ನವದೆಹಲಿ: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಅಪಾರ ಸಂಖ್ಯೆಯಲ್ಲಿ ಹೊಸ ಪ್ರತಿಭೆಗಳ ಹೆಸರುಗಳನ್ನು ಭೂಮಿಯಿಂದ ಆಗಸದೆತ್ತರಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದೆ. ಇದೇ ರೀತಿಯಲ್ಲಿ ಓರ್ವ ಟಿಕ್ ಟಾಕ್ ಸೆಲಿಬ್ರಿಟಿ ತನ್ನ ಟ್ಯಾಲೆಂಟ್ ಮೂಲಕ ಲಕ್ಷಾಂತರ ಅಭಿಮಾನಿಗಳ ಹೃದಯಕ್ಕೆ ಲಗ್ಗೆ ಇಟ್ಟಿದ್ದಾಳೆ. ಹೌದು, ನಾವು ಇಲ್ಲಿ ಮಾತನಾಡುತ್ತಿರುವುದು ಖ್ಯಾತ ಟಿಕ್ ಟಾಕ್ ಸ್ಟಾರ್ ಆಶ್ನಾ ಹೆಗ್ಡೆ ಬಗ್ಗೆ. ಅಷ್ಟೇ ಅಲ್ಲ ಆಶ್ನಾ ಹೆಗ್ಡೆ ಕೂಡ ಅಪಾರ ಸಂಖ್ಯೆಯಲ್ಲಿ ಫ್ಯಾನ್ ಫಾಲೋಯಿಂಗ್ ಹೊಂದಿದ್ದಾರೆ. ಸದ್ಯ ಮುಂಬೈ ಮೂಲದ ಈ ಬೆಡಗಿ ಮೂರು ಮಿಲಿಯನ್ ಗೂ ಅಧಿಕ ಫ್ಯಾನ್ ಫಾಲ್ಲೋಯಿಂಗ್ ಹೊಂದಿದ್ದು, ಅವರ ಕನಸಿಗೆ ಕಿಚ್ಚೆರಚಿದ್ದಾಳೆ.
ಜನರ ಈ ಪ್ರೀತಿಗೆ ಮನ್ನಣೆ ನೀಡಿರುವ ಝೀ ಮ್ಯೂಸಿಕ್ ಕಂಪನಿ ಆಶ್ನಾ ಹಾಗೂ ಮಾನವ್ ಛಾಬ್ರಾ ಅವರನ್ನು ಒಂದು ಸುಂದರ ಹಾಡಿನಲ್ಲಿ ಕಾಸ್ಟ್ ಮಾಡಿದೆ. ‘ಕಾಲ್ ವೇಟಿಂಗ್’ ಹೆಸರಿನ ಈ ಹಾಡು ಬಿಡುಗಡೆಯಾದ ಕೇವಲ ನಾಲ್ಕೇ ದಿನಗಳಲ್ಲಿ 7 ಲಕ್ಷಕ್ಕೂ ಅಧಿಕ ಬಾರಿಗೆ ವೀಕ್ಷಣೆಗೆ ಒಳಗಾಗಿದೆ. ಆಶ್ನಾ ಕೂಡ ತಮ್ಮ ಈ ಹಾಡನ್ನು ಉತ್ತಮ ರೀತಿಯಲ್ಲಿ ಪ್ರಮೋಟ್ ಮಾಡುತ್ತಿದ್ದಾರೆ. ತಮ್ಮ ಈ ಹಾಡಿಗೆ ಸಿಕ್ಕಿರುವ ಬೆಂಬಲದಿಂದ ಆಶ್ನಾ ಹಾಗೂ ಮಾನವ್ ಇಬ್ಬರೂ ಕೂಡ ಹರ್ಷವ್ಯಕ್ತಪಡಿಸಿದ್ದಾರೆ.
ಸಿನೆರಾಗ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿ ನಿರ್ಮಾಣಗೊಂಡ ಈ ಹಾಡಿಗೆ ಇದರ ನಿರ್ಮಾಪಕ ಕಂಪನಿ ಜೀ ಮ್ಯೂಸಿಕ್ ಕಂಪನಿಗೆ ಅನುರಾಗ್ ಬೇಡಿ ಹಾಗೂ ಚಿರಾಗ್ ಅರೋರ ಬಿಸಿನೆಸ್ ಹೆಡ್ ಆಗಿದ್ದಾರೆ. ಈ ಹಾಡಿಗೆ ಸೋನಾ ಮಹಾಪಾತ್ರ ತಮ್ಮ ಸುಮಧುರ ಕಂಠ ನೀಡಿದ್ದಾರೆ.
Comments are closed.