ಎಲ್ಲ ರೀತಿಯ ನೋವುಗಳಿಗೆ ಮನೆಯಿಂದಲೇ ಮಾಡಿ ನೋಡಿ ಮನೆಮದ್ದು ಬನ್ನಿ ಹಾಗಾದ್ರೆ ಅದೇನು ಅನ್ನೋದನ್ನ ತಿಳಿಯೋಣ. ಹಿಂದಿನ ಕಾಲದಲ್ಲಿ ಯಾವುದೇ ರೀತೀಯ ಕಾಯಿಲೆ ಬಂದರು ಸಹ ಆಯುರ್ವೇದದ ಮೊರೆ ಹೋಗುತ್ತಿದ್ದರು ಆದರೆ ಇಂದು ಕಾಲ ಬದಲಾದಂತೆ ಜನರು ಸಹ ಬದಲಾಗಿದ್ದಾರೆ ಸ್ವಲ್ಪ ನೋವು ಕಂಡುಬಂದರೂ ಸಹ ಡಾಕ್ಟರ್ ಬಳಿ ಓಡಿ ಹೋಗುತ್ತಾರೆ. ಅಂದರೆ ಇಂಗ್ಲಿಷ್ ಔಷಧಿಯ ಮೊರೆ ಹೋಗುತ್ತಾರೆ ಆದರೆ ಸಣ್ಣ ಪುಟ್ಟ ನೋವಿಗೂ ಸಹ ಮಾತ್ರೆಗಳನ್ನು ತಗೆದುಕೊಳ್ಳದೆ ಕೆಲವೊಂದು ಮನೆ ಮದ್ದುಗಳನ್ನು ಮಾಡಬಹುದು ಹಾಗಾದ್ರೆ ಆ ಮನೆ ಮದ್ದು ಯಾವುದು ಬನ್ನಿ ನೋಡೋಣ. ಪ್ರತಿದಿನದ ಪರಿಶ್ರಮದಿಂದ ವಿಶ್ರಾಂತಿ ಇಲ್ಲದ ಕೆಲಸಗಳಿಂದ ಕೆಲವೊಂದು ನೋವುಗಳು ಕಾಣಿಸಿಕೊಳ್ಳುವುದು ಸಹಜ ಆದರೆ ಚಿಕ್ಕ ಪುಟ್ಟ ನೋವುಗಳಿಗೆ ನೋವು ನಿವಾರಕ ಮಾತ್ರೆಗಳನ್ನು ಸೇವಿಸುವುದು ಅಪಾಯಕಾರಿ ಅದರಿಂದ ನಮ್ಮ ದೇಹಕ್ಕೆ ಅಪಾಯವಿದೆ.
ಇಂತಹ ಸಣ್ಣ ಪುಟ್ಟ ನೋವುಗಳಿಗೆ ಮನೆಯಲ್ಲೇ ಇರುವ ವಸ್ತುಗಳಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳಿಲ್ಲದ ಹಾಗೂ ದೇಹಕ್ಕೆ ಶಕ್ತಿ ನೀಡುವ ಮನೆ ಮದ್ದುಗಳನ್ನು ನಾವೇ ತಯಾರಿಸಿ ಬಳಸಬಹುದು. ಹಾಗಾದ್ರೆ ಆ ನೋವುಗಳು ಯಾವುವು ಮತ್ತು ಅದಕ್ಕೆ ಮನೆ ಮದ್ದುಗಳು ಯಾವುವು ಎನ್ನುವುದನ್ನು ತಿಳಿಯೋಣ.
ಮೈಕೈ ನೋವಿದ್ದರೆ ಬಿಸಿ ಹಾಲಿಗೆ ಅರಿಶಿಣ ಪುಡಿ ಸೇರಿಸಿ ಕುಡಿಯಬೇಕು. ಹಾಗೇನೇ ಹಲ್ಲು ನೋವಿನಿಂದ ನಿವೇನಾದ್ರು ಬಳಲುತ್ತಿದ್ದರೆ ಲವಂಗದ ಎಣ್ಣೆಯನ್ನು ಬಳಸಬೇಕು ಇಲ್ಲವೇ ಮನೆಯಲ್ಲಿರುವ ಲವಂಗವನ್ನು ಸ್ವಲ್ಪ ಪುಡಿ ಮಾಡಿ ನೋವಿರುವ ಹಲ್ಲಿನ ಮೇಲೆ ಇಡಬೇಕು ಕ್ರಮೇಣ ಅದರ ರಸ ಹಲ್ಲಿಗೆ ಇಳಿದು ನೋವು ಮಾಯವಾಗುತ್ತದೆ.
ಸಂಧಿವಾತ ಇದ್ದವರು ಹಸಿ ಶುಂಠಿ ಬಳಸಿದ ಗ್ರೀನ್ ಟೀ ಸೇವಿಸುವುದು ಒಳ್ಳೆಯದು ಹಾಗೆಯೇ ನಿಮಗೇನಾದರೂ ತಲೆ ನೋವು ಇದ್ದರೆ ಪುದಿನ ಎಣ್ಣೆಯನ್ನು ತಲೆಗೆ ಹಚ್ಚಿ 5 ನಿಮಿಷ ಮಸಾಜ್ ಮಾಡಬೇಕು ಇದರಿಂದ ಒಳ್ಳೆಯ ರಿಲೀಫ್ ಸಿಗುತ್ತದೆ ಹಾಗೂ ನೋವು ಕೂಡ ಇಲ್ಲದಾಗುತ್ತದೆ.
ಇನ್ನು ಬೆನ್ನು ನೋವಿನಿಂದ ಸಂಕಟ ಪಡುವವರು ಮೊಟ್ಟೆ, ಹಾಲು ಹಸಿ ತರಕಾರಿ ಸೊಪ್ಪು ಡ್ರಾಯ್ ಫ್ರೂಟ್ಸ್ ಸೇವಿಸಬೇಕು ಇದರಿಂದ ದೇಹಕ್ಕೆ ಒಳ್ಳೆಯ ಶಕ್ತಿ ಒದಗುವುದಲ್ಲದೆ ನಿಶಕ್ತಿ ಕಡಿಮೆ ಆಗಿ ಬೆನ್ನು ನೋವು ಹೋಗುತ್ತದೆ.
ಮಹಿಳೆಯರ ವಿಷಯಕ್ಕೆ ಬರುವುದಾದರೆ ಹೆಣ್ಣುಮಕ್ಕಳು ಪ್ರತಿ ತಿಂಗಳು ಅನುಭವಿಸುವ ಹೊಟ್ಟೆ ನೋವಿಗೆ ಆ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಅಲೋವೆರ ಜೆಲ್ ಗೆ ಸ್ವಲ್ಪ ಜೀರಿಗೆ ಪುಡಿ ಸಕ್ಕರೆ ಸೇರಿಸಿ ನಿರಂತರ 3 ದಿನಗಳ ಕಾಲ ಸೇವಿಸುವುದರಿಂದ ಹೊಟ್ಟೆಗೆ ತಂಪಾಗಿ ಹೊಟ್ಟೆ ನೋವು ಕಡಿಮೆ ಆಗುತ್ತದೆ.
ಹೀಗೆ ನಮ್ಮಲ್ಲಿರುವ ವಸ್ತುವನ್ನು ಬಳಸಿಕೊಂಡು ನಮ್ಮ ಆರೋಗ್ಯವನ್ನು ನಾವು ಕಾಪಾಡಿಕೊಳ್ಳಬಹುದು
Comments are closed.