“ಬಿಗ್ ಬಾಸ್ ಕನ್ನಡ ಸೀಸನ್ 7″ರಲ್ಲಿ ಜೈ ಜಗದೀಶ್ ತಮ್ಮ ದೊಡ್ಡ ಕೊರಗನ್ನು ಹೇಳಿ ಬಿಕ್ಕಿ ಬಿಕ್ಕಿ ಅತ್ತಿದ್ದರು. ಅವರ ಮೊದಲ ಮದುವೆ, ಮಗಳು ಅರ್ಪಿತಾ ವಿಚಾರ ಹಲವರಿಗೆ ಗೊತ್ತಿರಲಿಲ್ಲ. ಈಗ ಅವರು ಬಿಗ್ ಬಾಸ್ ಮನೆಯಲ್ಲಿ 5 ವಾರಗಳ ಕಾಲ ಕಳೆದು ಈಗ ಮನೆಯಿಂದ ಹೊರಬಂದಿದ್ದಾರೆ. ‘ಸೂಪರ್ ಸಂಡೇ ವಿಥ್ ಸುದೀಪ’ ಕಾರ್ಯಕ್ರಮದಲ್ಲಿ ಜೈ ಜಗದೀಶ್ ಮಗಳು ಅರ್ಪಿತಾ, ಪತ್ನಿ ವಿಜಯಲಕ್ಷ್ಮೀ ಸಿಂಗ್ ಮಾತನಾಡಿದ್ದಾರೆ.
ಸುದೀಪ್ ಮುಂದೆ ಜೈ ಜಗದೀಶ್ ಹೇಳಿದ್ದೇನು?
“ಬಿಗ್ ಬಾಸ್ ಅನುಭವ ಎಲ್ಲರಿಗೂ ಆಗಬೇಕು, ಈ ಅನುಭವ ಸಿಕ್ಕರೆ ಜೀವನದಲ್ಲಿ ದೊಡ್ಡ ಬದಲಾವಣೆ ಆಗಲಿದೆ. ನಾನು ಮನೆಗೆ ಹೋದಮೇಲೆ ಬೇರೆ ರೀತಿಯಲ್ಲಿ ಬದಲಾಗಿ ಇರುತ್ತೇನೆ. ಇಲ್ಲಿಯವರೆಗೆ ನನ್ನ ಮಗಳು ಮತ್ತು ಹೆಂಡತಿ ಜೊತೆ ಇದ್ದಹಾಗೆ ಇರೋದಿಲ್ಲ. ಅಷ್ಟು ಬಿಗ್ ಬಾಸ್ ನನ್ನ ಮೇಲೆ ಪ್ರಭಾವ ಬೀರಿದೆ. ಕೆಲವು ಕಡೆ ಮಾತನಾಡಬೇಕು ಅನಿಸತ್ತೆ. ಹಲವಾರು ವರ್ಷಗಳಿಂದ ಕ್ಷಮೆ ಕೇಳಬೇಕಿತ್ತು, ನಾನು ಮಾತನಾಡಬೇಕಿತ್ತು. ಜನರ ಮುಂದೆ ಕ್ಷಮೆ ಕೇಳಿದ್ದು ನೋಡಿ ತುಂಬ ಖುಷಿಯಾಯಿತು, ಮನಸ್ಸಿಗೆ ಸಮಾಧಾನವಾಯಿತು” ಎಂದಿದ್ದಾರೆ ಜೈ ಜಗದೀಶ್
ವಿಜಯಲಕ್ಷ್ಮೀ ಸಿಂಗ್ ಹೇಳಿದ್ದೇನು?
“ಮಾತನಾಡಲಾಗುತ್ತಿಲ್ಲ. ನನಗೆ ತುಂಬ ಕೋಪ ಬರಲ್ಲ. ಅವರಿಗೆ ಕೋಪ ಬಂದರೆ ನನಗೆ ನಗು ಬರತ್ತೆ. ಇತ್ತೀಚೆಗೆ ನಾನು ಅವರ ಭಾಷೆಯಲ್ಲಿ ಬೈಯ್ಯುತ್ತಿದ್ದೆ. ಮೊದಲ ಮದುವೆ, ಮೊದಲನೇ ಮಗಳು ಅರ್ಪಿತಾ ಬಗ್ಗೆ ಜಗದೀಶ್ ಮಾತನಾಡಿದ್ದನ್ನು ಕೇಳಿ ಮನಸ್ಸಿಗೆ ತುಂಬ ಖುಷಿಯಾಯಿತು. ಅವರ ಮನಸ್ಸಿನಲ್ಲಿ ಹುದುಗಿದ್ದದ್ದು ಹೊರಗೆ ಬಂದಿದೆ. ಈಗ ಅವರ ಮನಸ್ಸಿನಲ್ಲಿ ಯಾವುದೇ ಕಲ್ಮಷಗಳಿಲ್ಲ. ಅವರೀಗ ಕ್ಲೀನ್ ಮ್ಯಾನ್. ಐ ಲವ್ ಯೂ” ಎಂದು ಹೇಳಿದ್ದಾರೆ ವಿಜಯಲಕ್ಷ್ಮೀ ಸಿಂಗ್
ಮೊದಲ ಮಗಳು ಅರ್ಪಿತಾ ಹೇಳಿದ್ದೇನು?
“ನನಗೆ ಕ್ಷಮೆ ಕೇಳೋದು ಬೇಡ, ನಾನು ನಿಮ್ಮನ್ನು ಎಂದಿಗೂ ಪ್ರೀತಿಸುತ್ತೇನೆ, ನಾನು ಸಂತೃಪ್ತಿ ಹೊಂದಿದ್ದೇನೆ” ಎಂದಿದ್ದಾರೆ ಅರ್ಪಿತಾ.
ವೈಭವಿ ಹೇಳಿದ್ದೇನು?
“ನಮ್ಮ ತಂದೆಯೇ ನಮಗೆ ಬಿಗ್ ಬಾಸ್, ನನ್ನ ರಾಜ” ಎಂದಿದ್ದಾರೆ ವೈಭವಿ
Comments are closed.