ಮಂಗಳೂರು, ಡಿ.19: ಎನ್ಆರ್ಸಿ ಮತ್ತು ಸಿಎಎಗೆ ಸಂಬಂಧಿಸಿ ನಗರದಲ್ಲಿ ಪೊಲೀಸ್ ಮತ್ತು ಪ್ರತಿಭಟನಾಕಾರರ ಮಧ್ಯೆ ಗುರುವಾರ ನಡೆದ ಸಂಘರ್ಷದಲ್ಲಿ ಮಾಜಿ ಮೇಯರ್ ಕೆ. ಅಶ್ರಫ್ ಸಹಿತ ಐವರಿಗೆ ಗಾಯವಾಗಿದೆ.
ಬಂದರ್ನಲ್ಲಿ ಕೆ. ಅಶ್ರಫ್ರ ತಲೆಗೆ ಗಾಯವಾಗಿದೆ. ಈ ಮಧ್ಯೆ ಬಂದರ್ನ ಮುಸ್ಲಿಂ ಸೆಂಟ್ರಲ್ ಕಮಿಟಿಯ ಕಚೇರಿಯ ಬಳಿ ಪೊಲೀಸರು ನಡೆಸಿದ ಫೈರಿಂಗ್ನಲ್ಲಿ ಜಲೀಲ್, ನಿಝಾಮ್ ಸಹಿತ ಐದು ಮಂದಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ. ಎಲ್ಲರನ್ನೂ ಕೂಡಾ ಆಸ್ಪತ್ರೆಗೆ ದಾಖಲಿಸಲಾಗಿದೆ.
Comments are closed.