ಕರಾವಳಿ

ಮಂಗಳೂರು-ಬೆಂಗಳೂರು-ಬನಶಂಕರಿ ಮಾರ್ಗದಲ್ಲಿ ಮಲ್ಟಿಆಕ್ಸಿಲ್ ಸಾರಿಗೆ ಆರಂಭ

Pinterest LinkedIn Tumblr

(ಸಾಂದರ್ಭಿಕ ಚಿತ್ರ)

ಮಂಗಳೂರು, ಡಿಸೆಂಬರ್.01: ಕರಾರಸಾ.ಸಂಸ್ಥೆಯು ಮಂಗಳೂರು -ಬೆಂಗಳೂರು – ಬನಶಂಕರಿ ಮಾರ್ಗದಲ್ಲಿ ಮಲ್ಟಿಆಕ್ಸಿಲ್ ಬಸ್ ಸಾರಿಗೆಯನ್ನು ಬನಶಂಕರಿ ಬಡಾವಣೆಗೆ ವಿಸ್ತರಿಸಿ ಕಾರ್ಯಾಚರಿಸಲಾಗುತ್ತಿದೆ. ಈ ಬಸ್ ಮಂಗಳೂರಿನಿಂದ ರಾತ್ರಿ 11.10 ಗಂಟೆಗೆ ಹೊರಟು ಹಾಸನ, ಕುಣಿಗಲ್ ಮಾರ್ಗವಾಗಿ ಬೆಂಗಳೂರಿಗೆ ತಲುಪಿ, ಅಲ್ಲಿಂದ ಜಯನಗರ 4ನೇ ಬ್ಲಾಕ್ ಮೂಲಕ ಬನಶಂಕರಿಗೆ 6 ಗಂಟೆಗೆ ತಲುಪುವುದು.

ಮರುಪ್ರಯಾಣದಲ್ಲಿ ಬನಶಂಕರಿಯಿಂದ 9 ಗಂಟೆಗೆ ಹೊರಟು ಜಯನಗರ 4ನೇ ಬ್ಲಾಕ್ (9.10) ಮೂಲಕ ಬೆಂಗಳೂರು ಕೇಂದ್ರಿಯ ಬಸ್ಸು ನಿಲ್ದಾಣ ತಲುಪಿ ಅಲ್ಲಿಂದ 10.40ಕ್ಕೆ ಹೊರಟು ಹಾಸನ ಮಾರ್ಗವಾಗಿ ಮಂಗಳೂರಿಗೆ ಬೆಳಗ್ಗೆ 6 ಗಂಟೆಗೆ ತಲುಪುವುದು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

Comments are closed.