ಮನೋರಂಜನೆ

ಮತ್ತೊಮ್ಮೆ ಖಳನಟನಾಗಿ ಅಬ್ಬರಿಸಲು ಗ್ರೀನ್ ಸಿಗ್ನಲ್ ಕೊಟ್ಟ ಕಿಚ್ಚ ಸುದೀಪ್!

Pinterest LinkedIn Tumblr


ಕಿಚ್ಚ ಸುದೀಪ್​ ಬಾಲಿವುಡ್, ಟಾಲಿವುಡ್, ಕಾಲಿವುಡ್​ ನಲ್ಲಿ ಈಗಾಗ್ಲೇ ಬಿಗ್​ ಸ್ಟಾರ್​ಗಳ ಎದುರು ನೆಗೆಟಿವ್ ಶೇಡ್​ನಲ್ಲಿ ಮಿಂಚಿದ್ದಾರೆ. ಮಾಡಿರೋ ಎಲ್ಲಾ ಸಿನಿಮಾಗಳಲ್ಲೂ ಸೂಪರ್​ ಪರ್ಫಾಮೆನ್ಸ್​ ಕೊಟ್ಟು, ಪರಭಾಷಾ ದಿಗ್ಗಜರು ಮತ್ತು ಸಿನಿಪ್ರಿಯರಿಂದ ಶಹಬ್ಬಾಸ್​ ಗಿರಿ ಗಿಟ್ಟಿಸಿಕೊಂಡಿದ್ದಾರೆ.

ಸದ್ಯ ದಬ್ಬಾಂಗ್ 3 ಸಿನಿಮಾದಲ್ಲಿ ವಿಲನ್ ಆಗಿ ಥಿಯೇಟರ್​ನಲ್ಲಿ ಸೌಂಡ್ ಮಾಡ್ತಿರುವಾಗ್ಲೇ, ಕಿಚ್ಚ ಮತ್ತೊಂದು ಚಿತ್ರಕ್ಕೆ ವಿಲನ್​ ಆಗೋಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ.

ಈ ಬಾರಿ ಕಿಚ್ಚ ವಿಲನ್​ ಆಗಿ ಟಕ್ಕರ್​ ಕೊಡೋದು ಕಾಲಿವುಡ್​ ಹೀರೋ ಸಿಂಬುಗೆ. ಈಗಾಗ್ಲೇ ತಮಿಳಿನಲ್ಲಿ ಇಳೆಯ ದಳಪತಿ ವಿಜಯ್​ ಎದುರು ಪುಲಿ ಸಿನಿಮಾದಲ್ಲಿ ವಿಲನ್​ ಆಗಿ ನಟಿಸಿದ್ದ , ಕಿಚ್ಚ ಇದೀಗ ಮತ್ತೊಮ್ಮೆ ತಮಿಳು ಚಿತ್ರರಂಗಕ್ಕೆ ಕಾಲಿಡ್ತಿದ್ದಾರೆ. ಸಿಂಬು ಅಭಿನಯದ ಹೊಸ ಸಿನಿಮಾ ಮಾನಾಡು ಚಿತ್ರದಲ್ಲಿ ಖಳನಟನಾಗೋಕ್ಕೆ ಗ್ರೀನ್​ ಸಿಗ್ನಲ್ ಕೊಟ್ಟಿದ್ದಾರಂತೆ.

ಮಂಗಾಥ , ಚೆನ್ನೈ 600028 ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದ ವೆಂಕಟ್ ಪ್ರಭು, ಮಾನಾಡು ಸಿನಿಮಾಗೇ ಆ್ಯಕ್ಷನ್ ಕಟ್ ಹೇಳ್ತಿದ್ದು,ಸುರೇಶ್ ಕಾಮಟ್ಟಿ ಬಂಡವಾಳ ಹಾಕ್ತಿದ್ದಾರೆ..ಇದೊಂದು ಬಿಗ್​ ಬಜೆಟ್ ಸಿನಿಮಾ ಆಗಿದ್ದು, ಈ ಹಿಂದೆ ಈ ಪಾತ್ರಕ್ಕೆ ಬಾಂಬೆ ಸಿನಿಮಾ ಖ್ಯಾತಿಯ ಅರವಿಂದ್ ಸ್ವಾಮಿ ಆಯ್ಕೆಯಾಗಿದ್ರು. ಆದ್ರೆ ಕಾರಣಾಂತರಗಳಿಂದ ಇದೀಗ ಈ ಪಾತ್ರ ಕಿಚ್ಚನ ಪಾಲಾಗಿದೆ..ಈಗಾಗ್ಲೇ ಚಿತ್ರತಂಡ ವಿಲನ್​ ಆಘಿ ಕಿಚ್ಚನನ್ನ ಫಿಕ್ಸ್​ ಮಾಡಿಕೊಂಡಿದ್ದಾರೆ. ಆದ್ರೆ ಈ ಬಗ್ಗೆ ಇನ್ನೇನಿದ್ರು ಕಿಚ್ಚ ಕನ್ಫರ್ಮೇಶನ್ ಕೊಡ್ಬೇಕಿದೆ. ಮುಂದಿನ ತಿಂಗಳಿನಿಂದ ಸಿನಿಮಾ ಶೂಟಿಂಗ್ ಶುರುವಾಗಲಿದೆ.

Comments are closed.