ಕಿತ್ತಲೆ ಹಣ್ಣಿನ ರಸ ಕುಡಿಯಿರಿ
ಕಿತ್ತಲೆ ಹಣ್ಣಿನಲ್ಲಿ ಹಲವಾರು ಔಷಧಿಗುಣಗಳು ಅಡಗಿದೆ. ಕಿತ್ತಲೆ ಹಣ್ಣಿನ ರಸವನ್ನು ವಿಷಮಶೀತಜ್ವರ ಮತ್ತು ಕ್ಷಯರೋಗದವರಿಗೆ ಕೊಟ್ಟರೆ ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ.
ಕಿತ್ತಲೆ ಹಣ್ಣಿನ ರಸವನ್ನು ಗರ್ಬಿಣಿಯರಿಗೆ ಕುಡಿಸಿದರೆ ಹೆರಿಗೆ ಸುಲಭವಾಗುತ್ತದೆ.
ಕಿತ್ತಲೆ ಹಣ್ಣಿನ ಸಿಪ್ಪೆಯನ್ನು ಮೊಡವೆಗಳ ಮೇಲೆ ಉಜ್ಜಿದರೆ ಮಡುವೆಗಳು ಮಾಯವಾಗುತ್ತವೆ, ಹಾಗೂ ಮುಖದ ಮೇಲಿನ ಕಪ್ಪು ಕಲೆಗಳನ್ನು ತೆಗೆದು ಕಾಂತಿಯುಕ್ತವಾಗುತ್ತದೆ ಮುಖ.
ವೀಳೆದೆಲೆ ತಿನ್ನಿ . ಆರೋಗ್ಯ ಕಾಪಾಡಿಕೊಳ್ಳಿ
ನಿತ್ಯ ವೀಳೆದೆಲೆ ತಿಂದರೆ ಹಲ್ಲಿನ ನೋವು ಕಾಡಿಮೆ ಆಗುವುದು. ಎಲೆಯ ಜೊತೆಗೆ ಅಡಿಕೆ ಸುಣ್ಣ ತಿಂದರೆ ತಿಂದ ಆಹಾರ ಜೀರ್ಣ ಶಕ್ತಿ ಜಾಸ್ತಿ ಆಗಿ ಬಾಯಿಯ ದುರ್ನಾತ ಇಲ್ಲವಾಗುತ್ತದೆ.
ಅದಕ್ಕೂ ಮುಖ್ಯವಾಗಿ ಯಾವುದಾದರೂ ಆಯುಧಗಳಿಂ ದ ಗಾಯವಾದರೆ ವೀಳೆದೆಲೆಯನ್ನು ನಿಂಬೆ ಯ ರಸದ ಜೊತೆ ಅರೆದು ಗಾಯಕೆ ಹಚ್ಚಿದರೆ ಗಾಯ ವಾಸಿಯಾಗುತ್ತದೆ.
ಕಫ ಕ್ಕೆ ರಾಮ ಬಾಣ
ಅನಾನಸ್ ಹಣ್ಣು ಬಹು ಉಪಯೋಗಿ
ಅನಾನಸ್ ಹಣ್ಣಿನಲ್ಲಿ ಔಷಧಿಗುಣಗಳು ಇವ. ಉರಿ ಮೂತ್ರದ ಸಮಸ್ಯೆ ಇದ್ದರೆ ಹಣ್ಣಿನ ರಸ ಕುಡಿದರೆ ಉಪಶಮನವಾಗುತ್ತದೆ.
ಅರಿಶಿನ ಕಾಮಾಲೆ ಇದ್ದವರು ಅನಾನಸ್ ಹಣ್ಣಿನ ಹೋಳುಗಳನ್ನು ಜೇನು ತುಪ್ಪದಲ್ಲಿ ನೆನೆಹಾಕಿ ಐದನೇ ದಿನದಿಂದ ದಿನಕ್ಕೆ ಎರಡು ಸಲ ತಿಂದರೆ ಕೆಲವೇ ದಿನಗಳಲ್ಲಿ ಖಾಯಿಲೆ ವಾಸಿಯಾಗುತ್ತದೆ.
ಹೊಟ್ಟೆ ತೊಳೆಸುವುದು, ಮೂಲವ್ಯಾಧಿ ಹಾಗೂ ತಲೆಸುತ್ತುವುದು ಇದ್ದರೆ, ಹಣ್ಣಿನ ರಸದ ಜೊತೆ ಕಾಳು ಮೆಣಸಿನ ಪುಡಿ, ಅಡಿಗೆ ಉಪ್ಪು ಬೆರಸಿಕೊಂಡು ಕುಡಿದರೆ ಗುಣವಾಗುವುದು.
