ಕರಾವಳಿ

ಅಬುದಾಬಿಯ ಉದ್ಯಮಿಗಳಿಂದ ಪಿಲಿಕುಳ ಅಭಿವೃದ್ಧಿ ಕಾರ್ಯಕ್ಕೆ ರೂ.15 ಲಕ್ಷ ದೇಣಿಗೆ

Pinterest LinkedIn Tumblr

ಮಂಗಳೂರು : ಅಬುದಾಬಿಯ ಖ್ಯಾತ ಉದ್ಯಮಿ ರಾಮ್‍ದಾಸ್ ಕಾಮತ್ ಮತ್ತು ಅವರ ಪತ್ನಿ ಜಯಶ್ರಿ ಕಾಮತ್‍ರವರು ಪಿಲಿಕುಳ ಜೈವಿಕ ಉದ್ಯಾನವನದ ಅಭಿವೃದ್ಧಿ ಕಾರ್ಯಕ್ಕೆ ರೂ.15 ಲಕ್ಷ ದೇಣಿಗೆ ನೀಡಿದರು.

ಪಿಲಿಕುಳದಲ್ಲಿ ಇತ್ತೀಚೆಗೆ ಜನಿಸಿದ ಐದು ಹುಲಿ ಮರಿಗಳ ವಾಸ್ತವ್ಯದ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಲು ಈ ಹಣವನ್ನು ವಿನಿಯೋಗಿಸ ಲಾಗುವುದು, ಹುಲಿ ಮರಿಗಳಿಗೆ ಅವರು ಸೂಚಿಸಿದಂತೆ ನಾಮಕರಣ ಮಾಡಲಾಗುವುದು ಎಂದು ನಿರ್ದೇಶಕರು, ಪಿಲಿಕುಳ ಜೈವಿಕ ಉದ್ಯಾನವನ ಮಂಗಳೂರು ಹೆಚ್.ಜೆ.ಭಂಡಾರಿ ತಿಳಿಸಿದ್ದಾರೆ.

Comments are closed.