ಹೊಸದಿಲ್ಲಿ: ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಸುಪ್ರೀಂ ಕೋರ್ಟ್ ನಿಂದ ತೀರ್ಪು ಹೊರಬಿದ್ದು ಸತತ ಪ್ರತಿಭಟನೆಗಳು ನಡೆದ ನಂತರ ದೇವಸ್ಥಾನದ ಆದಾಯ ತೀವ್ರವಾಗಿ ಇಳಿಕೆಯಾಗಿತ್ತು. ಈ ವರ್ಷದ ಸಂಕ್ರಾಂತಿ ಸಮಯದ 60 ದಿನಗಳ ಶಬರಿಮಲೆ ಯಾತ್ರೆಯ ಸಮಯವಿದು. ಕಳೆದ ವರ್ಷ ತೀವ್ರ ಪ್ರತಿಭಟನೆ, ಪೊಲೀಸರ ಲಾಠಿಚಾರ್ಚ್ ಇತ್ಯಾದಿಗಳಿಂದಾಗಿ ಹಲವರು ಶಬರಿಮಲೆಗೆ ಹೋಗಿರಲಿಲ್ಲ. 60 ದಿನಗಳ ಶಬರಿಮಲೆ ವ್ರತ, ಯಾತ್ರೆ ಇದೇ ಭಾನುವಾರ ಆರಂಭವಾಗುತ್ತಿದೆ. ಭಕ್ತರಲ್ಲಿ ಸಹಜವಾಗಿ ಆತಂಕ ಮನೆಮಾಡಿದೆ.
ಶಬರಿಮಲೆಯ ಶ್ರೀ ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶಕ್ಕೆ ಸಂಬಂಧಿಸಿ ಮರುಪರಿಶೀಲನಾ ಅರ್ಜಿಯನ್ನು ಇಂದು ಅಂಗೀಕರಿಸಿದ ಸುಪ್ರೀಂಕೋರ್ಟ್ ಅರ್ಜಿಯನ್ನು ವಿಚಾರಣೆಗೆ ಏಳು ಮಂದಿ ನ್ಯಾಯಮೂರ್ತಿಗಳ ವಿಸ್ತೃತ ಪೀಠಕ್ಕೆ ವರ್ಗಾಯಿಸಿದೆ.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠ ತೀರ್ಪು ಮರುಪರಿಶೀಲನಾ ಅರ್ಜಿಯನ್ನು ವಿಚಾರಣೆಗೆ ವಿಸ್ತೃತ ಪೀಠಕ್ಕೆ ವರ್ಗಾಯಿಸಿತು. ಹಿಂದಿನ ತೀರ್ಪಿಗೆ ಸಾಂವಿಧಾನಿಕ ಪೀಠ ತಡೆಯಾಜ್ಞೆ ನೀಡಿದೆ.
ತೀರ್ಪು ಹಿಂದೂ ಮಹಿಳೆಯರಿಗೆ ಮಾತ್ರ ಸೀಮಿತವಾಗಿಲ್ಲ.ಮುಸ್ಲಿಮರು, ಪಾರ್ಸಿಗಳ ವಿಚಾರವೂ ಇದೆ. ಇದು ವೈಯಕ್ತಿಕ ಸ್ವಾತಂತ್ರ್ಯ ಮತ್ತು ಧಾರ್ಮಿಕ ಸ್ವಾತಂತ್ರ್ಯದ ವಿಚಾರವೂ ಇದರಲ್ಲಿದೆ. ಈ ಬಗ್ಗೆ ವಿಸ್ತೃತವಾದ ಚರ್ಚೆ ನಡೆಯಬೇಕಾಗಿದೆ ಎಂದು ಪೀಠ ಅಭಿಪ್ರಾಯವ್ಯಕ್ತಪಡಿಸಿದೆ
Comments are closed.