ಇಂದೋರ್: ಐದು ವರ್ಷಗಳಲ್ಲಿ ದೇಶದಲ್ಲಿರುವ 10 ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)ಗಳಲ್ಲಿ ಒಟ್ಟು 27 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿ ಉನ್ನತ ಶಿಕ್ಷಣ ಇಲಾಖೆ ಈ ಮಾಹಿತಿ ನೀಡಿದೆ.
ಅದರಂತೆ, ಐಐಟಿ ಮದ್ರಾಸ್‌ನಲ್ಲಿ ಅತಿ ಹೆಚ್ಚು ಅಂದರೆ, 7 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಐಐಟಿ ಖರಗ್ಪುರ ದಲ್ಲಿ 5, ದಿಲ್ಲಿ ಮತ್ತು ಹೈದರಾಬಾದ್ ಐಐಟಿಗಳಲ್ಲಿ ತಲಾ ಮೂವರು ಸೇರಿದಂತೆ ಒಟ್ಟಾರೆ 27 ವಿದ್ಯಾರ್ಥಿಗಳು ಪ್ರಾಣ ಬಿಡುವ ಕಠಿನ ನಿರ್ಧಾರ ಕೈಗೊಂಡಿದ್ದಾರೆ. ಇದೇ ವೇಳೆ ಆತ್ಮಹತ್ಯೆಗೆ ಕಾರಣವೇನು ಎಂಬ ಪ್ರಶ್ನೆಗೆ ಇಲಾಖೆ ಉತ್ತರಿಸಿಲ್ಲ.
Comments are closed.