಟರು.

ಅವರು ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎಂದು ಹಲವರ ತಲೆಯಲ್ಲಿ ಪ್ರಶ್ನೆಗಳು ಮೂಡತೊಡಗಿತು. ಆದರೆ ಇದಕ್ಕೆ ಉತ್ತರ ಕೊಡಲು ಮತ್ತೊಂದು ಹೊಸ ಆವಿಷ್ಕಾರದೊಂದಿಗೆ ಸುಮನ್ ನಗರ್ಕರ್ ಚಿತ್ರರಂಗಕ್ಕೆ ರೀ ಎಂಟ್ರಿ ಪಡೆದುಕೊಂಡಿದ್ದಾರೆ.

‘ಬಬ್ರೂ’ ಚಿತ್ರದಲ್ಲಿ ಸುಮನ್
ಹೌದು, ಮದುವೆಯಾದ ಬಳಿಕ ವಿದೇಶದಲ್ಲಿ ನೆಲೆಸಿದ್ದ ನಟಿ ಸುಮನ್ ಅವರು ಹೊಸ ಚಿತ್ರವೊಂದರಲ್ಲಿ ವಿಭಿನ್ನ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಇದೇ ಮೊದಲ ಬಾರಿಗೆ ಚಿತ್ರವನ್ನು ತಮ್ಮ ಬ್ಯಾನರ್ ನಲ್ಲಿ ನಿರ್ಮಿಸಿದ್ದಾರೆ. ಇನ್ನು ಆ ಚಿತ್ರಕ್ಕೆ ‘ಬಬ್ರೂ’ ಎಂದು ಹೆಸರಿಟ್ಟಿದ್ದಾರೆ. ಈ ಚಿತ್ರದ ವಿಶೇಷವೆಂದರೆ, ಅಮೆರಿಕಾದಲ್ಲೇ ಚಿತ್ರೀಕರಣಗೊಂಡಿರುವುದರ ಜೊತೆಗೆ ಹಾಲಿವುಡ್ ಚಿತ್ರಗಳಲ್ಲಿ ಅಭಿನಯಿಸಿರುವ ಅನೇಕರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

“ನಾನು ಫ್ಯಾಮಿಲಿಯೊಂದಿಗೆ ಅಮೆರಿಕದಲ್ಲಿ ನೆಲೆಸಿದ್ದೆ. ಅಲ್ಲಿದ್ದಾಗ ಸ್ವಲ್ಪ ವಷರ್ಗಳು ಬಣ್ಣಹಚ್ಚಲಿಲ್ಲ. ಅಭಿನಯ ನನ್ನ ಜೀವ ಹಾಗೂ ಜೀವನ. ಅಲ್ಲಿ ಇದ್ದಷ್ಟು ದಿನ ಮಕ್ಕಳಿಗೆ ಹಿಂದೂಸ್ಥಾನಿ ಸಂಗೀತ ತರಗತಿ ನಡೆಸಿ ಹೇಳಿಕೊಡುತ್ತಿದೆ. ಈ ಮಧ್ಯೆ ನಮ್ಮ ಮನೆಗೆ ನಾಗತಿಹಳ್ಳಿ ಚಂದ್ರಶೇಖರ್ ಸರ್ ಬಂದಾಗ ಮತ್ತೊಮ್ಮೆ ತಮ್ಮ ಚಿತ್ರ ಇಷ್ಟಕಾಮ್ಯದಲ್ಲಿ ಅಭಿನಯಿಸುವಂತೆ ಕೇಳಿದರು. ನಾನು ಒಪ್ಪಿದೆ. ಇದಾದ ಬಳಿಕ ಪತಿ ಗುರುರವರು ಸಹ ಬಣ್ಣ ಹಚ್ಚಲು ಪ್ರೋತ್ಸಾಹ ನೀಡಿದರು. ಆಗ ನಾವು ಐದು ಜನರ ತಂಡ ಕಟ್ಟಿಕೊಂಡು ಸುಮನ್‌ ನಗರ್ಕರ್‌ ಪ್ರೊಡಕ್ಷನ್ಸ್‌ ಮೂಲಕ ಈ ಚಿತ್ರ ನಿರ್ಮಿಸಲು ಶುರು ಮಾಡಿದೆವು. ಅದೇ ಈಗ ‘ಬಬ್ರೂ’ವಾಗಿ ಪ್ರೇಕ್ಷಕರ ಮುಂದಿದೆ ಎಂದರು.

