ಭೋಪಾಲ್: ವ್ಯಕ್ತಿಯೊಬ್ಬ ಒಂದೇ ಮಂಟಪದಲ್ಲಿ ಪತ್ನಿ ಹಾಗೂ ನಾದಿನಿಯನ್ನು ಮದುವೆಯಾದ ಅಪರೂಪದ ಘಟನೆಯೊಂದು ಮಧ್ಯಪ್ರದೇಶದ ಭೈಂಡ್ ಗ್ರಾಮದಲ್ಲಿ ಕಂಡು ಬಂದಿದೆ.
ದಿಲೀಪ್ ಎಂಬವರು ಒಂದೇ ಮಂಟಪದಲ್ಲಿ ತನ್ನ ಪತ್ನಿ ಹಾಗೂ ನಾದಿನಿಯನ್ನು ಮದುವೆಯಾಗಿದ್ದಾರೆ. ದಿಲೀಪ್ ಮೊದಲು ತಮ್ಮ ನಾದಿನಿ ರಚನಾರನ್ನು ಮದುವೆಯಾಗಿದ್ದಾರೆ. ಬಳಿಕ ಅದೇ ಮಂಟಪದಲ್ಲಿ ತಮ್ಮ ಪತ್ನಿ ವಿನಿತಾರನ್ನು ಮರು ಮದುವೆಯಾಗಿದ್ದಾರೆ.
9 ವರ್ಷಗಳ ಹಿಂದೆ ದಿಲೀಪ್, ವಿನಿತಾರನ್ನು ಮದುವೆಯಾಗಿದ್ದರು. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ವಿನಿತಾ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹಾಗಾಗಿ ದಿಲೀಪ್, ವಿನಿತಾ ಅವರ ಸಹೋದರಿ ರಚನಾರನ್ನೇ ಮದುವೆಯಾಗಿದ್ದಾರೆ.
ದಿಲೀಪ್ ಹೂ ಮಾಲೆ ಹಾಕುವಾಗ ಇಬ್ಬರೂ ವೇದಿಕೆ ಮೇಲೆಯೇ ಇದ್ದರು. ದಿಲೀಪ್ ತನ್ನ ಪತ್ನಿಗೆ ವಿನಿತಾಗೆ ಹೂ ಮಾಲೆ ಹಾಕಿದ್ದಾರೆ. ನಂತರ ತಮ್ಮ ನಾದಿನಿ ರಚನಾಗೆ ಹೂವಿನ ಹಾರ ಹಾಕಿ ಪತ್ನಿಯಾಗಿ ಸ್ವೀಕರಿಸಿದ್ದಾರೆ.
ಈ ಬಗ್ಗೆ ದಿಲೀಪ್ ಪ್ರತಿಕ್ರಿಯೆ ನೀಡಿ, ನನ್ನ ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದು, ನಮಗೆ ಪುಟ್ಟ ಪುಟ್ಟ ಮಕ್ಕಳಿದ್ದು, ಅವರನ್ನು ನೋಡಿಕೊಳ್ಳಲು ನಾನು ಮತ್ತೊಂದು ಮದುವೆಯಾಗಲು ನಿರ್ಧರಿಸಿದೆ. ನಾನು ನನ್ನ ನಾದಿನಿ ರಚನಾಳನ್ನು ಇಷ್ಟಪಡುತ್ತಿದ್ದೆ. ಮತ್ತೊಂದು ಮದುವೆಯ ವಿಷಯ ಬಂದಾಗ ನಾನು ಮೊದಲು ಈ ಮಾತನ್ನು ನನ್ನ ಪತ್ನಿಗೆ ಹೇಳಿದೆ. ರಚನಾ ಒಪ್ಪಿದ ಬಳಿಕ ನಾನು ಆಕೆಯನ್ನು ಮದುವೆಯಾದೆ ಎಂದು ತಿಳಿಸಿದ್ದಾರೆ.
Comments are closed.