ಕರಾವಳಿ

ಕುಂದಾಪುರದ ಹಟ್ಟಿಕುದ್ರುವಿನ ಅಕ್ರಮ ಮರಳು ಅಡ್ಡೆಗೆ ದಾಳಿ: 50 ಯುನಿಟ್ ಮರಳು ವಶ, ಆರೋಪಿಗಳು ಪರಾರಿ!

Pinterest LinkedIn Tumblr

ಕುಂದಾಪುರ: ಕುಂದಾಪುರ ತಾಲೂಕು ಕಂಡ್ಲೂರು ಠಾಣಾ ವ್ಯಾಪ್ತಿಯ ಹಟ್ಟಿಕುದ್ರು ಅಕ್ರಮ ಮರಳು ಅಡ್ಡೆಗೆ ಕುಂದಾಪುರ ಎಎಸ್ಪಿ ಹರಿರಾಂ ಶಂಕರ್ ನೇತೃತ್ವದ ತಂಡ ಸೋಮವಾರ ಸಂಜೆ ದಾಳಿ ನಡೆಸಿದೆ.

ಖಚಿತ ವರ್ತಮಾನದಂತೆ ಎಎಸ್ಪಿ ಹಾಗೂ ತಂಡ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹಟ್ಟಿಕುದ್ರು ಎಂಬಲ್ಲಿ ಅಕ್ರಮ ಮರಳು ಅಡ್ಡೆಗೆ ದಾಳಿ ನಡೆಸಿದ್ದು ದಾಳಿಯ ವೇಳೆ 1 ಟಿಪ್ಪರ್, 1 ಹಿಟಾಚಿ ಹಾಗೂ ಅಂದಾಜು 50 ಯುನಿಟ್ ನಷ್ಟು ಮರಳನ್ನು ವಶಪಡಿಸಿಕೊಂಡಿದ್ದು, ದಾಳಿಯ ವೇಳೆ ಮಾಹಿತಿ ಪಡೆದ ಆರೋಪಿಗಳು ಸ್ಥಳದಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ.

ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದವರ ವಿರುದ್ಧ ಸದ್ಯ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Comments are closed.