ದಾವಣಗೆರೆ : ರೈಲ್ವೆ ಹಳಿ ಕಾಮಗಾರಿಯ ಹಿನ್ನಲೆಯಲ್ಲಿ ವಿಜಯಪುರ-ಯಶವಂತಪುರ ನಡುವೆ ಸಂಚಾರ ನಡೆಸುವ ರೈಲು ಕೆಲವು ದಿನಗಳ ಕಾಲ ಸ್ಥಗಿತಗೊಳ್ಳಲಿದೆ. ನೈಋತ್ಯ ರೈಲ್ವೆ ಈ ಕುರಿತು ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
“ನವೆಂಬರ್ 23 ರಿಂದ 26ರ ತನಕ ವಿಜಯಪುರ-ಯಶವಂತಪುರ ನಡುವೆ ಸಂಚರಿಸುವ 06541/06542 ರೈಲು ಸೇವೆಯನ್ನು ಸ್ಥಗಿತಗೊಳಿಸಲಾಗಿದೆ” ಎಂದು ಕೊಟ್ಟೂರು ರೈಲ್ವೆ ನಿಲ್ದಾಣದ ವ್ಯವಸ್ಥಾಪಕ ಶ್ರೀನಿವಾಸ ಮೂರ್ತಿ ಹೇಳಿದ್ದಾರೆ.
ಹರಿಹರ- ದಾವಣಗೆರೆ ನಡುವೆ ಹಳಿ ಕಾಮಗಾರಿ ನಡೆಯುತ್ತಿದೆ. ಆದ್ದರಿಂದ, ಕಾಮಗಾರಿಗೆ ಅಡ್ಡಿಯಾಗಬಾರದು ಎಂದು 4 ದಿನಗಳ ಕಾಲ ರೈಲು ಸಂಚಾರ ನಡೆಸುವುದಿಲ್ಲ. ನವೆಂಬರ್ 27ರಿಂದ ನಿಗದಿತ ವೇಳಾಪಟ್ಟಿಯಂತೆ ರೈಲು ಸಂಚಾರ ನಡೆಸಲಿದೆ ಎಂದು ಇಲಾಖೆ ಹೇಳಿದೆ.
ಎಲ್ ಎಚ್ ಬಿ ಬೋಗಿ ಸೇರ್ಪಡೆ : ಮೈಸೂರು-ಅಜ್ಮೀರ್-ಮೈಸೂರು ಎಕ್ಸ್ಪ್ರೆಸ್, ಮೈಸೂರು-ಸಾಯಿನಗರ ಶಿರಡಿ- ಮೈಸೂರು ಎಕ್ಸ್ಪ್ರೆಸ್ ರೈಲಿಗೆ ನವೆಂಬರ್ 14ರಿಂದ ಸಾಂಪ್ರದಾಯಿಕ ರೇಕ್ ಬದಲಿಸಿ ಎಲ್ ಎಚ್ ಬಿ ಬೋಗಿಗಳನ್ನು ಅಳವಡಿಸಲಾಗುತ್ತಿದೆ.
ನೈಋತ್ಯ ರೈಲ್ವೆ ಗದಗ ರಸ್ತೆಯ ಹುಬ್ಬಳ್ಳಿ ರೈಲು ನಿಲ್ದಾಣದ 2ನೇ ಪ್ರವೇಶದ್ವಾರದ ಪಕ್ಕದಲ್ಲಿ ರೈಲ್ವೆ ಪರಂಪರೆಯನ್ನು ಹೇಳುವ ವಸ್ತು ಸಂಗ್ರಹಾಲಯ ನಿರ್ಮಾಣ ಮಾಡಲಿದೆ. ರೈಲ್ವೆಗೆ ಸಂಬಂಧಿಸಿದ ಹಳೆಯ ಫೋಟೋ, ಕಾಗದಗಳನ್ನು ಇಲ್ಲಿ ಸಂಗ್ರಹಿಸಲಾಗುತ್ತದೆ.
Comments are closed.