ರಾಷ್ಟ್ರೀಯ

ಆಗ್ರಾ ನಗರದ ಹೆಸರು ಬದಲಾವಣೆಗೆ ಉತ್ತರ ಪ್ರದೇಶ ಸರ್ಕಾರ ನಿರ್ಧಾರ

Pinterest LinkedIn Tumblr

ಲಕ್ನೋ : ಜಗತ್​ ಪ್ರಸಿದ್ಧ ತಾಜ್​ ಮಹಲ್​ ಹೊಂದಿರುವ ಉತ್ತರ ಪ್ರದೇಶದ ಆಗ್ರಾ ನಗರದ ಹೆಸರು ಬದಲಾವಣೆಗೆ ಜುತ್ತರ ಪ್ರದೇಶ ಸರ್ಕಾರ ಮುಂದಾಗಿದೆ.

ಆಗ್ರಾ ನಗರವನ್ನು ಆಗ್ರಾವನ ಎಂದು ಬದಲಾಯಿಸುವ ಕುರಿತು ಬಿಜೆಪಿಯ ಕೆಲ ನಾಯಕರು ಸಲಹೆಯನ್ನು ನೀಡಿದ್ದಾರೆ. ಆಗ್ರಾವಾಲಗಳು ಹೆಚ್ಚಿರುವ ಪ್ರದೇಶ ಇದಾಗಿದ್ದು ಇಲ್ಲಿ ಮಹಾರಾಜ ಆಗ್ರಾಸೇನ್​ ಪೂಜಿಸಲಾಗುತ್ತದೆ. ಈ ಹಿನ್ನೆಲೆ ಈ ಹೆಸರು ಬದಲಾವಣೆಗೆ ಪ್ರಸ್ತಾಪ ಬಂದಿದೆ,

ಉತ್ತರ ಆಗ್ರಾ ವಿಧಾನಸಭಾ ಕ್ಷೇತ್ರದಿಂದ ಶಾಸಕ ಜಗನ್​ ಪ್ರತಾಪ್​ ಗಾರ್ಗ್​ ಈ ಕುರಿತು ಮುಖ್ಯಮಂತ್ರಿ ಆದಿತ್ಯನಾಥ್​ಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಈ ಸಂಬಂಧ ಸರ್ಕಾರ ಅಂಬೇಡ್ಕರ್ ವಿಶ್ವವಿದ್ಯಾಲಯದ ಪರಿಣತರ ಸಲಹೆ ಕೇಳಲಾಗಿದೆ. ಆಗ್ರಾದಲ್ಲಿರುವ ಅಂಬೇಡ್ಕರ್ ವಿಶ್ವವಿದ್ಯಾಲಯಕ್ಕೆ ಆಗ್ರಾದ ಹೆಸರಿನ ಕುರಿತು ಅಧ್ಯಯನ ನಡೆಸಿ ಸಲಹೆ ನೀಡಲು ಸೂಚನೆ ನೀಡಲಾಗಿದೆ.

ಈ ಹಿಂದೆಯೂ ಉತ್ತರ ಪ್ರದೇಶ ಸರ್ಕಾರ ಹೆಸರು ಮರುನಾಮಕರಣದ ಸೂಚನೆಗಳನ್ನು ನೀಡಿತ್ತು. ಅಲಹಾಬಾದ್‌ ಹೆಸರನ್ನು ಪ್ರಯಾಗ್‌ರಾಜ್ ಎಂಬ ಹಳೆಯ ಹೆಸರಿಗೆ ಮರುನಾಮಕರಣ ಮಾಡಲಾಗಿತ್ತು. ಐತಿಹಾಸಿಕ ಮುಘಲ್ ಸರಾಯ್ ರೈಲು ನಿಲ್ದಾಣಕ್ಕೆ ದೀನದಯಾಳ್ ಉಪಾಧ್ಯಾಯ ರೈಲು ನಿಲ್ದಾಣ ಎಂದು ನಾಮಕರಣ ಮಾಡಲಾಗಿತ್ತು. ಈದೀಗ ಆದಿತ್ಯನಾಥ್​ ಸರ್ಕಾರದ ಕಣ್ಣು ಆಗ್ರಾದ ಮೇಲೆ ಬಿದ್ದಿದೆ. ಹೆಸರು ಬದಲಾವಣೆಯಿಂದ ಯಾವುದೇ ಬದಲಾವಣೆ ಆಗುವುದಿಲ್ಲ. ಕಾರಣ ಈಗಾಗಲೇ ತಾಜ್​ ಮಹಲ್​ನಿಂದಾಗಿ ಆಗ್ರಾ ಹೆಸರು ವಿಶ್ವ ವಿಖ್ಯಾತಿ ಪಡೆದಿದೆ ಎಂಬುದು ಹಲವರ ಮಾತು.

Comments are closed.