ರಾಷ್ಟ್ರೀಯ

ಶವದ ಜತೆ ಸಂಭೋಗ ನಡೆಸಿದ 38ವರ್ಷದ ವಿಕೃತ ಕಾಮಿಯ ಬಂಧನ

Pinterest LinkedIn Tumblr

ಅಝಂಗಢ್: ನಿದ್ರೆಯಲ್ಲಿದ್ದ ದಂಪತಿ ಹಾಗೂ ಹತ್ತು ವರ್ಷದ ಮಗಳನ್ನು ಹತ್ಯೆಗೈದ ನಂತರ ಮಹಿಳೆಯ ಶವದ ಜತೆ ಸಂಭೋಗ ನಡೆಸಿದ 38ವರ್ಷದ ವಿಕೃತ ಕಾಮಿಯನ್ನು ಉತ್ತರಪ್ರದೇಶದ ಅಜಂಗಢದಲ್ಲಿ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

38 ವರ್ಷದ ನಾಸಿರುದ್ಧೀನ್ ವಿಕೃತ ಕಾಮಿ, ಶವ ಕಾಮಿ ಎಂದು ಪೊಲೀಸರು ತಿಳಿಸಿದ್ದಾರೆ. ಈ ವಿಕೃತ ಕಾಮಿ ಹರ್ಯಾಣ, ದೆಹಲಿ ಮತ್ತು ಪಶ್ಚಿಮ ಬಂಗಾಳದಲ್ಲಿಯೂ ಹಲವಾರು ಕೃತ್ಯಗಳನ್ನು ಎಸಗಿರುವುದಾಗಿ ವಿವರಿಸಿದ್ದಾರೆ. ದಂಪತಿ ಹಾಗೂ ಮಗಳನ್ನು ಹತ್ಯೆಗೈದಿರುವುದನ್ನು ಒಪ್ಪಿಕೊಂಡಿರುವುದಾಗಿ ತಿಳಿಸಿದ್ದಾರೆ.

ಒಂದು ವಾರದ ಹಿಂದೆ ದಂಪತಿ ಹಾಗೂ ಅವರ ಗಂಡು ಮಗುವನ್ನು ಹತ್ಯೆಗೈದಿರುವ ಘಟನೆ ಮುಬಾರಕ್ ಪುರ್ ಪ್ರದೇಶದಲ್ಲಿ ನಡೆದಿತ್ತು. ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿರುವ ಪ್ರಕರಣ ಪತ್ತೆಯಾಗಿತ್ತು. ದಂಪತಿ ಹತ್ಯೆಯ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ ನಾಸಿರುದ್ದೀನ್ ವಿಚಾರಣೆ ವೇಳೆ 30 ವರ್ಷದ ಮಹಿಳೆ, ಆಕೆಯ ಗಂಡ ಹಾಗೂ ನಾಲ್ಕು ತಿಂಗಳ ಮಗುವನ್ನು ಕೊಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.

ಅಲ್ಲಿಯೂ 30ವರ್ಷದ ಮಹಿಳೆಯ ಶವದ ಜತೆ ಸಂಭೋಗ ನಡೆಸಿದ್ದು, ಮತ್ತೊಂದು ಪ್ರಕರಣದಲ್ಲಿ ಮಹಿಳೆಯ ಶವದ ಜತೆ ಸಂಭೋಗ ನಡೆಸಿ ನಂತರ ಹತ್ತು ವರ್ಷದ ಮಗಳ ಮೇಲೆ ಅತ್ಯಾಚಾರ ನಡೆಸಿ ಕೊಂದಿರುವುದಾಗಿ ತನಿಖೆ ವೇಳೆ ಬಾಯ್ಬಿಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Comments are closed.