ಕರಾವಳಿ

ಮನಪಾ ಚುನಾವಣೆಯ ಮತ ಏಣಿಕೆ ಆರಂಭ – ಲೈವ್ ವರದಿ -ಬಿಜೆಪಿಯ ಇಬ್ಬರು ಅಭ್ಯರ್ಥಿಗಳು ವಿಜಯಿ

Pinterest LinkedIn Tumblr

ಮಂಗಳೂರು, ನವೆಂಬರ್.14: ಮಂಗಳೂರು ಮಹಾನಗರ ಪಾಲಿಕೆಯ ಒಟ್ಟು 60 ವಾರ್ಡ್‌ಗಳಿಗೆ ನವೆಂಬರ್ 12ರಂದು ನಡೆದ ಚುನಾಚಣೆಯ ಮತ ಎಣಿಕೆ ಕಾರ್ಯ ಇಂದು ಬೆಳಗ್ಗೆ 8 ಗಂಟೆಗೆ ನಗರದ ಸ್ಟೇಟ್‌ಬ್ಯಾಂಕ್ ಸಮೀಪದ ರೊಸಾರಿಯೋ ಶಾಲೆಯಲ್ಲಿ ಆರಂಭಗೊಂಡಿದ್ದು, ನಮ್ಮ ಓದುಗರಿಗಾಗಿ ವಿಜೇತ ಅಭ್ಯರ್ಥಿಗಳ ಲೈವ್ ವರದಿಯನ್ನು ಈ ಮೂಲಕ ನೀಡಲಾಗುತ್ತಿದೆ.

41 ನೇ ಸೆಂಟ್ರಲ್ ಮಾರ್ಕೆಟ್ ವಾರ್ಡಿನಿಂದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಶ್ರೀಮತಿ ಪೂರ್ಣಿಮಾ ಪ್ರಚಂಡ ಬಹುಮತದಿಂದ ಜಯಶಾಲಿಯಾಗಿದ್ದಾರೆ. ಅವರ ನಿಕಟ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಎಚ್ ಮಮತಾ ಶೆಣೈ ಪರಭಾವಗೊಂಡಿದ್ದಾರೆ.

ಪೂರ್ಣಿಮಾ 2037 ಮತಗಳನ್ನು ಗಳಿಸಿದರೆ, ಪ್ರತಿಸ್ಪರ್ಧಿ ಕಾಂಗ್ರೆಸ್ಸಿನ ಮಮತಾ ಶೆಣೈ 426 ಮತಗಳನ್ನಷ್ಟೇ ಗಳಿಸಲು ಶಕ್ತರಾಗಿದ್ದಾರೆ. 18 ನೋಟಾ ಚಲಾವಣೆಯಾಗಿದೆ.

ವಾರ್ಡ್ 41- ಸೆಂಟ್ರಲ್ ಮಾರ್ಕೆಟ್
1. ಪೂರ್ಣಿಮಾ (ಬಿಜೆಪಿ)
2 ಎಚ್ ಮಮತಾ ಶೆಣೈ (ಕಾಂಗ್ರೆಸ್)
3 ರೇಖಾ ಸುರೇಂದ್ರ (ಪಕ್ಷೇತರ )

08 : 28am
ಸುರತ್ಕಲ್ ಪಶ್ಚಿಮ 1ನೇ ವಾರ್ಡ್‌ನ ಬಿಜೆಪಿ ಅಭ್ಯರ್ಥಿ ಶೋಭಾ ರಾಜೇಶ್ ವಿಜಯಿಯಾಗಿದ್ದಾರೆ. ಶೋಭಾ ರಾಜೇಶ್ 985 ಮತಗಳನ್ನು ಗಳಿಸಿದರೆ, ಅವರ ನಿಕಟ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ರೇವತಿ ಪುತ್ರನ್ 760 ಮತ, ಶಾಂತಾ ರಾವ್ 548 ಮತಗಳನ್ನು ಪಡೆದಿದ್ದಾರೆ. 21 ನೋಟಾ ಚಲಾವಣೆಯಾಗಿದೆ.

ವಾರ್ಡ್ 1- ಸುರತ್ಕಲ್ (ಪಶ್ಚಿಮ)
1. ಶಾಂತ ಎಸ್ ರಾವ್ (ಕಾಂಗ್ರೆಸ್)
2 ಶೋಭಾ ರಾಜೇಶ್ (ಬಿಜೆಪಿ)
3 ರೇವತಿ ಪುತ್ರನ್ (ಪಕ್ಷೇತರ )

Comments are closed.