ಕರಾವಳಿ

ಬಂಟರ ಯಾನೆ ನಾಡವರ ಮಾತೃ ಸಂಘದ ಚುನಾವಣೆ : ಅಧ್ಯಕ್ಷರಾಗಿ ಮಾಲಾಡಿ ಅಜಿತ್ ಕುಮಾರ್ ರೈ ಪುನರಾಯ್ಕೆ

Pinterest LinkedIn Tumblr

 ಮಂಗಳೂರು, ಡಿಸೆಂಬರ್.09 : ಬಹುನಿರೀಕ್ಷೆ ಮೂಡಿಸಿದ್ದ ಬಂಟರ ಯಾನೆ ನಾಡವರ ಮಾತೃ ಸಂಘದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಮಾಲಾಡಿ ಅಜಿತ್ ಕುಮಾರ್ ರೈ ಅವರು ಪುನರಾಯ್ಕೆ ಆಗಿದ್ದಾರೆ.

ನಗರದ ಬಂಟ್ಸ್ ಹಾಸ್ಟೇಲ್ ನಲ್ಲಿರುವ ರಾಮಕೃಷ್ಣ ಶಿಕ್ಷಣ ಸಂಸ್ಥೆಯ ಕಚೇರಿಯಲ್ಲಿ ಭಾನುವಾರ ಬಂಟರ ಚುನಾವಣೆ ನಡೆದಿದ್ದು, ಮತದಾನದ ಮತ ಎಣಿಕೆ ಕಾರ್ಯ ರಾತ್ರಿ ಮುಕ್ತಾಯಗೊಂಡಿದೆ. ದದ.ಕ., ಉಡುಪಿ ಹಾಗೂ ಕಾಸರಗೋಡು ಜಿಲ್ಲೆಯಲ್ಲಿರುವ ಸಂಘದ ಸದಸ್ಯರು ಮತದಾನದಲ್ಲಿ ಪಾಲ್ಗೊಂಡಿದ್ದರು.

ಹಾಲಿ ಅಧ್ಯಕ್ಷ ಅಜಿತ್ ಕುಮಾರ್ ರೈ ಹಾಗೂ ಕಾರ್ಮಿಕ ಮುಖಂಡ ಸುರೇಶ್ಚಂದ್ರ ಶೆಟ್ಟಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿತ್ತು. ಅಂತಿಮವಾಗಿ ಚುನಾವಣೆ ನಡೆದು ಫಲಿತಾಂಶ ಪ್ರಕಟಗೊಂಡಿದೆ. ಒಟ್ಟು 22,800 ಮತದಾರರಲ್ಲಿ 7337ಮಂದಿ ಮತ ಚಲಾಯಿಸಿದ್ದಾರೆ. ಮಾಲಾಡಿ ಅಜಿತ್ ಕುಮಾರ್ ರೈ 4,791 ಮತ ಪಡೆದಿದ್ದರು. ಸುರೇಶ್ಚಂದ್ರ ಶೆಟ್ಟಿ 2193 ಮತಗಳನ್ನಷ್ಟೇ ಪಡೆಯಲು ಶಕ್ತರಾದರು. ಮಾಲಾಡಿ ಅಜಿತ್ ಕುಮಾರ್ ಅವರು ಸುರೇಶ್ಚಂದ್ರ ಶೆಟ್ಟಿ ವಿರುದ್ಧ 2,598 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ಆ ಮೂಲಕ ಅಜಿತ್ ಕುಮಾರ್ ಮೂರನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಈ ಹಿಂದೆ ಮೂರು ಬಾರಿ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷರಾಗಿ ಮಾಲಾಡಿ ಅಜಿತ್ ಕುಮಾರ್ ರೈ ಅಯ್ಕೆಯಾಗಿದ್ದರು. ಇದರಲ್ಲಿ ಎರಡು ಬಾರಿ ಚುನಾಯಿತರಾಗಿ ಮತ್ತು ಕಳೆದ ಬಾರಿ ಅವಿರೀಧವಾಗಿ ಅಯ್ಕೆಯಾಗಿದ್ದರು.

ದ.ಕ. ಜಿಲ್ಲೆಯ ಯುವ ಬಂಟರ ಸಂಘದ ಅಧ್ಯಕ್ಷರಾಗಿದ್ದ ಮಾಲಾಡಿ ಅಜಿತ್ ಕುಮಾರ್ ರೈ ಅವರು ಬಂಟರ ಯಾನೆ ನಾಡವರ ಮಾತೃ ಸಂಘದ ಸಂಘಟನ ಕಾರ್ಯದರ್ಶಿಯಾಗಿ, ಪ್ರಥಮ ವಿಶ್ವಬಂಟರ ಸಮ್ಮೇಳನದ ಕಾರ್ಯದರ್ಶಿಯಾಗಿ, ಮಂಗಳೂರಿನಲ್ಲಿ ನಡೆದ ಬಂಟರ ವಿಶ್ವ ಸಮ್ಮೇಳನದ ಮಹಾಪೋಷಕರಾಗಿ, ಬಂಟರ ಯಾನೆ ನಾಡವರ ಮಾತೃ ಸಂಘದ ವಿವಿಧ ಹುದ್ದೆಗಳನ್ನು ನಿರ್ವಹಿಸಿ ಅನಂತರ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಗೆಲುವಿನ ಬಳಿಕ ಮಾತನಾಡಿದ ಮಾಲಾಡಿ ಅಜಿತ್ ಕುಮಾರ್ ರೈ ಅವರು, ಈ ಬಾರಿ ನಾನು ಚುನಾವಣೆ ಯಲ್ಲಿ ಸ್ಪರ್ಧಿಸುವ ಉದ್ದೇಶ ಹೊಂದಿರಲಿಲ್ಲ. ಆದರೆ ಸಂಘದ ಎಲ್ಲಾ ಸದಸ್ಯರ ಒಕ್ಕೊರಲ ಅಭಿಪ್ರಾಯದಂತೆ ನಾನು ಚುನಾವಣಾ ಕಣಕ್ಕಿಳಿಯ ಬೇಕಾಯಿತು. ಬಂಟರ ಯಾನೆ ನಾಡವರ ಮಾತೃ ಸಂಘದ ಅಭಿವೃದ್ಧಿ ಯೋಜನೆಗಳನ್ನು ಪೂರ್ಣಗೊಳಿಸಲು 2019ರ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸುವ ಅನಿವಾರ್ಯತೆ ಉಂಟಾಯಿತು.

ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷನಾಗಿ ನನ್ನ ಅವಧಿಯಲ್ಲಿ ಸಾಕಷ್ಟು ಕೆಲಸ ಆಗಿದೆ. ಮರವೂರಿನಲ್ಲಿ ಬಂಟರ ಸಂಘದ ವಿದ್ಯಾ ಸಂಸ್ಥೆ ಗಳನ್ನು ಸ್ಥಾಪಿಸಲು ಒಂದು ಎಕರೆ ಎಂಟು ಸೆಂಟ್ಸ್ ಜಾಗವನ್ನು ದಾನವಾಗಿ ನೀಡಿದ್ದೇನೆ. ಬಂಟ್ಸ್ ಹಾಸ್ಟೇಲ್ ನ ಹಳೆ ಸಭಾ ಭವನ ಕೆಡವಿ ಸುಮಾರು 200ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲು ಯೋಜನೆ ಹಾಕಿರುವ ಬಂಟರ ಸಭಾಭವನ ಪ್ರಗತಿಯಲ್ಲಿದೆ ಎಂದು ಹೇಳಿದರು.

Comments are closed.