ಹಾವೇರಿ: ಜಿಲ್ಲೆಯ ಉಪಸಮರದ ಹೈವೊಲ್ಟೇಜ್ ಕ್ಷೇತ್ರ ಎನಿಸಿದ ಹಿರೇಕೆರೂರು ವಿಧಾನಸಭೆ ಕ್ಷೇತ್ರದಲ್ಲಿ ಕ್ಷಣಕ್ಷಣಕ್ಕೂ ವಿಚಿತ್ರ ರಾಜಕೀಯ ವಿದ್ಯಮಾನಗಳು ನಡೆಯುತ್ತಿದ್ದು ರಟ್ಟಿಹಳ್ಳಿಯ ಕಂಬಿಣಕಂಥಿ ಮಠದ ಸ್ವಾಮೀಜಿ ಜೆಡಿಎಸ್ನಿಂದ ಕಣಕ್ಕಿಳಿದಿದ್ದಾರೆ.
ಅನರ್ಹ ಶಾಸಕ ಬಿ.ಸಿ. ಪಾಟೀಲರನ್ನು ಶತಾಯಗತಯ ಸೋಲಿಸಲೇ ಬೇಕು ಎಂಬ ಕಾರಣಕ್ಕಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಚುನಾವಣಾ ಚದುರಂಗದಾಟದಲ್ಲಿ ಸ್ವಾಮೀಜಿಯ ದಾಳ ಉರುಳಿಸಿದ್ದಾರೆ.
ಕುಮಾರಸ್ವಾಮಿಯವರು ಸ್ವತಃ ದೂರವಾಣಿ ಕರೆ ಮಾಡಿ ಸ್ವಾಮೀಜಿಯವರನ್ನು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂಬ ಮಾತುಗಳು ವ್ಯಾಪಕವಾಗಿ ಕೇಳಿ ಬಂದಿವೆ.
Comments are closed.