ಕರ್ನಾಟಕ

ಹಿರಿಯ ಸಾಹಿತಿ ಪ್ರೊ.ಎಲ್.ಎಸ್.ಶೇಷಗಿರಿ ರಾವ್ ನಿಧನ

Pinterest LinkedIn Tumblr


ಬೆಂಗಳೂರು: ಕನ್ನಡ ಸಾರಸ್ವತ ಲೋಕದಲ್ಲಿ ಎಲ್.ಎಸ್.ಎಸ್. ಎಂದೇ ಚಿರಪಚಿತರಾಗಿದ್ದ ಸಾಹಿತಿ, ಪ್ರೊ.ಎಲ್.ಎಸ್.ಶೇಷಗಿರಿ ರಾವ್ ಇಂದು ನಿಧನರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು.

ಇವರು ಉಡುಪಿಯಲ್ಲಿ ನಡೆದ 74ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕನ್ನಡದ ಹೆಸರಾಂತ ವಿಮರ್ಶಕರೂ ಹೌದು. ನ್ಯಾಷನಲ್ ಬುಕ್ ಟ್ರಸ್ಟ್, ಕೇಂದ್ರ ಸಾಹಿತ್ಯ ಅಕಾಡೆಮಿಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿದ್ದಾರೆ. ರಾಷ್ಟ್ರೋತ್ಥಾನ ಬಳಗದ ಕಿರು ಹೊತ್ತಿಗೆಯ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಕನ್ನಡ ಪುಸ್ತಕ ಪ್ರಾಧಿಕಾರದ ಮೊದಲ ಅಧ್ಯಕ್ಷರು ಎಂಬ ಹೆಗ್ಗಳಿಕೆಯೂ ಇವರದ್ದು. ಇಂಗ್ಲಿಷ್ ಪ್ರಾಧ್ಯಾಪಕರಾಗಿಯೂ ಕನ್ನಡ ಕೈಂಕರ್ಯದಲ್ಲಿ ತಮ್ಮದೇ ಆದ ಛಾಪು ಒತ್ತಿದ್ದಾರೆ

ಎಲ್.ಎಸ್.ಎಸ್ ಕೃತಿಗಳು: ಸಾಮಾನ್ಯ ಮನುಷ್ಯ ಕಾದಂಬರಿ, ಫ್ರಾನ್ಸ್ ಕಾವ್ಯ, ವಿಲಿಯಮ್ ಶೇಕ್ಸ್‌ಪಿಯರ್, ಸಾಹಿತ್ಯ ಬದುಕು, ಸಾಹಿತ್ಯ ವಿಶ್ಲೇಷಣೆ, ಟಿ.ಪಿ.ಕೈಲಾಸಂ, ಕನ್ನಡ ಕೃತಿಗಳು, ಎ ಹಿಸ್ಟರಿ ಆಫ್ ಕನ್ನಡ ಲಿಟರೇಚರ್, ಇಂಟ್ರಡಕ್ಶನ್ ಟು ಮಾಡರ್ನ್ ಕನ್ನಡ ಲಿಟರೇಚರ್, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಟಿ.ಪಿ.ಕೈಲಾಸಂ ಕೃತಿಗಳನ್ನು ಆಂಗ್ಲದಲ್ಲಿ ಬರೆದಿದ್ದಾರೆ.

ಇವರಿಗೆ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಅನಕೃ ಪುರಸ್ಕಾರ, ಬಿ.ಎಂಶ್ರೀ ಪುರಸ್ಕಾರಗಳು ಸಂದಿವೆ.

Comments are closed.