ಕರಾವಳಿ

ಸಿನಿಪ್ರಿಯರನ್ನು ರಂಜಿಸಲು ಟಾಟಾ ಸ್ಕೈ ಸಜ್ಜು : ರೂ. 45ಕ್ಕೆ ಭಾರತದಾದ್ಯಂತ ಜಾಹೀರಾತು ರಹಿತ ಬ್ಲಾಕ್‌ಬಸ್ಟರ್ ಕನ್ನಡ ಚಲನಚಿತ್ರಗಳು

Pinterest LinkedIn Tumblr

ಕಲರ್‍ಸ್ ಕನ್ನಡದ ಸಹಯೋಗದಲ್ಲಿ ಟಾಟಾ ಸ್ಕೈ ಕನ್ನಡ ಸಿನಿಮಾ ಭಾರತದಾದ್ಯಂತ ಕ ಜಾಹೀರಾತು ರಹಿತ, ಅತ್ಯುತ್ತಮ ಗುಣಮಟ್ಟದ ಬ್ಲಾಕ್‌ಬಸ್ಟರ್ ಚಲನಚಿತ್ರಗಳು ಇಡೀ ದಿನ, ತಿಂಗಳಿಗೆ ಬರೀ 45 ರೂ. ಮಾತ್ರ.

ಮಂಗಳೂರು : ಭಾರತದ ಮುಂಚೂಣಿಯ ಕಂಟೆಂಟ್ ವಿತರಣೆಯ ಪ್ಲಾಟ್‌ಫಾರಂ ಟಾಟಾ ಸ್ಕೈ ಮತ್ತೆ ತನ್ನ ಪ್ರಾದೇಶಿಕ ಭಾಷಾ ಸೇವೆಗಳ ವ್ಯಾಪ್ತಿಯನ್ನು ವಿಸ್ತರಿಸಿದೆ ಮತ್ತು ದಕ್ಷಿಣ ಭಾರತದ ಮಾರುಕಟ್ಟೆಯ ಪ್ರಾದೇಶಿಕ ಪ್ರೇಕ್ಷಕರನ್ನು ತಲುಪಲು ಸದೃಢಗೊಳಿಸಿಕೊಳ್ಳಲು ಸಜ್ಜಾಗಿದೆ. ಮುಂಚೂಣಿಯಲ್ಲಿರುವ ಚಲನಚಿತ್ರ ಕಂಟೆಂಟ್ ಪೂರೈಕೆದಾರರಾದ ಕಲರ್‍ಸ್ ಕನ್ನಡದ ಸಹಯೋಗದಲ್ಲಿ ಟಾಟಾ ಸ್ಕೈ ಕನ್ನಡ ಸಿನಿಮಾವನ್ನು ಪ್ರಾರಂಭಿಸಿದ್ದು 150+ ಚಲನಚಿತ್ರಗಳ ಸಂಗ್ರಹದೊಂದಿಗೆ ಬಿಡುಗಡೆಗೆ ಸಜ್ಜಾಗಿದ್ದು ಸ್ಯಾಂಡಲ್‌ವುಡ್‌ನ ಅತ್ಯಂತ ದೊಡ್ಡ ಬ್ಲಾಕ್‌ಬಸ್ಟರ್ ಮತ್ತು ಮುಂಚೂಣಿಯ ನಟರ ಚಿತ್ರಗಳಿವೆ ಎಂದು ಟಾಟಾ ಸ್ಕೈ ಚೀಫ್ ಕಮ್ಯುನಿಕೇಷನ್ಸ್ ಆಫೀಸರ್ ಅನುರಾಗ್ ಕುಮಾರ್ ಮಾಹಿತಿ ನೀಡಿದ್ದಾರೆ.

ನಗರದ ಖಾಸಗಿ ಹೋಟೇಲೊಂದರಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ವಿವರ ನೀಡಿದ ಅವರು, ಈ ಹೊಸ ಸೇವೆಯು ವೀಕ್ಷಕರಿಗೆ ತಡೆರಹಿತ ಮನರಂಜನೆಯ ಅನುಭವವನ್ನು ನೀಡಲಿದ್ದು ಜಾಹೀರಾತು ಮುಕ್ತ, ಅತ್ಯಂತ ಉತ್ತಮ ಗುಣಮಟ್ಟದ ಬ್ಲಾಕ್‌ಬಸ್ಟರ್ ಚಲನಚಿತ್ರಗಳಲ್ಲದೆ ಹೊಸ ಹಾಗೂ ಕ್ಲಾಸಿಕ್ ಚಲನಚಿತ್ರಗಳನ್ನು ವೀಕ್ಷಿಸಲು ಅವಕಾಶ ಕಲ್ಪಿಸಲಿದೆ.

