ರಾಷ್ಟ್ರೀಯ

ಏರ್‌ಟೆಲ್‌ ತೆಕ್ಕೆಗೆ ಬಂದ 1ಕೋಟಿ 20 ಲಕ್ಷ 4ಜಿ ಬಳಕೆದಾರರು

Pinterest LinkedIn Tumblr


ಹೊಸದಿಲ್ಲಿ: ಭಾರ್ತಿ ಏರ್‌ಟೆಲ್‌ ಕಂಪೆನಿಯ ಬಳಕೆದಾರರ ಸಂಖ್ಯೆ ಹೆಚ್ಚಾಗಿದ್ದು, ಅಕ್ಟೋಬರ್‌-ನವೆಂಬರ್‌ ಅವಧಿಗೆ ಸುಮಾರು 1ಕೋಟಿ 20 ಲಕ್ಷ 4 ಜಿ ಚಂದಾದಾರರನ್ನು ಕಂಪೆನಿ ಹೊಂದಿದೆ ಎಂದು ಟೆಲಿಕಾಂ ರೆಗ್ಯುಲೇಟರಿ ಆಫ್ ಅಥಾರಿಟಿ ಇಂಡಿಯಾ ಲಿಮಿಟೆಡ್‌ (ಟ್ರಾಯ್‌) ತಿಳಿಸಿದೆ.

ಅಕ್ಟೋಬರ್‌ನಲ್ಲಿ ಕೇವಲ 5 ಕೋಟಿ 4 ಜಿ ಗ್ರಾಹಕರನ್ನು ಒಳಗೊಂಡಿದ್ದ ಭಾರ್ತಿ ಏರ್‌ಟೆಲ್‌ ಕಂಪನಿ ನವೆಂಬರ್‌ನ ವೇಳೆಗೆ ಸುಮಾರು 7 ಲಕ್ಷ ನೂತನ ಬಳಕೆದಾರರನ್ನು ಹೊಂದುವ ಮೂಲಕ ತನ್ನ ಗ್ರಾಹಕ ವ್ಯಾಪ್ತಿಯನ್ನು ವಿಸ್ತಾರಿಸಿಕೊಂಡಿದೆ.

ಇದು ನಿಗದಿತ ಮಾಸಿಕ ಸರಾಸರಿ 1.5 ಕೋಟಿ ಗಿಂತ ಐದು ಪಟ್ಟು ಹೆಚ್ಚಾಗಿದೆ ಎಂದು ಭಾರ್ತಿ ಏರ್‌ಟೆಲ್‌ ಕಾರ್ಯನಿರ್ವಾಹಕ ಮೂಲಗಳು ತಿಳಿಸಿವೆ.

ಒಟ್ಟಾರೆ ಸೆಪ್ಟೆಂಬರ್‌ ತಿಂಗಳ ಅಂತ್ಯದ ವೇಳೆಗೆ ಕಂಪೆನಿಯು 355.2 ಮಿಲಿಯನ್‌ 4 ಜಿ ಬಳಕೆದಾರರನ್ನು ಹೊಂದಿದ್ದು, ಪ್ರತಿಸ್ಪರ್ಧಿ ಜಿಯೋಗಿಂತ ಹಿಂದೆ ಉಳಿದಿತ್ತು. ಆದರೆ ನವೆಂಬರ್‌ ವೇಳೆಗೆ ಏರ್‌ಟೆಲ್‌ ಒಟ್ಟು 1 ಕೋಟಿ 20 ಲಕ್ಷ 4 ಜಿ ಬಳಕೆದಾರರನ್ನು ಹೊಂದುವ ಗಣನೀಯ ಸಾಧನೆ ಮಾಡಿದೆ. ಸೆಪ್ಟೆಂಬರ್‌ ಅಂತ್ಯದ ವೇಳೆಗೆ ವೊಡಾಫೋನ್‌ ಐಡಿಯಾ 112.17 ಮಿಲಿಯನ್‌ 4 ಜಿ ಬಳಕೆದಾರರನ್ನು ಹೊಂದಿದೆ ಎಂದು ಟ್ರಾಯ್‌ ಹೇಳಿದೆ.

Comments are closed.