ಕರ್ನಾಟಕ

ಅನ್ನಭಾಗ್ಯ ಅಕ್ಕಿ ಗೋಡಾನ್‌ ಮೇಲೆ ಪೊಲೀಸರು ದಾಳಿ- 60 ಟನ್ ಅಕ್ರಮ ಅಕ್ಕಿ ವಶ.

Pinterest LinkedIn Tumblr

ಚಿತ್ರದುರ್ಗ: ಅನ್ನಭಾಗ್ಯ ಅಕ್ಕಿ ಗೋಡಾನ್‌ ಮೇಲೆ ರಾಂಪುರ ಪೊಲೀಸರು ದಾಳಿ ನಡೆಸಿ, ಅಕ್ರಮವಾಗಿ ಸಂಗ್ರಹಿಸಿದ್ದ ಭಾರಿ ಪ್ರಮಾಣದ ಅಕ್ರಮ ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಕೋನಾಪುರ ಗ್ರಾಮದಲ್ಲಿ ಪಡಿತರ ಅಕ್ಕಿ ಹಾಗೂ ಶಾಲಾ ಬಿಸಿಯೂಟದ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿಡಲಾಗಿದೆ ಎಂಬ ಮಾಹಿತಿ ಮೇರೆಗೆ ಮೊಳಕಾಲ್ಮೂರು ತಹಶೀಲ್ದಾರ್ ಬಸವರಾಜ್ ಹಾಗೂ ಪಿಎಸ್‌ಐ ಗುಡ್ಡಪ್ಪ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಈ ಸಂದರ್ಭದಲ್ಲಿ ಸುಮಾರು 60 ಟನ್ ನಷ್ಟು ಅಕ್ರಮ ಅಕ್ಕಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಚಿದಾನಂದಪ್ಪ, ಸಣ್ಣ ಮಾರಣ್ಣ ಸೇರಿ ಐವರ ವಿರುದ್ಧ ಎಫ್‌ಐ ಆರ್ ದಾಖಲಾಗಿದೆ.

Comments are closed.