ಈ ಸೇವೆಯು ಪ್ರತಿ ತಿಂಗಳೂ ಜಾಗತಿಕ ಟೆಲಿವಿಷನ್ ಪ್ರಸಾರವನ್ನೂ ಒದಗಿಸುತ್ತದೆ. ಮುಂದೆ ಬರುವ ಕೆಲ ಚಲನಚಿತ್ರಗಳಲ್ಲಿ ಕಿರಿಕ್ ಪಾರ್ಟಿ, ಕೆ.ಜಿ.ಎಫ್., ಬೆಲ್ ಬಾಟಮ್, ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ, ಅಯೋಗ್ಯ ಮತ್ತಿತರೆ ಇವೆ. ಇದರಿಂದ 24 x7 ಟಾಟಾ ಸ್ಕೈ ಕನ್ನಡ ಸಿನಿಮಾ ಸೇವೆಯನ್ನು ಡಿಟಿಚ್ ಪ್ಲಾಟ್‌ಫಾರಂನಲ್ಲಿ ಅತ್ಯುತ್ತಮ ಕನ್ನಡ ಜಾಹೀರಾತು ಮುಕ್ತ ಸಿನಿಮಾ ಅನುಭವವಾಗಿಸುತ್ತದೆ ಅಲ್ಲದೆ 12 ಚಲನಚಿತ್ರಗಳು ಟೆಲಿವಿಷನ್‌ಗಿಂತ ಒಂದು ವರ್ಷ ಮುಂಚಿತವಾಗಿ ಪ್ರಸಾರವಾಗಲಿವೆ ಎಂದು ಹೇಳಿದರು.

ಕನ್ನಡ ಚಲನಚಿತ್ರೋದ್ಯಮ ಇತ್ತೀಚಿನ ವರ್ಷಗಳಲ್ಲಿ ಅತ್ಯುತ್ತಮ ಗುಣಮಟ್ಟದ ಚಲನಚಿತ್ರಗಳಿಂದ ಪ್ರೇಕ್ಷಕರ ಸಂಖ್ಯೆಯಲ್ಲಿ ಸತತ ಹೆಚ್ಚಳ ಕಾಣುತ್ತಿದೆ. ಟಾಟಾ ಸ್ಕೈ ಕನ್ನಡ ಸಿನಿಮಾ, ಕಲರ್‍ಸ್ ಕನ್ನಡ ಸಹಯೋಗದಲ್ಲಿ ಪ್ರಾರಂಭಿಸುವುದರೊಂದಿಗೆ ದೇಶಾದ್ಯಂತ ಸ್ಯಾಂಡಲ್‌ವುಡ್ ಪ್ರಿಯರಿಗೆ ಅತ್ಯುತ್ತಮ ಕಂಟೆಂಟ್ ನೀಡುವ ಮೂಲಕ ಮಹತ್ತರ ಪ್ರಾದೇಶಿಕ ಸಿನಿಮಾ ಅನುಭವ ನೀಡುವ ಗುರಿ ಹೊಂದಿದ್ದೇವೆ ಎಂದು ಅನುರಾಗ್ ಕುಮಾರ್ ತಿಳಿಸಿದರು.

