ಕರ್ನಾಟಕ

ರನ್ ವೇನಿಂದ ಜಾರಿದ ವಿಮಾನ :ತಪ್ಪಿದ ಭಾರೀ ಅನಾಹುತ

Pinterest LinkedIn Tumblr

ಬೆಂಗಳೂರು 14:  ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ರನ್ ವೇನಿಂದ ಜಾರಿದ್ದು ಭಾರೀ ಅನಾಹುತ ತಪ್ಪಿದೆ.

ನವಂಬರ್ 11 ರ ಸೋಮವಾರ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ನವೆಂಬರ್ 11 ರಂದು 7.30 ಕ್ಕೆ ನಾಗಪುರದಿಂದ ಬಂದಿದ್ದ ಗೋ ಏರ್ ವಿಮಾನ ಹವಾಮಾನ ವೈಪರೀತ್ಯದ ಕಾರಣದಿಂದಾಗಿ ರನ್ ವೇ ನಿಂದ ಜಾರಿದೆ.

ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಈ ವಿಮಾನದಲ್ಲಿ ಸಿಬ್ಬಂದಿ ಸೇರಿ 180 ಪ್ರಯಾಣಿಕರಿದ್ದರು. ಪೈಲಟ್ ನನ್ನು ಅಮಾನತು ಮಾಡಿ ತನಿಖೆಗೆ ಆದೇಶಿಸಲಾಗಿದೆ ಎಂದು ವಿಮಾನಯಾನ ಸಚಿವಾಲಯ ಹೇಳಿದೆ.

Comments are closed.