ಉಡುಪಿ: ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಸಮುದ್ರದಲ್ಲಿ ಬುಲ್ ಟ್ರಾಲಿಂಗ್, ಬೆಳಕು ಮೀನುಗಾರಿಕೆ, ಚೌರಿ ಮತ್ತಿತರ ಕೊಳೆತ ವಸ್ತುಗಳನ್ನು ಹಾಕಿ ಅಸಾಂಪ್ರದಾಯಿಕ ರೀತಿಯಲ್ಲಿ ಮೀನು ಹಿಡಿಯುವುದು, ಮುಂತಾದ ಹಾನಿಕಾರಕ ಮೀನುಗಾರಿಕಾ ಪದ್ಧತಿಗಳನ್ನು ನಿಷೇಧಿಸಿದೆ.
ಆದಾಗ್ಯೂ ಇತ್ತೀಚಿನ ದಿನಗಳಲ್ಲಿ ಸಮುದ್ರದಲ್ಲಿ ನಿಷೇಧಿತ ಮೀನುಗಾರಿಕೆ ಪ್ರಮುಖವಾಗಿ ಬುಲ್ ಟ್ರಾಲ್, ಬೆಳಕು ಮೀನುಗಾರಿಕೆಗೆ ತೊಡಗುತ್ತಿರುವುದಾಗಿ ದೂರುಗಳು ಸ್ವೀಕೃತವಾಗಿದ್ದು, ಈ ಬಗ್ಗೆ ಇಂಡಿಯನ್ ಕೋಸ್ಟ್ ಗಾರ್ಡ್ ಮತ್ತು ಕರಾವಳಿ ಕಾವಲು ಪೊಲೀಸ್ ಪಡೆ ಹಾಗೂ ಇಲಾಖಾಧಿಕಾರಿಗಳಿಗೆ ಕಟ್ಟು ನಿಟ್ಟಿನ ಆದೇಶ ಪಾಲನೆಗೆ ತಿಳಿಸಲಾಗಿದೆ.
ಆದೇಶದ ಉಲ್ಲಂಘನೆ ಕಂಡುಬಂದಲ್ಲಿ ಮೀನುಗಾರಿಕಾ ಲೈಸನ್ಸ್ ರದ್ಧತಿ, ಡೀಸೆಲ್ ತಡೆಹಿಡಿಯುವಂತಹ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.
Comments are closed.