ವಯಾಕಾಮ್ 18ನ ಕನ್ನಡ ಎಂಟರ್‌ಟೈನ್‌ಮೆಂಟ್ ಕ್ಲಸ್ಟರ್‌ನ ಬ್ಯುಸಿನೆಸ್ ಹೆಡ್ ಪರಮೇಶ್ವರ ಗುಂಡ್ಕಲ್ ಅವರು ಮಾತನಾಡಿ, ಒಟ್ಟು ಕನ್ನಡ ಟೆಲಿವಿಷನ್ ವೀಕ್ಷಕರಲ್ಲಿ ಶೇ.13ರಷ್ಟು ಕೊಡುಗೆ ನೀಡುವ ಮೂಲಕ ಚಲನಚಿತ್ರಗಳು ಕರ್ನಾಟಕದಲ್ಲಿ ಮನರಂಜನೆಯ ಪ್ರಮುಖ ಪ್ರಕಾರವಾಗಿವೆ. ಎಲ್ಲ ಸ್ಕ್ರೀನ್‌ಗಳಲ್ಲೂ ಪ್ರಾದೇಶಿಕ ಚಲನಚಿತ್ರ ವೀಕ್ಷಣೆ ಸತತವಾಗಿ ವೃದ್ಧಿಯಾಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಈ ಸಹಯೋಗದಿಂದ ಎಲ್ಲ ಪ್ರಕಾರದ ಚಲನಚಿತ್ರಗಳಲ್ಲೂ ತಡೆರಹಿತ ಬ್ಲಾಕ್‌ಬಸ್ಟರ್‌ಗಳ ಅತ್ಯುತ್ತಮವಾಗಿ ರೂಪಿಸಿದ ಲೈನಪ್ ನೀಡಲು ಬಯಸಿದ್ದೇವೆ, ಅದು ಕನ್ನಡ ಚಲನಚಿತ್ರ ಪ್ರಿಯರಿಗೆ ಅವರ ಟೆಲಿವಿಷನ್ ಸ್ಕ್ರೀನ್‌ಗೆ ಅಂಟಿಕೊಳ್ಳುವಂತೆ ಮಾಡಲಿದೆ ಎಂದರು.

ಟಾಟಾ ಸ್ಕೈ ಕನ್ನಡ ಸಿನಿಮಾ 150+ ಚಲನಚಿತ್ರಗಳನ್ನು ಆಕ್ಷನ್, ಡ್ರಾಮಾ, ರೊಮ್ಯಾನ್ಸ್, ಕಾಮಿಡಿ ಮತ್ತು ಥ್ರಿಲ್ಲರ್‌ಗಳಲ್ಲಿ ನೀಡಲಿದ್ದು ಅದರಲ್ಲಿ ಹೊಸ ಬ್ಲಾಕ್‌ಬಸ್ಟರ್ ಚಲನಚಿತ್ರಗಳು ಮತ್ತು ಕ್ಲಾಸಿಕ್‌ಗಳಾದ ಕೆಜಿ‌ಎಫ್, ಕಿರಿಕ್ ಪಾರ್ಟಿ, ಅಯೋಗ್ಯ, ಕರ್ವ, ಝೂಮ್, ಚಂದು, ವಾಲಿ, ಎರಡು ನಕ್ಷತ್ರಗಳು, ಹಬ್ಬ, ಯುದ್ಧಕಾಂಡ ಇತ್ಯಾದಿ ಕನ್ನಡ ಚಿತ್ರರಂಗದ ದೊಡ್ಡ ತಾರೆಯರಾದ ಕಿಚ್ಚ ಸುದೀಪ್, ಯಶ್, ರಕ್ಷಿತ್ ಶೆಟ್ಟಿ, ಗಣೇಶ್, ನೀನಾಸಂ ಸತೀಶ್, ರಿಷಭ್ ಶೆಟ್ಟಿ, ರಿಷಿ, ರಾಜ್‌ಕುಮಾರ್, ರವಿಚಂದ್ರನ್, ವಿಷ್ಣುವರ್ಧನ್, ಅಂಬರೀಶ್ ಇತ್ಯಾದಿ ತಾರೆಯರ ಚಿತ್ರಗಳಿವೆ.

ಈ ಬಿಡುಗಡೆ ಕುರಿತು ಕನ್ನಡ ಚಿತ್ರರಂಗದ ಖ್ಯಾತ ನಟ ಮತ್ತು ಈ ಸೇವೆಯ ಮುಖವಾಗಿರುವ ಪುನೀತ್ ರಾಜ್‌ಕುಮಾರ್, ಕನ್ನಡ ಚಿತ್ರರಂಗವನ್ನು ಒರಿಜಿನಲ್ ಕಥೆಗಳ ಮೂಲಕ ಶ್ರೀಮಂತ ಕನ್ನಡ ಸಂಸ್ಕೃತಿಯನ್ನು ಸಂಭ್ರಮಿಸುವ ಮೂಲಕ ಕನ್ನಡ ಚಿತ್ರರಂಗದ ನವೋದಯವನ್ನು ಕಾಣುತ್ತಿದ್ದೇವೆ.