ಕಬ್ಬಿನ ರಸ ಕುಡಿದರೆ…..
ನಿತ್ಯವೂ ಕಬ್ಬಿನ ರಸ ಕುಡಿದರೆ ಕ್ರಿಯಾ ಶಕ್ತಿ ಅಭಿವೃದ್ಧಿಯಾಗುತ್ತದೆ. ಜೊತೆಗೆ ಸಂಭೋಗಶಕ್ತಿಯು ವೃದ್ಧಿಯಾಗುತ್ತದೆ.
ಕಬ್ಬಿನ ರಸದ ಜೊತೆಗೆ ನಿಂಬೆರಸ, ಹಸಿ ಶುಂಠಿ, ಸೇರಿಸಿ ಕುಡಿದರೆ ಜಠರದ ಹುಣ್ಣು ಉರಿಮೂತ್ರ ನಿವಾರಣೆ ಆಗುತ್ತದೆ.
ಕಬ್ಬನ್ನು ಹಲ್ಲುಗಳಿಂದ ಸಿಗಿದು ತಿಂದರೆ ವಸಡುಗಳು ಗಟ್ಟಿ ಆಗುತ್ತವೆ. ಹಲ್ಲುಗಳು ಹೊಳೆಯುತ್ತವೆ ಆರೋಗ್ಯವೂ ವೃದ್ಧಿಆಗುತ್ತದೆ.
ಜೀರಿಗೆ :ಅಡುಗೆಮನೆಯಲ್ಲಿ ಕುಳಿತ ಅಪರೂಪದ ಮನೆಯ ಮದ್ದು. ಒಂದು ಟೀ ಚಮಚ ಹುಣಸೇಗೊಜ್ಜಿನಲ್ಲಿ ಅರ್ಧ ಚಮದಷ್ಟು ಜೀರಿಗೆ ಪುಡಿಯನ್ನು ಕಲಸಿ ಜೇನುತುಪ್ಪದ ಜೊತೆ ಕುಡಿದರೆ, ಆಮಶಂಕೆ ಹಾಗೂ ಅರಿಶಿನ ಕಾಮೆಯೂ ನಿವಾರಣೆ ಆಗುತ್ತದೆ.
ಬಾಯಿಂದ ಬರುವ ದುರ್ವಾಸನೆಯನ್ನು ದೂರಮಾಡಲು ಜೀರಿಗೆಯನ್ನು ಬಾಯಲ್ಲಿಹಾಕಿಕೊಂಡು ತಿನ್ನುವುದರಿಂದ ದುರ್ವಾಸನೆ ಕಡಿಮೆ ಆಗುತ್ತದೆ. ಜೊತೆಗೆ ಹಲ್ಲಿನ ನೋವು ಕಡಿಮೆ ಆಗುವುದು ಜೀರ್ಣಶಕ್ತಿ ವೃದ್ಧಿ ಆಗುವುದು.
ಜೀರಿಗೆ ಕಷಾಯಕ್ಕೆ ಹಾಲು, ಜೇನುತುಪ್ಪ, ಸೇರಿಸಿ ಬಸುರಿ ಹೆಣ್ಣು ಮಕ್ಕಳು ನಿತ್ಯ ಕುಡಿದರೆ ಎದೆ ಹಾಲು ವೃದ್ಧಿಯಾಗುತ್ತದೆ.
ಮ್ಮ ಊಟದಲ್ಲಿ ಸೊಪ್ಪು ಇದ್ದರೆ ಆರೋಗ್ಯಕ್ಕೆ ವೃದ್ಧಿ ಆಗುತ್ತದೆ. ಅದರಂತೆ ಈ ಪಾಲಾಕು ಸೊಪ್ಪಿನ ಉಪಯೋಗದಿಂದ ಮಲಬದ್ಧತೆ ನಿವಾರಣೆಗೆ ರಾಮಬಾಣ.
ಬಸಳೆ ಸೊಪ್ಪು ಬಳಸಿದರೆ ರಕ್ತ ಶುದ್ಧವಾಗುತ್ತದೆ. ರೋಗ ನಿರೋಧಗ ಶಕ್ತಿ ಹೆಚ್ಚಸಿತ್ತದೆ. ಮೂತ್ರ ಪಿಂಡಗಳ ಕೆಲಸಕ್ಕೆ ಹೆಚ್ಚಿನ ಶಕ್ತಿ ನೀಡುತ್ತದೆ.
Comments are closed.