ಸುಮನ್ ಪಾತ್ರಗಳ ಆಯ್ಕೆ ಹೇಗಿರುತ್ತದೆ?
ನಾನು ಪ್ರತಿ ಪಾತ್ರವನ್ನು ಆಯ್ಕೆ ಮಾಡುವಾಗ ನಾನು ಆ ಪಾತ್ರಕ್ಕೆ ಸರಿ ಹೊಂದುತ್ತೇನೆಯೇ ಎಂದು ಯೋಚಿಸುತ್ತೇನೆ. ಸುಖಾಸುಮ್ಮನೆ ಎಲ್ಲಾ ಪಾತ್ರವನ್ನು ಒಪ್ಪಲಾರೆ. ನನಗೆ ಹಣಕ್ಕಿಂತ ನಾನು ಆ ಪಾತ್ರಕ್ಕೆ ನೀಡುವ ಮೌಲ್ಯ ಮುಖ್ಯ. ಇದುವರೆಗೂ ನಾನು ಮಾಡಿದ ಪಾತ್ರಗಳೆಲ್ಲವೂ ಒಂದಕ್ಕಿಂತ ಒಂದು ವಿಭಿನ್ನವಾದುದು ಎಂಬ ತೃಪ್ತಿ ನನಗಿದೆ. ಆ ಪಾತ್ರಕ್ಕೆ ನ್ಯಾಯ ಒದಗಿಸಲು ಹೆಚ್ಚು ವರ್ಕೌಟ್ ಮಾಡಲು ಇಷ್ಟ ಎಂದರು.

ಸುಮನ್ ಹವ್ಯಾಸ ಏನು?
ಮೂವಿ ಬಿಟ್ಟು ಫ್ರೀ ಟೈಂನಲ್ಲಿ ನಾನು ಹೆಚ್ಚು ಸಂಗೀತ ಕೇಳುತ್ತೇನೆ. ಹೊಸ – ಹೊಸ ಅಡುಗೆಗಳನ್ನು ಕಲಿತು ಮಾಡುತ್ತೇನೆ. ಅಲ್ಲದೇ ಗಾರ್ಡನಿಂಗ್ ಕೂಡ ಮಾಡಲು ಇಷ್ಟ. ನಾನು ಮಾಡುವ ಸಲಾಡ್ ಗಳು ಮನೆಯಲ್ಲಿ ಇಷ್ಟಪಟ್ಟು ತಿನ್ನುತ್ತಾರೆ. ನನಗೆ ಅಮ್ಮ ಮಾಡುವ ಮೆಂತೆ ದೋಸೆ ಅಂದ್ರೆ ಪ್ರಾಣ ಎಂದು ನಸುನಗುತ್ತಾರೆ ಸುಮನ್.

ಸುಮನ್ ಮುಂದಿನ ಪ್ಲ್ಯಾನ್ ಏನು?
ನನಗೆ ಈವರೆಗೂ ಕನ್ನಡ ಭಾಷೆ ಬಿಟ್ಟು ಬೇರೆ ಭಾಷೆಯಲ್ಲಿ ಆಫರ್ ಬಂದಿಲ್ಲ. ಬಂದರೆ ಖಂಡಿತಾ ಒಪ್ಪಿಕೊಳ್ಳುತ್ತೇನೆ. ನಾನು ಮಾಡುವ ಪಾತ್ರದಲ್ಲಿ ದೊಡ್ಡದು- ಸಣ್ಣದು ಎಂಬ ಭೇದ ಮಾಡಲಾರೆ. ಕಿರುತರೆಯಲ್ಲಿಯೂ ಸಹ ನಾನು ಒಂದು ಧಾರವಾಹಿಯಲ್ಲಿ ನಟಿಸಿದ್ದೆ. ನನ್ನ ಮುಂದೆ ಇನ್ನು 2 ಚಿತ್ರಗಳು ಇದೆ. ಇನ್ನು ಕೆಲ ಚಿತ್ರಗಳೊಂದಿಗೆ ಮಾತುಕತೆ ನಡೆಸುತ್ತಿದ್ದೇನೆ ಎಂದು ತಮ್ಮ ಮುಂದಿನ ಯೋಜನೆಗಳ ಬಗ್ಗೆ ತಿಳಿಸಿದರು.

ಬಬ್ರೂ ರಿಲೀಸ್ ಯಾವಾಗ?
ಇನ್ನು ಈ ಚಿತ್ರದಲ್ಲಿರುವವರೆಲ್ಲರೂ ಅಣ್ಣಾವ್ರ ಅಪ್ಪಟ ಅಭಿಮಾನಿಗಳು. ಹಾಗಾಗಿ ಬಬ್ರುವಾಹನ ಚಿತ್ರದ ಪ್ರೇರಣೆಯಿಂದಾಗಿ, ಅವರ ಸಿನಿಮಾಗೂ ಬಬ್ರೂ ಎಂದು ಹೆಸರಿಟ್ಟೆವು. ವಿದೇಶದ ಮಲ್ಟಿಪ್ಲೆಕ್ಸ್ ಒಂದರಲ್ಲೇ 7 ಶೋ ಏರ್ ಆದ ಮೊದಲ ಚಿತ್ರ ಇದಾಗಿದೆ. ಡಿ.5 ರಂದು ಚಿತ್ರ ಬಿಡುಗಡೆಯಾಗುತ್ತುದ್ದು ಎಲ್ಲರೂ ಚಿತ್ರಮಂದಿರಕ್ಕೆ ಬಂದು ನೋಡಿ. ಎಂದರು.

Comments are closed.