ಇದು ನಮಗೆ ಉದ್ಯಮದಲ್ಲಿ ಯುವ ಪ್ರತಿಭೆಗಳನ್ನು ಹಾಗೂ ಸೃಜನಶೀಲತೆಯನ್ನು ಉತ್ತೇಜಿಸುವ ಈ ಪ್ರವೃತ್ತಿ ಕಾಣುವುದು ನಮಗೆ ಹೆಮ್ಮೆ ತರುತ್ತದೆ. ಟಾಟಾ ಸ್ಕೈ ಕನ್ನಡ ಸಿನಿಮಾ ರೀತಿಯ ಪ್ಲಾಟ್‌ಫಾರಂ ಈ ಸಮಯದಲ್ಲಿ ಎಲ್ಲ ಹೊಸ ಹಾಗೂ ಹಳೆಯ ಚಿತ್ರಗಳನ್ನು ಒಗ್ಗೂಡಿಸಿ ದೇಶಾದ್ಯಂತ ಕನ್ನಡ ಮಾತನಾಡುವ ವೀಕ್ಷಕರಿಗೆ ಕೊಂಡೊಯ್ಯುತ್ತಿರುವುದು ಚಿತ್ರೋದ್ಯಮಕ್ಕೆ ಮತ್ತಷ್ಟು ಉತ್ತೇಜನ ನೀಡುತ್ತದೆ ಎಂದರು.

ಟಾಟಾ ಸ್ಕೈ ಕನ್ನಡ ಸಿನಿಮಾ ಟಾಟಾ ಸ್ಕೈಗೆ ಪ್ರಾದೇಶಿಕ ಸಿನಿಮಾ ಸೇವೆಗಳ ವ್ಯಾಪ್ತಿಯನ್ನು ಅನಿಯಮಿತ ಹಾಗೂ ಅತ್ಯುತ್ತಮ ಗುಣಮಟ್ಟದ ಮನರಂಜನೆಯ ಮೂಲಕ ಸದೃಢಗೊಳಿಸಲಿದ್ದು ಪ್ರಾದೇಶಿಕ ಚಲನಚಿತ್ರ ಕಂಟೆಂಟ್‌ಗೆ ಹೆಚ್ಚುತ್ತಿರುವ ಜನಪ್ರಿಯತೆ ಮತ್ತು ಬೇಡಿಕೆಗೆ ಪೂರೈಸುತ್ತದೆ. ಈ ಪ್ರಯತ್ನದ ಭಾಗವಾಗಿ ಪ್ರಾದೇಶಿಕ ವ್ಯಾಪ್ತಿಯಲ್ಲಿ 7 ಸೇವೆಗಳು- ಟಾಟಾ ಸ್ಕೈ ಗುಜರಾತಿ ಸಿನಿಮಾ, ಟಾಟಾ ಸ್ಕೈ ತೆಲುಗು ಸಿನಿಮಾ, ಟಾಟಾ ಸ್ಕೈ ತಮಿಳು ಸಿನಿಮಾ, ಟಾಟಾ ಸ್ಕೈ ಭೋಜ್‌ಪುರಿ ಸನಿಮಾ, ಟಾಟಾ ಸ್ಕೈ ಬಾಂಗ್ಲಾ ಸಿನಿಮಾ, ಟಾಟಾ ಸ್ಕೈ ಪಂಜಾಬ್ ದೆ ರಂಗ್ ಮತ್ತು ಟಾಟಾ ಸ್ಕೈ ಮರಾಠಿ ಸಿನಿಮಾ ಒಳಗೊಂಡಿದೆ. ಟಾಟಾ ಸ್ಕೈ ಕನ್ನಡ ಸಿನಿಮಾ ಈಗ ಎಲ್ಲ ಚಂದಾದಾರರಿಗೆ  1602(ಎಸ್‌ಡಿ)ಯಲ್ಲಿ ತಿಂಗಳಿಗೆ ಕನಿಷ್ಠ ವೆಚ್ಚ 45 ರೂ.ಗಳಲ್ಲಿ ದೊರೆಯುತ್ತದೆ. ಈ ಸೇವೆ ಟಾಟಾ ಸ್ಕೈನ ಮೊಬೈಲ್ ಆಪ್‌ನಲ್ಲೂ ದೊರೆಯುತ್ತದೆ ಎಂದು ಸಂಸ್ಥೆಯ ಏರಿಯ ಮ್ಯಾನೇಜರ್ ಸಂದೀಪ್ ಶೆಟ್ಟಿ ಮಾಣಿಬೆಟ್ಟು ತಿಳಿಸಿದರು.

Comments are closed.