ರಾಷ್ಟ್ರೀಯ

ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ ಜಮೀನು ನೀಡಲು ಮುಂದಾದ ಹಿಂದೂ ಕುಟುಂಬಗಳು

Pinterest LinkedIn Tumblr


ಅಯೋಧ್ಯೆ: ದಶಕಗಳಿಂದ ಬಗೆಹರಿಯದಿದ್ದ ಅಯೋಧ್ಯೆ ಜಮೀನು ವಿವಾದ ಪ್ರಕರಣವನ್ನು ನವೆಂಬರ್ 9 ರಂದು ಸುಪ್ರೀಂ ಕೋರ್ಟ್ ಇತ್ಯರ್ಥ ಪಡಿಸಿ ತೀರ್ಪು ನೀಡಿದ ನಂತರ ಕೋಮು ಶಾಂತಿ ಮತ್ತು ಸಾಮರಸ್ಯವನ್ನು ಬಲಪಡಿಸುವ ಪ್ರಯತ್ನಗಳಿಗೆ ಸ್ಪಷ್ಟ ಉದಾಹರಣೆಯಾಗಿ ಸ್ಥಳೀಯ ಕೆಲವರು ಈ ಪ್ರದೇಶದಲ್ಲಿ ಮಸೀದಿ ನಿರ್ಮಾಣಕ್ಕೆ ತಮ್ಮ ಜಮೀನು ನೀಡಲು ಮುಂದಾಗಿದ್ದಾರೆ.

ಜಿಲ್ಲಾಡಳಿತ ಮಸೀದಿಗೆ ಪ್ರಮುಖ ಸ್ಥಳಗಳಲ್ಲಿ ಜಮೀನು ಹುಡುಕುತ್ತಿದೆ. ಇವುಗಳಲ್ಲಿ ಕೆಲವನ್ನು ಪರಿಗಣನೆಗೆ ಆಯ್ಕೆ ಮಾಡಲಾಗಿದೆ. ರಾಜ್ ನಾರಾಯಣ್ ದಾಸ್ ಎಂಬುವವರು ಸರಂಗಾಪುರ ರಸ್ತೆಯಲ್ಲಿರುವ ಬಡಗಾಂವ್ ಬಳಿ ತಮ್ಮ ಐದು ಎಕರೆ ಜಮೀನನ್ನು ನೀಡಲು ಮುಂದಾಗಿದ್ದಾರೆ.

Comments are closed.