ಮಂಗಳೂರು ನವೆಂಬರ್ 19 : ನಗರದ ಮಹಿಳಾ ಕಾಲೇಜಿನಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿನಿ ನಾಪತ್ತೆಯಾಗಿರುವ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆ ಕದ್ರಿಯಲ್ಲಿ ಪ್ರಕರಣ ದಾಖಲಾಗಿದೆ.
ಮಂಜುಳ(19) ಎಂಬ ಯುವತಿ ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ 1ನೇ ವರ್ಷದ ಬಿ.ಕಾಂ ಕಲಿಯುತ್ತಿದ್ದು, ಅಕ್ಟೋಬರ್ 18ರಂದು ತನ್ನ ಮನೆಯಿಂದ ಕಾಲೇಜಿಗೆಂದು ಹೋದವರು ಕಾಣೆಯಾಗಿದ್ದಾರೆ.
ಕಾಣೆಯಾದ ಯುವತಿಯ ಚಹರೆ ಇಂತಿವೆ:- ಹೆಸರು- ಮಂಜುಳ, ಪ್ರಾಯ-19 ವರ್ಷ, ಎತ್ತರ-5 ಅಡಿ, ಬಿಳಿ ಮೈಬಣ್ಣ, ಸಾಧಾರಣ ಶರೀರ, ಧರಸಿದ ಬಟ್ಟೆ- ಆಕಾಶ ನೀಲಿ ಬಣ್ಣದ ಸಪೂರ ಗೆರೆ ಇರುವ ಚೂಡಿದಾರ ಸ್ಕೂಲ್ ಯೂನಿಫಾರ್ಮ್ ಟಾಪ್ ಆಕಾಶ ನೀಲಿ ಬಣ್ಣದ ಪ್ಯಾಂಟ್ ಆಕಾಶ ನೀಲಿ ಬಣ್ಣದಶಾಲ್ ಧರಿಸಿರುತ್ತಾರತೆ, ಮಾತಾನಾಡುವ ಭಾಷೆ- ಕನ್ನಡ.
ಕಾಣೆಯಾದ ಯುವತಿ ಬಗ್ಗೆ ಮಾಹಿತಿ ದೊರಕಿದ್ದಲ್ಲಿ ಪೊಲೀಸ್ ನಿರೀಕ್ಷಕರು, ಪೂರ್ವ ಪೊಲೀಸ್ ಠಾಣೆ ಮಂಗಳೂರು ದೂರವಾಣಿ ಸಂಖ್ಯೆ : 2220520 ಅಥವಾ ಜಿಲ್ಲಾಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆ : 2220800, 2220801 ಇವರನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.
Comments are closed.